ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯಾ, ಶಶಿಕಲಾ, ಸುಧಾಕರ್ ಎಲ್ರೂ ಪೇಷಂಟ್ಸ್

By Mahesh
|
Google Oneindia Kannada News

ಬೆಂಗಳೂರು, ಸೆ.29: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲುಪಾಲಾಗಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಕಣ್ಣು ಮಂಜಾಗುತ್ತಿದೆಯಂತೆ. ಅವರ ಗೆಳತಿ ಶಶಿಕಲಾ ಅವರಿಗೆ ತೀವ್ರವಾಗಿ ಹೊಟ್ಟೆನೋವು ಕಾಣಿಸಿಕೊಂಡಿದೆಯಂತೆ ಎಂಬ ಸುದ್ದಿಗಳು ಖಾಸಗಿ ಟಿವಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿವೆ. ಈ ಬಗ್ಗೆ ಪರಪ್ಪನ ಅಗ್ರಹಾರ ಜೈಲಿನ ಜೈಲರ್ ಗಳು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ, ನೀಡುವುದೂ ಇಲ್ಲ.

ತಮಿಳುನಾಡಿನ ಜನತೆ ಪಾಲಿನ 'ಅಮ್ಮ' ಜಯಲಲಿತಾ ಅವರಿಗೆ ಹುಷಾರಿಲ್ಲ ಎಂದು ಸುದ್ದಿ ಹಬ್ಬಿದ್ದರೆ ಈಗಗಾಲೇ ಉರಿಯುತ್ತಿರುವ ಕೆಂಡಕ್ಕೆ ತುಪ್ಪ ಸುರಿದ್ದಂತಾಗುತ್ತದೆ ಎಂಬ ಅರಿವು ನಮ್ಮ ಪೊಲೀಸರಿಗೆ ಇದೆ. ಅದರೆ, ಗಾಳಿಸುದ್ದಿಗಳನ್ನು ಅಲ್ಲಗೆಳೆಯಲಾಗಿದ್ದು, ಯಾವುದೇ ರೀತಿಯ ವೈದ್ಯಕೀಯ ನೆರವು ಬೇಕಾದರೂ ಬಯಲು ಬಂದೀಖಾನೆಯಲ್ಲೇ ಲಭ್ಯವಿದೆ. ಅಗತ್ಯಬಿದ್ದರೆ ಟೆಲಿಮೆಡಿಸನ್ ಸೇವೆಯೂ ಲಭ್ಯ ಎಂದು ಜೈಲಿನ ಅಧಿಕಾರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಸರಣಿ ಅಸ್ವಸ್ಥತೆಗೆ ಕಾರಣವೇನು?: ಜಯಲಲಿತಾ ಹಾಗೂ ಅವರ ಸಹಚರರು ಹೀಗೆ ಆಸ್ಪತ್ರೆ ಹಾದಿ ಹಿಡಿಯಲು ಜೈಲೂಟ ಕಾರಣ ಎನ್ನಲಾಗಿತ್ತು. ಅದರೆ, ಜಯಲಲಿತಾ ಅವರಿಗೆ ಮನೆಯಿಂದ ಊಟ ತರೆಸಿಕೊಳ್ಳಲು ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಈ ಕೆಲಸವನ್ನು ಪ್ರತಿನಿತ್ಯ ಜಯಾ ಅವರ ಆಪ್ತ ಸಹಾಯಕ ವೀರ ಪೆರುಮಾಳ್ ತಪ್ಪದೇ ಮಾಡುತ್ತಿದ್ದಾರೆ.

Jayalalithaa hospitalised, Sasikala rushed in to treat her

ದತ್ತು ಪುತ್ರ ಸುಧಾಕರ್ ಅವರಿಗೂ ಕೂಡಾ ಭಾನುವಾರ ಹೊಟ್ಟೆ ನೋವು, ಮೈಕೈ ನೋವಿಗೆ ಚಿಕಿತ್ಸೆ ನೀಡಲಾಗಿದೆ. ಸೋಮವಾರ ಶಶಿಕಲಾ, ಇಳವರಸಿ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ.

ಜೆ.ಜಯಲಲಿತಾ ಅವರು ಬೆನ್ನು ನೋವು, ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಅವರು ನಿಯಮಿತವಾಗಿ ಆಹಾರ ಸೇವಿಸುವುದು ಅನಿವಾರ್ಯವಾಗಿದೆ. ಭಾನುವಾರದಂದು ಅವರ ಆಪ್ತರು ಜಯಾ ಅವರಿಗಾಗಿ ವೀಲ್ಹ್ ಚೇರ್ ತಂದಿದ್ದರು. ಅದರೆ, ಅದನ್ನು ಜೈಲಿನೊಳಗೆ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿಲ್ಲ.

ಒಂದೊಮ್ಮೆ ನಿಯಮಿತವಾಗಿ ಆಹಾರ ಸೇವನೆ ಮಾಡದಿದ್ದರೆ, ಅವರ ಆರೋಗ್ಯದಲ್ಲಿ ಏರುಪೇರಾಗುವ ಎಲ್ಲ ಸಾಧ್ಯತೆಗಳಿದ್ದು, ಅವರು ಜೈಲೂಟ ನಿರಾಕರಿಸುತ್ತಿರುವುದರಿಂದ ಜೈಲು ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಆಗ್ರಹಿಸಿ ಜೈಲಿನಿಂದ ಹೊರಗಡೆ ಇರುವ ಆಸ್ಪತ್ರೆಗೆ ದಾಖಲಾಗಲು ಜಯಾ ಅಂಡ್ ಟೀಂ ತಯಾರಿ ನಡೆಸಿದೆಯೇ? ಎಂಬ ಪ್ರಶ್ನೆ ಎದ್ದಿದೆ. ಹೀಗಾದರೆ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.

ಜೈಲಿನತ್ತ ಗಣ್ಯರ ದಂಡು: ತಮಿಳುನಾಡಿನಿಂದ ಆಯ್ಕೆಯಾದ ರಾಜ್ಯಸಭಾ ಸದಸ್ಯೆ ಶಶಿಕಲಾ ಅವರು ಜಯಲಲಿತಾ ಅವರನ್ನು ಭೇಟಿ ಮಾಡಲು ಪರಪ್ಪನ ಅಗ್ರಹಾರ ಬಂದೀಖಾನೆಗೆ ದೌಡಾಯಿಸಿ ಬಂದರು. ಆದರೆ, ಜಯಲಲಿತಾ ಅವರನ್ನು ಭೇಟಿ ಮಾಡಲು ಅನುಮತಿ ಪತ್ರ ಇಲ್ಲದ ಕಾರಣ ಜೈಲು ಅಧಿಕಾರಿಗಳು ಜಯಲಲಿತಾ ಭೇಟಿಗೆ ಅವಕಾಶ ಕೊಡಲು ನಿರಾಕರಿಸಿದರು. ಇದೆ ರೀತಿ ನಟ, ರಾಜಕಾರಣಿ ಶರತ್ ಕುಮಾರ್ ಅವರಿಗೂ ಅನುಮತಿ ನಿರಾಕರಿಸಲಾಗಿದೆ.

English summary
Former Tamil Nadu Chief Minister Jayalalithaa has been admitted to hospital inside the Parappana Agrahara jail premise in Bangalore. It has been reported that Jayalalithaa had complained of blurring eyesight and increase of sugar level. Jayalalithaa's aide Shashikala also suffering stomach ache.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X