ಹೆಂಡತಿಯನ್ನು ಬಿಟ್ಟು ಜಲ್ಲಿಕಟ್ಟಿಗಾಗಿ ಗಂಡ ತಮಿಳುನಾಡಿಗೆ ಪರಾರಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 23: ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟಿಗಾಗಿ ಹೆಂಡತಿಯನ್ನು ಬಿಟ್ಟು ಗಂಡ ತಮಿಳುನಾಡಿಗೆ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ತಮಿಳುನಾಡು ಮೂಲದ ಕಾಳಿದಾಸ ಎನ್ನುವವರೇ ಪರಾರಿಯಾದ ಗಂಡ. ಎರಡು ತಿಂಗಳ ಹಿಂದೆಯಷ್ಟೇ ಅವರು ಕುಮುದಾ ಎಂಬ ಯುವತಿಯನ್ನು ವರಿಸಿದ್ದರು. ವಿವಾಹವಾದ ನಂತರ ಬೆಂಗಳೂರಿನ ವಸಂತ ನಗರದಲ್ಲಿ ವಾಸವಾಗಿದ್ದರು. ತನ್ನೂರಿನಲ್ಲಿಯೂ ಜಲ್ಲಿಕಟ್ಟಿಗಾಗಿ ಹೋರಾಟ ಪ್ರಾರಂಭವಾಗಿದೆ ಎಂದು ತಿಳಿಯುತ್ತಿದ್ದಂತೆ ರಾತ್ರೋರಾತ್ರಿ ತಮಿಳುನಾಡಿಗೆ ಪರಾರಿಯಾಗಿದ್ದಾರೆ. ಕುಮುದಾ ಪತ್ತಿಗೆ ಕರೆ ಮಾಡಿದರೂ ಪ್ರತಿಕ್ರಿಯೆ ನೀಡಿಲ್ಲ.[LIVE: ಚೆನ್ನೈನಲ್ಲಿ ನಿಷೇಧಾಜ್ಞೆ ಶಾಲಾ, ಕಾಲೇಜುಗಳಿಗೆ ರಜೆ]

Jallikattu; Husband refuse his wife and going Tamilnadu in Bengaluru

ಬಳಿಕ ಭಾನುವಾರ ಕಾಳಿದಾಸ ಪತ್ನಿಗೆ ಕರೆ ಮಾಡಿ ಜಲ್ಲಿಕಟ್ಟು ಹೋರಾಟ ಮುಂದುವರೆದಿದ್ದು, ಜಲ್ಲಕಟ್ಟು ಆಚರಣೆಯೂ ನೆಡಯಲಿದೆ. ನಾನು ಬೆಂಗಳೂರಿಗೆ ಬರಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಪತ್ನಿ ಮನೆಗೆ ಬರುವಂತೆ ಅಂಗಲಾಚಿದ್ದು, ಕೋಪದಿಂದ ಬರಲೇ ಬೇಕು ಎಂದಾಗ ನಾನು ಈಗಲೇ ಬರುವುದಿಲ್ಲ. ನೀನು ಬೇಕಿದ್ದರೆ ಬೇರೆ ಮದುವೆಯಾಗು ಎಂದು ಖಾರವಾಗಿ ಮಾತನಾಡಿದ್ದಾನೆ ಎಂದು ಪತ್ನಿ ಕುಮುದಾ ತಿಳಿಸಿದ್ದಾರೆ.

ಕಾಳಿದಾಸನಿಗೆ ಜಲ್ಲಿಕಟ್ಟು ಕ್ರೀಡೆ ಅಂದರೆ ಪಂಚಪ್ರಾಣ ತಮಿಳುನಾಡಿನಲ್ಲಿ ಕಾಳಿದಾಸ ಅನೇಕ ಬಾರಿ ಕ್ರೀಡೆಯಲ್ಲಿ ಪಾಲ್ಗೊಂಡಿದ್ದಾನೆ. ಇನ್ನು ಇದರ ಬಗ್ಗೆ ಹೋರಾಟ ಎಂದರೆ ಸುಮ್ಮನಿರುತ್ತಾನಾ ತಮಿಳುನಾಡಿಗೆ ಹೋಗಿದ್ದಾನೆ ಬರುತ್ತಾನೆ ಎಂದು ಬಂಧುಗಳು ತಿಳಿಸಿದ್ದಾರೆ. ಬೆಂಗಳೂರಿನ ಹೈಗೌಂಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jallikattu; Husband refuse his wife and going Tamilnadu the incident happaen in Vasnth nagar Bangaluru.
Please Wait while comments are loading...