ಜಂತಕಲ್ ಮೈನಿಂಗ್: ಎಸ್ಐಟಿ ವಿಚಾರಣೆಗೆ ಹಾಜರಾದ ಎಚ್ಡಿಕೆ

Posted By:
Subscribe to Oneindia Kannada

ಬೆಂಗಳೂರು. ಮೇ 18 : ಜಂತಕಲ್ ಎಂಟರ್‍ ಪ್ರೈಸಸ್ ಗೆ ಮೈನಿಂಗ್ ಪರವಾನಗಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇಂದು (ಮೇ 18) ವಿಶೇಷ ತನಿಖಾ ತಂಡದ (ಎಸ್ ಐಟಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಬುಧವಾರ ಸಲ್ಲಿದ್ದ ಜಾಮೀನು ಅರ್ಜಿಯನ್ನು ಗುರುವಾರ ಮಾನ್ಯ ಮಾಡಿದ ನ್ಯಾಯಾದೀಶ ನ್ಯಾ. ವನಮಾಲಾ ಆನಂದರಾವ್ ಅವರು 7 ದಿನಗಳ ಕಾಲಾವಧಿಯ ಷರತ್ತುಬದ್ಧ ಜಾಮೀನು ನೀಡಿದ್ದರು. ಅಲ್ಲದೆ, 5 ಲಕ್ಷ ರು. ಬಾಂಡ್ ಹಾಗೂ ಇಬ್ಬರು ಶ್ಯೂರಿಟಿಗಳನ್ನು ನೀಡುವಂತೆ ಸೂಚಿಸಿ ತನಿಖೆಗೆ ಸಹಕರಿಸುವಂತೆ ಸೂಚನೆ ನೀಡಿದ್ದರು.[ಜಂತಕಲ್ ಮೈನಿಂಗ್ ಕೇಸ್: ಎಚ್ ಡಿಕೆಗೆ ಜಾಮೀನು]

Jantakal mining case, HD Kumaraswamy attended SIT enquiry

ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ವಿಶೇಷ ತನಿಖಾ ತಂಡದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಮಧ್ಯಾಹ್ನ 3.30ರ ವರೆಗೆ ವಿಚಾರಣೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ತಾವು ಮುಖ್ಯಮಂತ್ರಿಗಳಾಗಿದ್ದ ವೇಳೆ ಕುಮಾರಸ್ವಾಮಿ ಅವರೇ ನೇರವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಶಿಫಾರಸು ಪತ್ರ ಬರೆದು ಜಂತಕಲ್ ಎಂಟರ್ ಪ್ರೈಸಸ್ ಗೆ ತಕ್ಷಣ ಪರವಾನಗಿ ಮಂಜೂರು ಮಾಡಿಸಿದ್ದಾರೆ ಎಂಬ ಆರೋಪ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jantakal mining case: The former chief minister of karnataka HD Kumaraswamy attended special investigation team (SIT) enquiry in Bengaluru on May 18.
Please Wait while comments are loading...