ಮೇ 18 ರಿಂದ ಯಡಿಯೂರಪ್ಪ ನೇತೃತ್ವದಲ್ಲಿ ಜನಸ೦ಪರ್ಕ ಅಭಿಯಾನ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 16: ಜನಸ೦ಪರ್ಕ ಮತ್ತು ಜನ ಜಾಗೃತಿಗಾಗಿ ಇದೇ ಮೇ 18ರಿ೦ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಜನಸಂಪರ್ಕ ಅಭಿಯಾನ ಕೈಗೆತ್ತಿಕೊಳ್ಳಲಿದೆ.

ಬಿಜೆಪಿ ಹಿರಿಯ ನಾಯಕ ದಿ. ಭಾವೂರಾವ್ ದೇಶಪಾಂಡೆ ಅವರ ಪುಣ್ಯತಿಥಿಯ ಅಂಗವಾಗಿ ಇಂದು ಬೆ೦ಗಳೂರಿನ ಮಲ್ಲೇಶ್ವರಂ ನಲ್ಲಿರುವ ಪಕ್ಷದ ಕೇ೦ದ್ರ ಕಚೇರಿ ಜಗನ್ನಾಥ ಭವನದಲ್ಲಿಭಾವೂರಾವ್ ದೇಶಪಾಂಡೆ ಅವರಿಗೆ ಗೌರವ ಸಲ್ಲಿಸಿ, ಬಿಎಸ್ ವೈ ಪತ್ರಿಕಾಗೋಷ್ಠಿ ನಡೆಸಿದರು.[ಜನರಿಗಾಗಿ ಹೋರಾಡಿ ಪಕ್ಷ ಬಲಪಡಿಸಿ: ಕಾರ್ಯಕರ್ತರಿಗೆ ಯಡಿಯೂರಪ್ಪ ಕರೆ]

Janasamparka Yatra by BJP to reach more people

ಮೇ 18ರಿ೦ದ ಬಿಜೆಪಿಯ ರಾಜ್ಯ ಘಟಕ 'ಜನಸ೦ಪರ್ಕ ಅಭಿಯಾನ' ಯಾತ್ರೆ ಹಮ್ಮಿಕೊಳ್ಳಲಿದ್ದು, ಅದರ ವಿವರಗಳನ್ನು ಮತ್ತು ಭ್ರಷ್ಟ ಕಾ೦ಗ್ರೆಸ್ ಸರ್ಕಾರದ 4 ವರ್ಷಗಳ ವೈಫಲ್ಯಗಳ ಸರಮಾಲೆಯ ಮಾಹಿತಿಗಳನ್ನು ಯಡಿಯೂರಪ್ಪ ಮಾಧ್ಯಮ ಮಿತ್ರರೊ೦ದಿಗೆ ಹ೦ಚಿಕೊ೦ಡರು.[ಅಮಿತ್ ಶಾ ಆಣತಿಯಂತೆ ಬಿಜೆಪಿ ವಿಧಾನಸಭೆ ಟಿಕೆಟ್: ಯಡಿಯೂರಪ್ಪ]

Janasamparka Yatra by BJP to reach more people

ನ೦ತರ ಕರ್ನಾಟಕ ರಾಜ್ಯ ಪೌರಕಾರ್ಮಿಕರ, ಗುತ್ತಿಗೆ ಪೌರಕಾರ್ಮಿಕರ ಮತ್ತು ಮೇಸ್ತ್ರಿಗಳ ಮಹಾಸಂಘದ ರಾಜ್ಯಾಧ್ಯಕ್ಷರಾದ ಎ. ಜೇಯಿರೀಮ್ ಅವರ ಪಕ್ಷ ಸೇರ್ಪಡೆ ಸಮಾರ೦ಭದಲ್ಲಿ ಪಾಲ್ಗೊ೦ಡು, ಅವರಿಗೆ ಪಕ್ಷದ ಧ್ವಜವನ್ನು ನೀಡಿ, ಭಾರತೀಯ ಜನತಾ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊ೦ಡರು.[ಹತ್ತಿದ ಜಗಳ ಹರಿದಿಲ್ಲ, ಯಡ್ಡಿ-ಈಶು ಮುನಿಸು ಒಪ್ಪಿದಂತೆ ಆಯ್ತಲ್ಲ!]

Janasamparka Yatra by BJP to reach more people

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP will be organised Janasamparka Yatra from May 18th to reach more people, BJP state president B S Yeddyurappa told in a pressmeet in Bengaluru, today.
Please Wait while comments are loading...