ಪರಪ್ಪನ ಅಗ್ರಹಾರ ಜೈಲಲ್ಲಿ ಜಾಮರ್ ಗಳಿಗೆ ಗ್ರಹಣ

Posted By: Gururaj
Subscribe to Oneindia Kannada

ಬೆಂಗಳೂರು, ಆ.09 : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಪೊಲೀಸರು ದಾಳಿ ಮಾಡಿದಾಗ ಮೊಬೈಲ್ ಫೋನ್‌ಗಳು ಪತ್ತೆಯಾಗಿದ್ದವು. ಅಚ್ಚರಿಯ ಸಂಗತಿ ಎಂದರೆ ಜೈಲಿನಲ್ಲಿರುವ ಜಾಮರ್ ಕಾರ್ಯ ನಿರ್ವಹಿಸುತ್ತಿಲ್ಲ. ಅದು ನೂತನ ತಂತ್ರಜ್ಞಾನಕ್ಕೆ ತಕ್ಕಂತೆ ಅಪ್ ಡೇಟ್ ಆಗಿಲ್ಲ.

ರೂಪಾ ಮೌದ್ಗೀಲ್ ಸ್ಥಾನಕ್ಕೆ ಎಚ್ ಎಸ್ ರೇವಣ್ಣ ನೇಮಕ

ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರಿ ಒಡೆತನದ ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ. ಜೊತೆ ಮಾಡಿಕೊಂಡಿದ್ದ ವಾರ್ಷಿಕ ಒಪ್ಪಂದವನ್ನು ಮುಂದುವರೆಸಲಿದ್ದು, ಜಾಮರ್‌ಗಳನ್ನು ಈಗಿನ ತಂತ್ರಜ್ಞಾನಕ್ಕೆ ತಕ್ಕಂತೆ ಅಪ್ ಡೇಟ್ ಮಾಡಲಾಗುತ್ತದೆ.

Jammers inside the Bengaluru Central prison don’t work

ಜೈಲಿನಲ್ಲಿರುವ ಜಾಮರ್ ಗಳು 2ಜಿ ಮತ್ತು 3ಜಿ ತಂತ್ರಜ್ಞಾನಕ್ಕೆ ಬಳಕೆ ಆಗುವಂತವು. ಆದರೆ, ಜೈಲಿನ ಮೇಲೆ ದಾಳಿ ಮಾಡಿದಾಗ ಸಿಕ್ಕ ಪೋನುಗಳು 4ಜಿ ತಂತ್ರಜ್ಞಾನದವಾಗಿದ್ದವು. ಆದ್ದರಿಂದ, ಜಾಮರ್ ಜೈಲಿನಲ್ಲಿದ್ದು ನಿರುಪಯುಕ್ತವಾಗಿದ್ದವು.

2013ರಲ್ಲಿ ಕೈದಿ ಜೈಶಂಕರ್ ಜೈಲಿನಿಂದ ಪರಾರಿಯಾಗಿದ್ದ. ನಂತರ ಜೈಲಿನ ಮೇಲೆ ದಾಳಿ ಮಾಡಿದಾಗ ಹಲವು ಸಿಮ್ ಕಾರ್ಡ್ ಮತ್ತು ಪೋನುಗಳನ್ನು ವಶಕ್ಕೆ ಪಡೆಯಾಗಿತ್ತು. ಆಗ ಬಂಧಿಖಾನೆ ಇಲಾಖೆ ಸುಮಾರು 6 ಕೋಟಿ ವೆಚ್ಚದಲ್ಲಿ 19 ಜಾಮರ್ ಗಳನ್ನು ಖರೀದಿ ಮಾಡಿತ್ತು.

ಪರಪ್ಪನ ಕೈದಿಗಳಿಗೆ ಥಳಿತ: ಮಾನವ ಹಕ್ಕು ಆಯೋಗದಿಂದ ರಾಜ್ಯಕ್ಕೆ ನೋಟಿಸ್

ಜೈಲಿನೊಳಗೆ ಹಲವು ಅಕ್ರಮ ನಡೆಯುತ್ತೆ ಎಂಬುದು ಕೆಲವು ದಿನಗಳ ಹಿಂದೆ ಸಾಬೀತಾಗಿತ್ತು. ಮೊಬೈಲ್ ಪೋನ್, ಮಾದಕ ದ್ರವ್ಯಗಳನ್ನು ಜೈಲಿನಲ್ಲಿ ವಶಕ್ಕೆ ಪಡೆಯಲಾಗಿತ್ತು. ಜೈಲಿಗೆ ಆಗಮಿಸುವ ಕೈದಿಗಳ ಸಂಬಂಧಿಕರು ಮೊಬೈಲ್ ಪೋನ್ ಗಳನ್ನು ನೀಡುವುದು ಬೆಳಕಿಗೆ ಬಂದಿತ್ತು.

ಮೊಬೈಲ್ ಫೋನ್ ಉಪಯೋಗಿಸಿಕೊಂಡು ಕೈದಿಗಳು ಕರೆ ಮಾಡುವುದು, ಸುಫಾರಿ ಕಿಲ್ಲರ್ ಗಳು ಹತ್ಯೆಗೆ ಪ್ಲಾನ್ ಮಾಡುವುದು ತಿಳಿದುಬಂದಿತ್ತು. ಕೆಲವು ವರ್ಷಗಳ ಹಿಂದೆ ಕೈದಿಯೊಬ್ಬ ಪಾಕಿಸ್ತಾನಕ್ಕೆ ಕರೆ ಮಾಡಿರುವ ಪ್ರಕರಣವೂ ನಡೆದಿದೆ.

ಜೈಲಿನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೈದಿಗಳು ಇರುವುದುರಿಂದ ಮೇಲ್ವಿಚಾರಣೆ ನಡೆಸುವುದು ಕಷ್ಟವಾಗುತ್ತಿದೆ ಎಂಬ ಆರೋಪವೂ ಇದೆ. ಎರಡು ಸಾವಿರ ಕೈದಿಗಳು ಇರಬೇಕಾದ ಜೈಲಿನಲ್ಲಿ ನಾಲ್ಕು ಸಾವಿರ ಜನರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jammers inside the Bengaluru Central prison don’t work because of outdated technology. The jammers at the Bengaluru Central Prison are outdated and are meant to restrict 2G and 3G mobile phones.
Please Wait while comments are loading...