ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಮದುವೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 20: ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಮತ್ತೊಮ್ಮೆ ಮದುವೆಯಾಗಿದ್ದಾರೆ. ಉದ್ಯಮಿ, ಸಮಾಜಸೇವಕ ಮುತ್ತಪ್ಪ ರೈ ಅವರು ತಮ್ಮ ಬಿಡದಿಯ ನಿವಾಸದಲ್ಲಿ ಸೋಮವಾರ ಅನುರಾಧ ಎಂಬುವರನ್ನು ಸರಳವಾಗಿ ವರಿಸಿದ್ದಾರೆ.

ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮುತ್ತಪ್ಪ ರೈ ಹಾಗೂ ಅನುರಾಧಾರನ್ನು ಹರಸಲು ರೈ ಕುಟುಂಬ ಹಾಗೂ ಆಪ್ತರು ಮಾತ್ರ ಬಂದಿದ್ದರು.

2013 ಏಪ್ರಿಲ್ 28ರಂದು ಸಿಂಗಾಪುರದಲ್ಲಿ ರೈ ಅವರ ಮೊದಲ ಪತ್ನಿ ರೇಖಾ ರೈ ನಿಧನರಾಗಿದ್ದರು. ರೈ ಅವರಿಗೆ ರಾಕಿ, ರಿಕ್ಕಿ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರಿಗೂ ಮದುವೆಯಾಗಿದೆ.

Jaya Karnataka organisation Founder Nettala Muthappa Rai Weds Anuradha

ಸಕಲೇಶಪುರ ಮೂಲದ ಅನುರಾಧ ಅವರು ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಉದ್ಯಮಿಯಾಗಿರುವ ಅನುರಾಧ ಮತ್ತು ಮುತ್ತಪ್ಪ ರೈ ಮಧ್ಯೆ ಹಲವು ವರ್ಷಗಳ ಪರಿಚಯವಿತ್ತು. ರೈ ಮೊದಲ ಪತ್ನಿ ರೇಖಾ ಅವರ ನಿಧನದ ಬಳಿಕ ಇವರಿಬ್ಬರ ಆತ್ಮೀಯತೆ ಹೆಚ್ಚಾಗಿ, ದಂಪತಿಗಳಾಗಿದ್ದಾರೆ.

ಅನುರಾಧ ಅವರಿಗೂ ಇದು ಎರಡನೇ ಮದುವೆಯಾಗಿದ್ದು, ಅನುರಾಧಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅನುರಾಧಾ ಅವರ ಪತಿ ತೀರಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Businessman, Jaya Karnataka organisation founder, philanthropist Nettala Muthappa Rai marries Anuradha on Monday at his house in Bidadi.
Please Wait while comments are loading...