ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ಟ್ರಾಫಿಕ್ ನಿರ್ವಹಣೆಗೆ ಜಪಾನ್ ತಂತ್ರಜ್ಞಾನ

|
Google Oneindia Kannada News

Recommended Video

ಬೆಂಗಳೂರು-ಮೈಸೂರು ಟ್ರಾಫಿಕ್ ನಿರ್ವಹಣೆಗೆ ಬರಲಿದೆ ಜಪಾನ್ ತಂತ್ರಜ್ಞಾನ | Oneindia Kannada

ಬೆಂಗಳೂರು, ಸೆಪ್ಟೆಂಬರ್ 15: ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆಯನ್ನು ತಡೆಗಟ್ಟಲು ಹೊಸ ಪ್ಲಾನ್ ಸಿದ್ಧಗೊಳ್ಳುತ್ತಿದೆ. ರಾಜ್ಯ ಸರ್ಕಾರದ ನಗರ ರಸ್ತೆ ಸಾರಿಗೆ ನಿರ್ದೇಶನಾಲಯ ಮತ್ತು ಜಪಾನ್ ಇಂಟರ್ ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿ ಜಂಟಿಯಾಗಿ ಬೆಂಗಳೂರು ಮತ್ತು ಮೈಸೂರು ಸಂಚಾರ ನಿರ್ವಹಣೆಗೆ ಹೊಸ ಯೋಜನೆ ರೂಪಿಸಿದೆ.

ಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನ ಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನ

ಒಪ್ಪಂದದ ಪ್ರಕಾರ 2019ರ ಫೆಬ್ರವರಿಯಿಂದ ತಂತ್ರಜ್ಞಾನ ಅಳವಡಿಕೆ ಆರಂಭವಾಗಿ 2020ರ ಅಕ್ಟೋಬರ್ ವೇಳೆಗೆ ಬಳಕೆಗೆ ಸಾಧ್ಯವಾಗುತ್ತದೆ. ಹಾಗೆಯೇ ತಂತ್ರಜ್ಞಾನ ಅಳವಡಿಕೆಯ ನಂತರದ ಒಂದು ವರ್ಷಕಾಲ ಸ್ಥಳೀಯ ಸಿಬ್ಬಂದಿಗೆ ತಂತ್ರಜ್ಞಾನ ನಿರ್ವಹಣೆ ಬಗ್ಗೆ ತಿಳಿವಳಿಕೆ, ತರಬೇತಿ ನೀಡುವುದಕ್ಕೂ ಜಪಾನ್ ತಜ್ಞರು ನೆರವಾಗಲಿದ್ದಾರೆ.

ಡ್ರೋಣ್‌ ಬಳಸಿ ಟ್ರಾಫಿಕ್ ಮೇಲೆ ನಿಗಾ ಇಡ್ತಾರಂತೆ ಪೊಲೀಸರು ಡ್ರೋಣ್‌ ಬಳಸಿ ಟ್ರಾಫಿಕ್ ಮೇಲೆ ನಿಗಾ ಇಡ್ತಾರಂತೆ ಪೊಲೀಸರು

ಒಟ್ಟು 757.8 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರಿನ 29 ಜಂಕ್ಷನ್ ಗಳ ನಿರ್ವಹಣೆಯನ್ನು ಬುದ್ಧಿವಂತ ಸಾರಿಗೆ ವ್ಯವಸ್ಥೆ ಹೆಸರಿನಲ್ಲಿ ತರಲಾಗುತ್ತದೆ.

Japan technology for traffic management in Bengaluru and Mysuru


ಕೇಂದ್ರ ಸರ್ಕಾರ ಮತ್ತು ಜೆಐಸಿಎ ನಡುವೆ ನಡೆದಿರುವ ಒಪ್ಪಂದದ ಭಾಗವಾಗಿ ರಾಜ್ಯ ಸರ್ಕಾರ ಕೂಡ ಸಹಿ ಹಾಕಿದೆ. ಮಾಸ್ಟರ್ ಪ್ಲಾನ್ ನಲ್ಲಿ ಮಾಡಿರುವ ತಾಂತ್ರಿಕ ಶಿಫಾರಸ್ಸುಗಳನ್ನು ಜಾರಿ ಮಾಡಿರುವ ತಾಂತ್ರಿಕ ಶಿಫಾರಸ್ಸುಗಳನ್ನು ಜಾರಿ ಮಾಡಲು ಇರುವ ಕ್ಲಿಷ್ಟಕರವಾದ ಸಂಗತಿಗಳ ಬಗ್ಗೆ ಪರಿಶೀಲನೆಯನ್ನು ಜೆಐಸಿಎ ನಡೆಸಲಿದೆ.

English summary
Karnataka Directorate of Urban Road Transport is installing new technology in traffic management collaboration with Japan International Cooperation Agency (JICA) with estimation of Rs757 crores in Bengaluruand Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X