ಜಲ್ಲಿಕಟ್ಟು ದೀಪಾವಳಿಗಿಂತ ದೊಡ್ಡ ಹಬ್ಬ : ಶ್ರೀಶ್ರೀ ರವಿಶಂಕರ್ ಗುರೂಜಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 19 : "ಪೊಂಗಲ್ ತಮಿಳುನಾಡಿನಲ್ಲಿ ಅತೀದೊಡ್ಡ ಹಬ್ಬ. ಇದು ಹೋಳಿ ಮತ್ತು ದೀಪಾವಳಿಗಿಂತಲೂ ದೊಡ್ಡದು. ಜಲ್ಲಿಕಟ್ಟು ಉತ್ಸವ ಪೊಂಗಲ್ ಹಬ್ಬದ ಅವಿಭಾಜ್ಯ ಅಂಗ" ಎಂದು ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ.

ಮದವೇರಿದ ಗೂಳಿಯನ್ನು ಹಿಡಿದುಕಟ್ಟಿಹಾಕುವ ಜಲ್ಲಿಕಟ್ಟು ಹಬ್ಬ ಅಮಾನವೀಯ, ಪ್ರಾಣಿ ಹಿಂಸೆಗೆ ಕುಮ್ಮಕ್ಕು ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ಈ ಕ್ರೀಡೆಯನ್ನು ನಿಷೇಧಿಸಿದೆ. ನಿಷೇಧ ಕೂಡಲೆ ಹಿಂತೆಗೆಯಬೇಕು ಎಂಬ ಮನವಿಯನ್ನೂ ತಿರಸ್ಕರಿಸಿದೆ.

ಈ ಆದೇಶದ ವಿರುದ್ಧ ತಿರುಗಿಬಿದ್ದಿರುವ ತಮಿಳುನಾಡಿನ ಜನತೆ ಚೆನ್ನೈ ಮತ್ತಿತರ ನಗರಗಳಲ್ಲಿ ಭಾರೀ ಪ್ರತಿಭಟನೆಗಿಳಿದಿದ್ದಾರೆ. ಜಲ್ಲಿಕಟ್ಟು ಮೇಲೆ ಹೇರಿರುವ ನಿಷೇಧವನ್ನು ಹಿಂತೆಗೆಯಲೇಬೇಕು ಎಂದು ಪಟ್ಟುಹಿಡಿದಿದ್ದಾರೆ.[ಗ್ಯಾಲರಿ : ಜಲ್ಲಿಕಟ್ಟುಗಾಗಿ ಪ್ರತಿಭಟನೆ, ತಮಿಳರ ಅರ್ಭಟ]

Jallikattu is intergral part of Pongal :Sri Sri Ravi Shankar

ಇಂಥ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಆರ್ಟ್ ಆಫ್ ಲಿವಿಂಗ್ ಸ್ಥಾಪಿಸಿರುವ, ಅಂತಾರಾಷ್ಟ್ರೀಯ ಖ್ಯಾತಿಯ ಗುರೂಜಿ ರವಿಶಂಕರ್ ಅವರು ತಮಿಳುನಾಡಿನ ಜನತೆಯ ಬೆನ್ನಿಗೆ ನಿಂತಿದ್ದಾರೆ. ಜಲ್ಲಿಕಟ್ಟು ಪೊಂಗಲ್ ಹಬ್ಬದ ಅವಿಭಾಜ್ಯ ಅಂಗವಾಗಿದ್ದು, ನಿಷೇಧ ಹಿಂತೆಗೆಯಬೇಕೆಂದು ಕೋರಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sri Sri Ravi Shankar of Art of Living has given a statement that Pongal is the biggest festival, bigger than Holi and Diwali. And Jallikattu is integral part of Pongal.
Please Wait while comments are loading...