ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಣದ ಅಹಂಕಾರ ಮನುಷ್ಯನನ್ನು ಮುಗಿಸುತ್ತೆ:ಎಚ್ಡಿಡಿ

By Mahesh
|
Google Oneindia Kannada News

ಬೆಂಗಳೂರು, ಜೂನ್ 12: 'ಅಧಿಕಾರದ ದುರ್ಬಳಕೆ ಹಾಗೂ ಹಣದ ಅಹಂಕಾರ ಮನುಷ್ಯನನ್ನು ಮುಗಿಸುತ್ತೆ' ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ದೇವೇಗೌಡ ಅವರು ಮಾತನಾಡಿದರು.

ಪಕ್ಷ ನೀಡಿದ್ದ ವಿಪ್ ಉಲ್ಲಂಘಟನೆ ಮಾಡಿ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಹಾಕಿ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಎಂಟು ಶಾಸಕರನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ಜೆಡಿಎಸ್ ಅಮಾನತು ಮಾಡಿದೆ ಎಂದು ಜೆಡಿಎಸ್ ಮುಖಂಡ ವೈಎಸ್ ವಿ ದತ್ತಾ ಅವರು ನಿರ್ಣಯ ಓದಿದರು.

ಎಚ್ಡಿಕೆ ಪ್ರತಿಕ್ರಿಯೆ: 'ಮೂರು ವರ್ಷಗಳಿಂದ ಇವರನ್ನು ಸಹಿಸಿಕೊಂಡಿದ್ದೇವೆ. ಈ ಬಾರಿ ಕಠಿಣ ನಿರ್ಧಾರ ಕೈಗೊಳ್ಳಲಾಗುತ್ತದೆ' ಎಂದು ಹೇಳಿ ಪುತ್ರ ನಿಖಿಲ್ ಅವರ ಜಾಗ್ವಾರ್ ಸಿನಿಮಾ ಶೂಟಿಂಗ್ ಗಾಗಿ ಬಲ್ಗೇರಿಯಾಕ್ಕೆ ಎಚ್ ಡಿ ಕುಮಾರಸ್ವಾಮಿ ತೆರಳಿದ್ದಾರೆ.[ಜೆಡಿಎಸ್ ನ 8 ಭಿನ್ನಮತೀಯ ಶಾಸಕರಿಗೆ ಅಮಾನತು ಶಿಕ್ಷೆ]

JDS Meet
ದೇವೇಗೌಡ ಭಾಷಣದ ಮುಖ್ಯಾಂಶ:
ರಾಜ್ಯಸಭೆ ಚುನಾವಣೆಯಲ್ಲಿ ಫಾರೂಕ್ ಗೆ ವೋಟ್ ಹಾಕಿದ ಯಾವೊಬ್ಬ ಜೆಡಿಎಸ್ ಶಾಸಕರು ಒಂದು ಕಾಸನ್ನು ತಗೆದುಕೊಂಡಿಲ್ಲ. ಸೋತಿದ್ರೂ ಫಾರೂಕ್ ಪಕ್ಷದಲ್ಲೇ ಇರ್ತೇನೆ ಅಂದಿದ್ದಾರೆ. ಜೆಡಿಎಸ್ ಜೊತೆ ಗುರುತಿಸಿಕೊಂಡ ಫಾರೂಕ್ ವ್ಯಾಪಾರವನ್ನು ಧ್ವಂಸಗೊಳಿಸುತ್ತೇವೆ ಅಂತಾ ಬೆದರಿಕೆಯನ್ನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಕಿದ್ದಾರೆ. ಹಣದ ಅಹಂಕಾರ ಅವರಿಗೆ ಮುಳ್ಳಾಗಲಿದೆ ಎಂದರು.[ರಾಜ್ಯಸಭಾ ಚುನಾವಣೆ: ದೇಶಾದ್ಯಂತ ಮೇಲುಗೈ ಸಾಧಿಸಿದ ಬಿಜೆಪಿ]

ಫರೂಕ್ ಬಗ್ಗೆ ಪ್ರಶಂಸೆ: ಫರೂಕ್ ಸೋತ ನಂತರವೂ ನಮ್ಮ ಪಕ್ಷ ಬೆಳೆಸಲು ಸಹಾಯ ಮಾಡುತ್ತಿದ್ದಾರೆ. ಅವರ ನಂಬಿಕೆ ನನಗೆ ಇಷ್ಟವಾದ್ರು. ಫರೂಕ್ ಅವರಿಂದ ನಾನು ಚುಕ್ಕಾಸು ಪಡೆದಿಲ್ಲ. ನಮ್ಮ ಶಾಸಕರಿಗೂ ಹಣ ಕೊಟ್ಟಿಲ್ಲ. ಫರೂಕ್ ಇಂದು ನಮ್ಮ ಪಕ್ಷದಲ್ಲಿನ ಅಲ್ಪಸಂಖ್ಯಾತ ಸಮುದಾಯದ ಪ್ರತೀಕ. ಫರೂಕ್ ರನ್ನು ಅಭ್ಯರ್ಥಿಯನ್ನಾಗಿ ಜೆಡಿಎಸ್ ಹಣ ಮಾಡಲು ಹೊರಟಿರಲಿಲ್ಲ ಎಂದರು.

English summary
JDS chief HD Deve Gowda lambast rebel expelled 8 MLAs and Siddaramaiah GovernmentJDS chief and former prime minister HD Deve Gowda lambasted dissident 8 MLAs ಅನ್ದ್ blamed 'money minded' CM Siddaramaiah during the meeting of the party's legislators held on Sunday(Jun 12) to discuss the poll fallout and act against the rebel lawmakers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X