ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಲ್ಕು ದಿನದಲ್ಲಿ 200 ಬಡ ರೋಗಿಗಳ ಜೀವ ಉಳಿಸಿದ ಜಯದೇವ ವೈದ್ಯರು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 16: ನಗರದ ಹೆಮ್ಮೆಯ ಜಯದೇವ ಹೃದ್ರೋಗ ಆಸ್ಪತ್ರೆ ಮತ್ತೊಮ್ಮೆ ಬೆಂಗಳೂರಿನ ಜನ ಹೆಮ್ಮೆಯಿಂದ ಎದೆ ಉಬ್ಬಿಸುವ ಕಾರ್ಯ ಮಾಡಿದೆ.

ಮೈಸೂರು ದಸರಾ - ವಿಶೇಷ ಪುರವಣಿ

ಮೊದಲಿನಿಂದಲೂ ತಮ್ಮ ಅಪ್ರತಿಮ ಶುಶ್ರೂಷೆ ಹಾಗೂ ಬಡವರ ಪರ ಕಾಳಜಿಯಿಂದ ಹೆಸರಾಗಿರುವ ಜಯದೇವ ಹೃದ್ರೋಗ ಆಸ್ಪತ್ರೆಯು ಇದೀಗ ಸೇವೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು ಕೇವಲ 4 ದಿನದಲ್ಲಿ 200 ಬಡರೋಗಿಗಳಿಗೆ ಉಚಿತವಾಗಿ ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.

ವರದಕ್ಷಿಣೆ ಕಿರುಕುಳಕ್ಕೆ ಬಿಬಿಎಂಪಿ ಆಸ್ಪತ್ರೆ ಡಾಕ್ಟರ್ ಅಶ್ವಿನಿ ಬಲಿ? ವರದಕ್ಷಿಣೆ ಕಿರುಕುಳಕ್ಕೆ ಬಿಬಿಎಂಪಿ ಆಸ್ಪತ್ರೆ ಡಾಕ್ಟರ್ ಅಶ್ವಿನಿ ಬಲಿ?

ಹೌದು, ಕೇವಲ ನಾಲ್ಕೇ ದಿನದಲ್ಲಿ 200 ರೋಗಿಗಳ ಆಂಜಿಯೋಪ್ಲಾಸ್ಟಿಯನ್ನು ಸಮರೋಪಾಧಿಯಲ್ಲಿ ಮಾಡಿ ಅಷ್ಟೂ ಜನರ ಜೀವ ಉಳಿಸಿದ್ದಾರೆ. ಇವರ ಈ ಸಾಧನೆ ಹೊಸ ಮೈಲಿಗಲ್ಲಾಗಿದೆ.

Jayadeva hospital did 200 free angioplasty operations in 4 days

ಜಯದೇವ ಆಸ್ಪತ್ರೆಯು ಡಾ.ಗೋವಿಂದರಾಜು ಸುಬ್ರಹ್ಮಣಿ ಹಾರ್ಟ್‌ ಫೌಂಡೇಶನ್‌ ಹಾಗೂ ಅಮೆರಿಕದ ಮೆಡ್ಟ್ರಾನಿಕ್ ವ್ಯಾಸ್ಕುಲರ್ ಡಿವಿಷನ್ ಅವರ ಸಹಭಾಗಿತ್ವದಲ್ಲಿ 200 ಜನರಿಗೆ ಆಪರೇಷನ್ ಮಾಡಿ ಸ್ಟಂಟ್ ಅಳವಡಿಸಿದೆ.

40 ವರ್ಷದ ಬಳಿಕ ಮಹಿಳೆಯರಿಗೆ ಮ್ಯಾಮೊಗ್ರಾಮ್ ಟೆಸ್ಟ್‌ ಕಡ್ಡಾಯ: ಸಲಹೆ 40 ವರ್ಷದ ಬಳಿಕ ಮಹಿಳೆಯರಿಗೆ ಮ್ಯಾಮೊಗ್ರಾಮ್ ಟೆಸ್ಟ್‌ ಕಡ್ಡಾಯ: ಸಲಹೆ

ಉಚಿತವಾಗಿ ಸ್ಟಂಟ್‌ ಅಳವಡಿಸಿಕೊಂಡ ಎಲ್ಲ 200 ರೋಗಿಗಳೂ ಸಹ ಬಡವರೇ ಆಗಿದ್ದರು ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಸಿ.ಎನ್.ಮಂಜುನಾಥ ಅವರು ಹೇಳಿದ್ದಾರೆ. ಈ ರೋಗಿಗಳಲ್ಲಿ ನಮ್ಮ ಆಸ್ಪತ್ರೆಯ ಜೊತೆಗೆ ಹೊರ ರಾಜ್ಯದ ಕೆಲವು ರೋಗಿಗಳೂ ಇದ್ದರು.

Jayadeva hospital did 200 free angioplasty operations in 4 days

ಈ ಬೃಹತ್ ಕಾರ್ಯಾಚರಣೆಯಲ್ಲಿ ಏಳು ಕ್ಯಾಥ್ ಲ್ಯಾಬ್‌ಗಳು, 75 ನುರಿತ ವೈದ್ಯರು ಹಾಗೂ ತಂತ್ರಜ್ಞರು, ಹಲವು ನರ್ಸ್‌ಗಳು, ಡಿ ದರ್ಜೆ ನೌಕರರು ಸತತವಾಗಿ ಕೆಲವ ಮಾಡಿ ಇಷ್ಟೂ ಆಪರೇಷನ್‌ಗಳು ಯಶಸ್ವಿ ಆಗಲು ಸಹಕರಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮುಕ್ವೇಜ್ ಆಸ್ಪತ್ರೆಗೆ ಬರುತ್ತಿದ್ದವರ ಮೈ ಮೇಲೆ ಬಟ್ಟೆಯೇ ಇರ್ತಿರಲಿಲ್ಲ ಮುಕ್ವೇಜ್ ಆಸ್ಪತ್ರೆಗೆ ಬರುತ್ತಿದ್ದವರ ಮೈ ಮೇಲೆ ಬಟ್ಟೆಯೇ ಇರ್ತಿರಲಿಲ್ಲ

ಇತ್ತೀಚೆಗಷ್ಟೆ ಡಾ.ಸಿ.ಎನ್‌.ಮಂಜುನಾಥ ಅವರು 'ವೈದ್ಯರು ಸೇವೆ ಮಾಡುವ ಅವಶ್ಯಕತೆ' ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ವಿಡಿಯೋ ವೈರಲ್ ಆಗಿ ಭಾರಿ ಮನ್ನಣೆ ಗಳಿಸಿತ್ತು. ಈಗ ಅವರು ಅದನ್ನು ಮತ್ತೊಮ್ಮೆ ಮಾಡಿ ತೋರಿಸಿದ್ದಾರೆ.

English summary
Doctors of Jayadeva heart hospital of Bengaluru did 200 angioplasty operations in just four days. They insert stunt to 200 patients for free of cost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X