ಮಹಾದಾಯಿಗಾಗಿ ಬಂದ ರೈತರ ಬೆಂಬಲಕ್ಕೆ ನಿಂತ ಜನಸಾಮಾನ್ಯರ ವೇದಿಕೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 24 : ಕಳಸಾ ಬಂಡೂರಿ ಹಾಗೂ ಮಹದಾಯಿ ವಿಷಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರು ಸ್ಪಷ್ಟ ಹೇಳಿಕೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಕಚೇರಿ ಮುಂದೆ ಕಳಸಾ ಬಂಡೂರಿ ಹೋರಾಟಗಾರರು ನಡೆಸುತ್ತಿರುವ ಧರಣಿಗೆ ಜನಸಾಮಾನ್ಯರ ವೇದಿಕೆ ಬೆಂಬಲ ಸೂಚಿಸಿದೆ.

ಚಂದ್ರಶೇಖರ ಪಾಟೀಲರಿಂದ ಜನ ಸಾಮಾನ್ಯರ ಪಕ್ಷದ ಲಾಂಛನ ಬಿಡುಗಡೆ

ಶನಿವಾರದಂದು ನಡೆಯುತ್ತಿರುವ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಜನ ಸಾಮಾನ್ಯರ ವೇದಿಕೆ ಅಧ್ಯಕ್ಷ ಡಾ. ಅಯ್ಯಪ್ಪ ಹೋರಾಟದ ಖರ್ಚು ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು. ಕಳಸಾ ಬಂಡೂರಿ ಹಾಗೂ ಮಹದಾಯಿ ವಿವಾದ ಬಗೆಹರಿಸುವಂತೆ ಇತ್ತೀಚೆಗೆ ದೆಹಲಿಗೆ ರೈತರನ್ನು ಕರೆದುಕೊಂಡು ಹೋಗಿ ಬೃಹತ್ ಪ್ರತಿಭಟನೆಯನ್ನು ಡಾ ಅಯ್ಯಪ್ಪ ನೇತೃತ್ವದಲ್ಲಿ ನಡೆಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

Jana Samanyara Vedike extends support to Mahadayi Protest in Bengaluru

ನಂತರ ಮಾತನಾಡಿದ ಅವರು ಕಳಸಾ ಬಂಡೂರಿ ಹೋರಾಟಗಾರರು ನಮ್ಮ ಮನೆಯ ಸದಸ್ಯರಿದ್ದಂತೆ. ಅವರು ತಮ್ಮ ಅತ್ಯವಶ್ಯಕ ಬೇಡಿಕೆಯಾದ ಕುಡಿಯುವ ನೀರಿಗೋಸ್ಕರ ನಡೆಸುತ್ತಿರುವ ಹೋರಾಟವನ್ನು ರಾಜಕೀಯ ಪಕ್ಷಗಳು ರಾಜಕೀಯ ವಿಷಯವಾಗಿ ಪರಿಗಣಿಸಿರುವುದು ವಿಷಾದನೀಯ.

ಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆ

ಇಂಥ ಸಂಧರ್ಭದಲ್ಲಿ ಬೆಂಗಳೂರಿಗೆ ಆಗಮಿಸಿ ಹೋರಾಟ ನಡೆಸುತ್ತಿರುವ ಮಹದಾಯಿ ಹೋರಾಟಗಾರರು ರಸ್ತೆ ಬದಿಯಲ್ಲಿ ಕುಳಿತು ಹೋರಾಟ ಮುಂದುವರೆಸಿದ್ದಾರೆ. ಅವರಿಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲು ಅಗತ್ಯವಿರುವ ಸಹಾಯವನ್ನು ಮಾಡಲು ಜನ ಸಾಮಾನ್ಯರಾದ ನಾವು ಮುಂದಾಗಿದ್ದೇವೆ. ಜನ ಸಾಮಾನ್ಯರ ಹೋರಾಟಕ್ಕೆ ಯಾವುದೇ ರೀತಿಯಲ್ಲಾದರೂ ಕೈ ಜೊಡಿಸಬೇಕು ಎನ್ನುವುದು ಜನ ಸಾಮಾನ್ಯರ ಉದ್ದೇಶವಾಗಿದೆ ಎಂದರು.

ಕಳಸಾ ಬಂಡೂರಿ ಯೋಜನೆ, ವಿವಾದ ಮತ್ತು ನಾವು

ರಾಜಕಾರಣಿಗಳೂ ಸಮಸ್ಯೆಗಳನ್ನು ಜೀವಂತವಿಡುವಲ್ಲಿ ನಿಸ್ಸೀಮರು. ಹಲವಾರು ದಶಕಗಳಿಂದ ರಾಜಕಾರಣಿಗಳಿಗೆ ನೀಡಿರುವ ಮನವಿಗಳು ಘೋರ್ಕಲ್ಲ ಮೇಲೆ ನೀರು ಸುರಿದಂತಾಗಿವೆ. ಈ ಭ್ರಷ್ಟ ರಾಜಕಾರಣಿಗಳ ನಿಜವಾದ ಮುಖವಾಡವನ್ನು ಬಯಲು ಮಾಡುವುದು ಹಾಗೂ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಉದ್ದೇಶವಾಗಿದೆ ಎಂದರು. ಈ ಹಿನ್ನಲೆಯಲ್ಲಿ ಜನ ಸಾಮಾನ್ಯರ ಕೈಗೆ ಆಡಳಿತ ನೀಡುವ ಉದ್ದೇಶದಿಂದ ನಾವು ಈ ಪಕ್ಷವನ್ನು ಪ್ರಾರಂಭಿಸಿದ್ದೇವೆ ಎಂದರು.

ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಲ್ಲಿ ಏನಿದೆ?

ಈ ಧರಣಿ ಎಷ್ಟು ದಿನ ಮುಂದುವರೆದರೂ ಅಷ್ಟೂ ದಿನವೂ ಅವರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಜನ ಸಾಮಾನ್ಯ ವೇದಿಕೆ ಸಿದ್ದವಾಗಿದೆ ಎಂದು ಡಾ ಅಯ್ಯಪ್ಪ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jana Samanyara Vedike party today (December 24) extended support to Mahadayi Protest in Bengaluru. Jana Samanyara vedike to bare expenditure of farmers during the protest.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ