ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರದ ಕ್ಷೇತ್ರಕ್ಕೆ ಯುವ ಮುಖಂಡ ತೇಜಸ್ವಿ ಸೂರ್ಯ ಅಭ್ಯರ್ಥಿ?

By Mahesh
|
Google Oneindia Kannada News

ಬೆಂಗಳೂರು, ಮೇ 21: ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಜಯನಗರದಲ್ಲಿ ಈಗ ರಾಜಕೀಯ ಚಟುವಟಿಕೆಗಳು ಮತ್ತೆ ಆರಂಭಗೊಂಡಿವೆ. ಸಜ್ಜನ ರಾಜಕಾರಣಿ ಹಾಲಿ ಶಾಸಕ ವಿಜಯ್ ಕುಮಾರ್ ಅವರ ಅಕಾಲಿಕ ನಿಧನದಿಂದ ಮುಂದೂಡಲ್ಪಟ್ಟಿದ್ದ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಬಿಜೆಪಿ ತನ್ನ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿದೆ.

ಬಿಜೆಪಿ ಅಭ್ಯರ್ಥಿ ಯಾರು? ಎಂಬ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದು, ಇಂದು ಕಾಫಿಡೇಯಲ್ಲಿ ಕುಳಿತು ಸ್ಥಳೀಯ ಮುಖಂಡರು, ಕಾರ್ಪೊರೇಟರ್ ಗಳು ಚರ್ಚೆ ನಡೆಸಿದ್ದಾರೆ. ಜೂನ್ 11ರಂದು ಚುನಾವಣೆ ನಡೆಯಲಿದ್ದು, ಜೂನ್ 16ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಜಯನಗರದ ಅಭ್ಯರ್ಥಿ ಆಯ್ಕೆ, ಬಿಜೆಪಿ ಕಾರ್ಪೊರೇಟರ್‌ಗಳ ರಹಸ್ಯ ಸಭೆ!ಜಯನಗರದ ಅಭ್ಯರ್ಥಿ ಆಯ್ಕೆ, ಬಿಜೆಪಿ ಕಾರ್ಪೊರೇಟರ್‌ಗಳ ರಹಸ್ಯ ಸಭೆ!

ದಿವಂಗತ ವಿಜಯ್ ಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬಹುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಅನುಕಂಪದ ಆಧಾರದ ಮೇಲೆ ಆಯ್ಕೆ ಮಾತ್ರ ಬೇಡ, ಬೇರೆ ಅಭ್ಯರ್ಥಿ ಆಯ್ಕೆ ಮಾಡೋಣ ಎಂದು ಒಂದು ಪಂಗಡ ಆಗ್ರಹಿಸಿದೆ.

ಈ ನಡುವೆ ಮಾಜಿ ಮೇಯರ್, ಕಾರ್ಪೋರೇಟರ್ ಗಳ ನಡುವೆ ಹೊಸ ಹೆಸರೊಂದು ಕಾಣಿಸಿಕೊಂಡಿದ್ದು, ಆರೆಸ್ಸೆಸ್ ಬೆಂಬಲಿತ ಯುವ ಮುಖಂಡ ತೇಜಸ್ವಿ ಸೂರ್ಯ ಹೆಸರು ಮುಂಚೂಣಿಗೆ ಬಂದಿದೆ.

ಯುವ ಮುಖಂಡ ತೇಜಸ್ವಿ ಸೂರ್ಯ

ಯುವ ಮುಖಂಡ ತೇಜಸ್ವಿ ಸೂರ್ಯ

ಕರ್ನಾಟಕ ಬಿಜೆಪಿ ಆರಂಭಿಸಿದ ಬೆಂಗಳೂರು ಉಳಿಸಿ ಅಭಿಯಾನದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದ ತೇಜಸ್ವಿ ಸೂರ್ಯ(26) ಅವರು ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ವೃತ್ತಿಯಿಂದ ವಕೀಲರಾಗಿದ್ದಾರೆ. ಬಿಜೆಪಿಯ ರಾಜಕೀಯ ಚಟುವಟಿಕೆ, ಅಭ್ಯರ್ಥಿಗಳ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡರೂ ಸಕ್ರಿಯ ರಾಜಕಾರಣಕ್ಕಿಳಿದಿಲ್ಲ. ಆರೆಸ್ಸೆಸ್ ಮುಖಂಡರ ಸೂಚನೆಯಂತೆ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ.

Array

ಟ್ವಿಟ್ಟರ್ ನಲ್ಲಿ ತೇಜಸ್ವಿ ಸೂರ್ಯ ಪರ

ಟ್ವಿಟ್ಟರ್ ನಲ್ಲಿ ತೇಜಸ್ವಿ ಸೂರ್ಯ ಅವರಿಗೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಆದರೆ, ಟಿಕೆಟ್ ಸಿಗಲಿ ಬಿಡಲಿ, ಬಿಜೆಪಿ ಗೆಲುವಿಗಾಗಿ ದುಡಿಯೋಣ ಎಂದು ತೇಜಸ್ವಿ ಪ್ರತಿಕ್ರಿಯಿಸಿದ್ದಾರೆ.

ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕಿದೆ

ಜಯನಗರ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಗೆಲ್ಲಬೇಕಿದೆ. ಇದಕ್ಕಾಗಿ ಶ್ರಮಿಸೋಣ ಎಂದು ತೇಜಸ್ವಿ ಕರೆ ನೀಡಿದ್ದಾರೆ.

ಸಕ್ರಿಯ ರಾಜಕಾರಣಿಯಾಗಿ

ಸಕ್ರಿಯ ರಾಜಕಾರಣಿಯಾಗಿ ಎಂದು ಅಭಿಮಾನಿಗಳು ಕೇಳಿಕೊಂಡಿದ್ದಾರೆ. ಅವಕಾಶ ಸಿಕ್ಕರೆ ಜನಸೇವೆಗೆ ಸಿದ್ಧ ಎಂದು ತೇಜಸ್ವಿ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿಯಾರು?

ಬಿಜೆಪಿಯಿಂದ ಸಿ.ಕೆ.ರಾಮಮೂರ್ತಿ, ಎಸ್.ಕೆ.ನಟರಾಜ್, ತಾರಾ ಅನುರಾಧ, ತೇಜಸ್ವಿನಿ ಅನಂತ್ ಕುಮಾರ್ ಹೆಸರು ಇಲ್ಲಿ ತನಕ ಕೇಳಿ ಬಂದಿದೆ. ಸದ್ಯದ ಮಾಹಿತಿಯಿಂದ ಸಿಕೆ ರಾಮಮೂರ್ತಿ ಅಥವಾ ಎಸ್ ಕೆ ನಟರಾಜ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ.

English summary
Jayanagar Assembly Elections 2018 : BJP youth wing General Secretary Tejaswi Surya name is doing round as probable candidate. If I get ticket I will do my best to serve people, We must make sure BJP win in both Jayanagar and Rajarajeshwari nagar said Tejaswi Surya replying to a tweet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X