ಜಯಾಗೆ ಅನಾರೋಗ್ಯ: ಬೆಂಗಳೂರು 'ಸೇಫ್' ಎಂದ ಪೊಲೀಸರು

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 05: ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಅನಾರೋಗ್ಯ ಕುರಿತಂತೆ ಬೆಂಗಳೂರಿನಲ್ಲಿರುವ ತಮಿಳರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರಿನ ಹಲವೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ನಗರ ಸುರಕ್ಷಿತವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಹೇಳಿದ್ದಾರೆ.

25 ಪ್ಲಾಟೂನ್ಸ್, 250 ಹೊಯ್ಸಳ ವಾಹನಗಳು, ಚೀತಾ ವಾಹನಗಳು ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿವೆ. ಯಾವುದೇ ರೀತಿ ದೂರುಗಳಿದ್ದರೆ, ಅಹಿತಕರ ಘಟನೆ ಕಂಡು ಬಂದರೆ, ಸುಳ್ಳು ಸುದ್ದಿ ಕೇಳಿಬಂದರೂ ಡಯಲ್-100, ಫೇಸ್ ಬುಕ್ BANGALURU CITY POLICE ಮತ್ತು ಬೆಂಗಳೂರು ಪೊಲೀಸರ ವಾಟ್ಸಪ್ ಸಂಖ್ಯೆ 9480801000 ಮಾಹಿತಿ ನೀಡಬಹುದು.[ಗ್ಯಾಲರಿ: ಜಯಲಲಿತಾ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥನೆ]

Jaya unwell Elaborate security arrangement has been made for City Safe. #BCP

ತಮಿಳರು ಹೆಚ್ಚು ವಾಸವಿರುವ ಬೆಂಗಳೂರಿನ ಪ್ರದೇಶಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 15,000 ಸಾವಿರ ಸಿವಿಲ್ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಹಲಸೂರು, ಶ್ರೀರಾಮಪುರ, ನೀಲಸಂದ್ರ, ವಿವೇಕನಗರ, ಕೋರಮಂಗಲ, ಮಡಿವಾಳ, ಮಂಗಮ್ಮನಪಾಳ್ಯ, ಅತ್ತಿಬೆಲೆ, ಹೊಸೂರು ರಸ್ತೆ,ಪರಪ್ಪನ ಅಗ್ರಹಾರ, ದೀಪಾಂಜಲಿ ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಹಿರಿಯ ಪೊಲೀಸ್ ಆರ್. ಹೀತೇ೦ದ್ರ, ಚರಣ್ ರೆಡ್ಡಿ, ಅಭೀಷೇಕ್ ಗೋಯೆಲ್, ಡಾ. ಎ೦.ಬಿ. ಬೋರಲಿ೦ಗಯ್ಯ. ಸ೦ದೀಪ್ ಪಾಟೀಲ್, ಪಿ. ಹರಿಶೇಖರನ್ ಅವರ ಹೆಸರಿನಲ್ಲಿಯೂ ಖಾತೆಗಳಿದ್ದು ಲಕ್ಷಾಂತರ ಫಾಲೋವರ್ಸ್ ಇದ್ದಾರೆ.
https://twitter.com/BlrCityPolice

https://twitter.com/CMofKarnataka

https://twitter.com/goyal_abhei

ನಾಗರಿಕರು ಟ್ವಿಟ್ಟರ್ ಖಾತೆ ವೀಕ್ಷಣೆ ಮಾಡುವುದರೊಂದಿಗೆ ಮಾಹಿತಿಯನ್ನು ನೀಡಿ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tamil Nadu CM Jayalalithaa unwell: Situation is very normal in Bengaluru city. It's appealed to public not to heed to unfounded rumour appeals Police via twitter.
Please Wait while comments are loading...