ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಂಚನೆ ಕೇಸ್ : ಇಷ್ಟಕ್ಕೂ ಗಾಲಿ ಜನಾರ್ದನ ರೆಡ್ಡಿ ಬಂಧನದ ಅಗತ್ಯವೇನು?

|
Google Oneindia Kannada News

Recommended Video

Janardhana Reddy Ponzi Scam : ಜನಾರ್ಧನ ರೆಡ್ಡಿ ಬಂಧನದ ಅಗತ್ಯ ಏನು? | Oneindia Kannada

ಬೆಂಗಳೂರು, ನವೆಂಬರ್ 08: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈ. ಲಿ ಕಂಪನಿಯ ಮಾಲೀಕ ಫರೀದ್ ಗೆ ನೆರವಾಗಲು ವಾಮಮಾರ್ಗ ಅನುಸರಿಸಲು ಹೋಗಿ ಸಮಸ್ಯೆಯ ಸುಳಿಯಲ್ಲಿದ್ದಾರೆ. ಈ ಪ್ರಕರಣದ ವಿಚಾರಣೆಗಾಗಿ ಗಾಲಿ ರೆಡ್ಡಿ ಅವರನ್ನು ಬಂಧಿಸಲು ಸಿಸಿಬಿ ಪೊಲೀಸರು ತೀವ್ರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

2017ರಲ್ಲಿ ಬಹುಕೋಟಿ ವಂಚನೆ ಆರೋಪದಲ್ಲಿ ಆಂಬಿಡೆಂಟ್ ಕಂಪನಿ ಮಾಲೀಕ ಫರೀದ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಸಹಾಯಕ ಮೆಹಫೂಜ್ ಅಲಿ ಖಾನ್ ಹೆಸರು ಬಾಯ್ಬಿಟ್ಟಿದ್ದಾನೆ.

ಆಂಬಿಡೆಂಟ್ ಕಂಪನಿ ಹಣ ದ್ವಿಗುಣ (ಶೇ30-40 ಬಡ್ಡಿ) ವಂಚನೆ ಪ್ರಕರಣಕ್ಕೆ ಹೊಂದಿಕೊಂಡಂತೆ ರೆಡ್ಡಿ ಅವರ ಡೀಲಿಂಗ್ ವಿಷಯ ಪೊಲೀಸರಿಗೆ ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆಗಾಗಿ ಅಲಿ ಖಾನ್ ಹಾಗೂ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

ಜನಾರ್ದನ ರೆಡ್ಡಿ ಪ್ರಕರಣ: ಬಿಜೆಪಿ ನಾಯಕರ ಬಾಯಿಗೆ ಹೈಕಮಾಂಡ್ ಬೀಗ ಜನಾರ್ದನ ರೆಡ್ಡಿ ಪ್ರಕರಣ: ಬಿಜೆಪಿ ನಾಯಕರ ಬಾಯಿಗೆ ಹೈಕಮಾಂಡ್ ಬೀಗ

ಸದ್ಯ ಅಲಿಖಾನ್ ಗೆ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಗಾಲಿ ರೆಡ್ಡಿ, ಹೈದರಾಬಾದಿನಲ್ಲಿ ಜಾಮೀನಿಗಾಗಿ ಅರ್ಜಿ ಹಾಕಿದ್ದಾರೆ. ಇಂದು ನ್ಯಾಯಾಲಯಕ್ಕೆ ರಜೆ ಇದೆ. ಪೊಲೀಸರ ಕಣ್ಣಿಗೆ ಕಾಣಿಸದಂತೆ ಸೋಮವಾರ ತನಕ ಕಾಲದೂಡುವ ತಂತ್ರ ಮಾಡುತ್ತಿದ್ದಾರೆ.

ಗಾಲಿ ರೆಡ್ಡಿ ಡೀಲಿಂಗ್ ವಿಷಯ

ಗಾಲಿ ರೆಡ್ಡಿ ಡೀಲಿಂಗ್ ವಿಷಯ

ಆಂಬಿಡೆಂಟ್ ವಂಚನೆ ಪ್ರಕರಣಕ್ಕೆ ಹೊಂದಿಕೊಂಡಂತೆ ಜನಾರ್ದನ ರೆಡ್ಡಿ ಚಿನ್ನದ ಬಿಸ್ಕತ್ತು ಪಡೆದ ಕೇಸಿನ ತನಿಖೆಯನ್ನು ನಡೆಸಿರುವ ಬೆಂಗಳೂರು ಸಿಸಿಬಿ ಪೊಲೀಸರು 4 ವಿಶೇಷ ತಂಡವನ್ನು ರಚಿಸಿಕೊಂಡು ರೆಡ್ಡಿ ಹುಡುಕಾಟದಲ್ಲಿ ತೊಡಗಿದ್ದಾರೆ.

ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಅಲೋಕ್​ಕುಮಾರ್, ಸಿಸಿಬಿ ಡಿಸಿಪಿ ಎಸ್.ಗಿರೀಶ್ ನೇತೃತ್ವದ ತಂಡ ಆಂಬಿಡೆಂಟ್ ಕಂಪನಿ ಮಾಲೀಕ ಸೈಯದ್ ಫರೀದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಗಾಲಿ ರೆಡ್ಡಿ ಡೀಲಿಂಗ್ ವಿಷಯ ಬೆಳಕಿಗೆ ಬಂದಿದೆ.

ಗಾಲಿ ರೆಡ್ಡಿ ಬಿಜೆಪಿಯಲ್ಲಿಲ್ಲ, ಪ್ರಕರಣದ ಬಗ್ಗೆ ನನಗೆ ತಿಳಿದಿಲ್ಲ: ಬಿಎಸ್ವೈ ಗಾಲಿ ರೆಡ್ಡಿ ಬಿಜೆಪಿಯಲ್ಲಿಲ್ಲ, ಪ್ರಕರಣದ ಬಗ್ಗೆ ನನಗೆ ತಿಳಿದಿಲ್ಲ: ಬಿಎಸ್ವೈ

ಮುಂದುವರೆದ ಸಿಸಿಬಿ ದಾಳಿ, ಶೋಧ ಕಾರ್ಯ

ಮುಂದುವರೆದ ಸಿಸಿಬಿ ದಾಳಿ, ಶೋಧ ಕಾರ್ಯ

ಗಾಲಿ ರೆಡ್ಡಿ ಬಂಧನಕ್ಕಾಗಿ ಬೆಂಗಳೂರು, ಬಳ್ಳಾರಿ ಮತ್ತು ಹೈದರಾಬಾದ್​ನಲ್ಲಿ ಬಲೆ ಬೀಸಲಾಗಿದೆ. ಬೆಂಗಳೂರಿನ ಪಾರಿಜಾತ ನಿವಾಸದ ಮೇಲೆ ಸಿಸಿಬಿ ಪೊಲೀಸರು ಬುಧವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಇಂದು ಬಳ್ಳಾರಿಯಲ್ಲಿ ಸಿರಗುಪ್ಪ ರಸ್ತೆಯಲ್ಲಿರುವ ಮನೆಯಲ್ಲಿ ಬೆಳಗ್ಗೆ 6 ಗಂಟೆಯಿಂದ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಎಸಿಪಿ ಮಂಜುನಾಥ್ ಅವರ ತಂಡದ ತನಿಖೆಗೆ ಗಾಲಿ ರೆಡ್ಡಿ ಅವರ ಮಾವ ಪರಮೇಶ್ವರ ರೆಡ್ಡಿ ಹಾಗೂ ಶಾಸಕ ಬಿ ಶ್ರೀರಾಮುಲು ಅವರು ಸಹಕಾರ ನೀಡುತ್ತಿದ್ದಾರೆ.

ಜನಾರ್ದನ ರೆಡ್ಡಿಗೆ ಆಂಬಿಡೆಂಟ್ 20 ಕೋಟಿ ಕೊಟ್ಟಿದ್ದೇಕೆ? ಡೀಟೇಲ್ಸ್ ಇಲ್ಲಿದೆ ಜನಾರ್ದನ ರೆಡ್ಡಿಗೆ ಆಂಬಿಡೆಂಟ್ 20 ಕೋಟಿ ಕೊಟ್ಟಿದ್ದೇಕೆ? ಡೀಟೇಲ್ಸ್ ಇಲ್ಲಿದೆ

ಇಷ್ಟಕ್ಕೂ ಗಾಲಿ ರೆಡ್ಡಿ ಬಂಧನದ ಅಗತ್ಯವೇನಿದೆ?

ಇಷ್ಟಕ್ಕೂ ಗಾಲಿ ರೆಡ್ಡಿ ಬಂಧನದ ಅಗತ್ಯವೇನಿದೆ?

ಉದ್ಯಮಿ ಬ್ರಿಜೇಶ್ ರೆಡ್ಡಿಯನ್ನು ಜಾರಿ ನಿರ್ದೇಶನಾಲಯದ ಕೇಸಿನಿಂದ ಬಚಾವ್ ಮಾಡಲು ಗಾಲಿ ರೆಡ್ಡಿ ಪಡೆದ ಲಂಚದ ಮೊತ್ತ ಏನಾಯ್ತು? ಈ ಮೊತ್ತವನ್ನು ಫರೀದ್ ಬಳ್ಳಾರಿಯ ರಾಜಮಹಲ್ ಜ್ಯುವೆಲ್ಲರ್ಸ್ ನ ರಮೇಶ್ ಹಾಗೂ ಬೆಂಗಳೂರಿನ ಅಂಬಿಕಾ ಜ್ಯುವೆಲ್ಲರ್ಸ್ ನ ರಮೇಶ್ ಕೊಠಾರಿಗೆ ತಲುಪಿಸಿದ್ದಾನೆ. ಆದರೆ, 18 ಕೋಟಿ ರು ನಗದು ರೂಪಕ್ಕೆ ಬದಲಾಗಿ 57 ಕೆಜಿ ಚಿನ್ನದ ರೂಪದಲ್ಲಿ ಗಾಲಿ ರೆಡ್ಡಿ ಪಾಲಾಗಿದೆ. ಈ ಚಿನ್ನದ ಬಿಸ್ಕತ್ತು ಜಪ್ತಿ ಮಾಡದೆ ತನಿಖೆ ಮುಂದುವರೆಸಲು ಕಷ್ಟ. ಹೀಗಾಗಿ, ಈ ಬಗ್ಗೆ ವಿಚಾರಣೆಗಾಗಿ ಗಾಲಿ ರೆಡ್ಡಿ ಹಾಗೂ ಅಲಿ ಖಾನ್ ಬಂಧನಕ್ಕೆ ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

ಬಂಧನ ಭೀತಿ: ಹೈದರಾಬಾದ್‌ನಲ್ಲಿ ಜಾಮೀನಿಗೆ ಮೊರೆ ಹೋದ ರೆಡ್ಡಿ ಬಂಧನ ಭೀತಿ: ಹೈದರಾಬಾದ್‌ನಲ್ಲಿ ಜಾಮೀನಿಗೆ ಮೊರೆ ಹೋದ ರೆಡ್ಡಿ

ಫರೀದ್ ನೀಡಿದ ಹೇಳಿಕೆಯಿಂದ ರೆಡ್ಡಿ, ಅಲಿಗೆ ಕಂಟಕ

ಫರೀದ್ ನೀಡಿದ ಹೇಳಿಕೆಯಿಂದ ರೆಡ್ಡಿ, ಅಲಿಗೆ ಕಂಟಕ

ರಿಯಲ್ ಎಸ್ಟೇಟ್ ಉದ್ಯಮಿ ಬ್ರಿಜೇಶ್ ರೆಡ್ಡಿ ಮೂಲಕ ಜನಾರ್ದನ ರೆಡ್ಡಿಯನ್ನು ಸಂರ್ಪಸಿ, ಇ.ಡಿ.ಯಲ್ಲಿ ದಾಖಲಾದ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸಹಾಯ ಕೋರಿದ್ದೆ. ಇದಕ್ಕೆ ಒಪ್ಪಿದ ಜನಾರ್ದನ ರೆಡ್ಡಿ, 20 ಕೋಟಿ ರೂ.ಗಳನ್ನು ಚಿನ್ನದ ರೂಪದಲ್ಲಿ ನೀಡುವಂತೆ ಹೇಳಿದ್ದರು. ಅದರ ಪ್ರಕಾರ ರೆಡ್ಡಿ ಆಪ್ತ ಅಲಿಖಾನ್​ಗೆ ಪರಿಚಯವಿದ್ದ ಬಳ್ಳಾರಿಯ ರಾಜಮಹಲ್ ಫ್ಯಾನ್ಸಿ ಜ್ಯುವೆಲರ್ಸ್ ರಮೇಶ್ ಎಂಬುವರ ಬ್ಯಾಂಕ್ ಖಾತೆಗೆ 18 ಕೋಟಿ ರೂ. ವರ್ಗಾವಣೆ ಮಾಡಿದೆ. ಆ ನಂತರ ರಮೇಶ್, ಬೆಂಗಳೂರಿನ ಅಂಬಿಕಾ ಸೇಲ್ಸ್ ಕಾಪೋರೇಷನ್ ಮಾಲೀಕ ರಮೇಶ್ ಕೊಠಾರಿಗೆ ಕೊಟ್ಟಿದ್ದರು. ಆತ 18 ಕೋಟಿ ರೂ. ಮೌಲ್ಯದ 57 ಕೆಜಿ ಚಿನ್ನದ ಬಿಸ್ಕತ್​ಗಳನ್ನು ಜನಾರ್ದನ ರೆಡ್ಡಿಗೆ ತಲುಪಿಸಿದ್ದೆ ಎಂದಿರುವುದು ತನಿಖೆ ಮುಂದುವರೆಯಲು ಸಹಕಾರಿಯಾಗಿದೆ.

2017ರ ಆಂಬಿಡೆಂಟ್ ವಂಚನೆ ಪ್ರಕರಣ

2017ರ ಆಂಬಿಡೆಂಟ್ ವಂಚನೆ ಪ್ರಕರಣ

2017ರ ಆಂಬಿಡೆಂಟ್ ವಂಚನೆ ಪ್ರಕರಣವು ದೇವರ ಜೀವನಹಳ್ಳಿ ಠಾಣೆಯ ಪೊಲೀಸರಿಂದ ಮೊದಲಿಗೆ ತನಿಖೆ ಒಳಪಟ್ಟಿತ್ತು. ನಂತರ ಇದು ಬಹುಕೋಟಿ ಆರ್ಥಿಕ ವಂಚನೆ ಎಂದು ತಿಳಿದಿದ್ದರಿಂದ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಯಾಯಿತು. ಈ ಬಗ್ಗೆ ಅಪಾರ ದಾಖಲೆ ವಶವಾದರೂ, 15,00ಕ್ಕೂ ಅಧಿಕ ಹೂಡಿಕೆದಾರರು ಕಳೆದುಕೊಂಡಿರುವ ಕೋಟ್ಯಂತರ(ಸುಮಾರು 600 ಕೋಟಿ ರು) ಮೊತ್ತ ಸಿಕ್ಕಿಲ್ಲ.

ಕಳೆದ 20 ದಿನಗಳಿಂದ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದು, ಪ್ರಮುಖ ಆರೋಪಿ ಸೈಯದ್ ಮತ್ತು ರಮೇಶ್​ನನ್ನು ಬಂಧಿಸಿ ವಿಚಾರಣೆ ಮಾಡಿದ್ದರು. ಸದ್ಯ ಸೈಯದ್ ಫರೀದ್, ರಮೇಶ್ ಹಾಗೂ ಅಲಿಖಾನ್ ಜಾಮೀನು ಪಡೆದುಕೊಂಡಿದ್ದರೆ, ಗಾಲಿ ರೆಡ್ಡಿ ನಾಪತ್ತೆಯಾಗಿದ್ದಾರೆ.

English summary
Karnataka's former minister Janardhan Reddy is on the run. The police have formed four special teams to nab him in connection with a ponzi scam. The prime allegation against Reddy is that he had demanded gratification from one Syed Ahmed Fareed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X