ಜಂತಕಲ್ ಮೈನಿಂಗ್, ಕುಮಾರಸ್ವಾಮಿ ಜಾಮೀನು ಅರ್ಜಿ ವಿಚಾರಣೆ

Posted By:
Subscribe to Oneindia Kannada

ಬೆಂಗಳೂರು, ಮೇ 17 : ಜಂತಕಲ್ ಎಂಟರ್‍ ಪ್ರೈಸಸ್ ಗೆ ಮೈನಿಂಗ್ ಪರವಾನಗಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಬುಧವಾರ ನಡೆಯಲಿದೆ.

ನಿರೀಕ್ಷಣಾ ಜಾಮೀನು ಕೋರಿ ಮಂಗಳವಾರದಂದು ಕುಮಾರಸ್ವಾಮಿ ಅವರು ಕೋರ್ಟ್‍ ಗೆ ಅರ್ಜಿ ಸಲ್ಲಿಸಿದ್ದು ಇಂದು (ಮೇ 17) 53ನೇ ಸೆಷನ್ಸ್ ನ್ಯಾಯಾಲಯದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ನ್ಯಾಯಾಧೀಶ ವೈ ವನಮಾಲ ರಂಗರಾಜನ್ ಅರ್ಜಿ ವಿಚಾರಣೆ ನಡೆಸಲಿದ್ದಾರೆ.[ಏನಿದು ಕುಮಾರಸ್ವಾಮಿ-ಜಂತಕಲ್‌ ಮೈನಿಂಗ್ಸ್ ನಂಟು ?]

Janthakal mining; HD Kumaraswamy's bail petition will be hearing today

ಒಂದು ವರ್ಷದ ಹಿಂದೆ ನಿರೀಕ್ಷಣಾ ಜಾಮೀನನ್ನು ಪಡೆದು ಎಸ್‍ಐಟಿ ಮುಂದೆ ಮೂರು ಬಾರಿ ವಿಚಾರಣೆಗೆ ಹಾಜರಾಗಿದ್ದ ಕುಮಾರಸ್ವಾಮಿ ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮಧ್ಯಂತರ ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದಾರೆ.

ಇದೇ ಜಂತಕಲ್ ಮೈನಿಂಗ್ಸ್ ವಿಚಾರವಾಗಿ ಎರಡು ದಿನದ ಹಿಂದೆಯಷ್ಟೇ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಅವರನ್ನು ಬಂಧಿಸಿದ್ದು, ಒಂಭತ್ತು ಐಎಎಸ್ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Janthakal mining Case, karnataka ex chief minister HD Kumaraswamy's bail plea will be hearing today (May 17), in 53th sessions court.
Please Wait while comments are loading...