ರೂ.5000 ಕೊಡಿ, ಆಕಾಶದಲ್ಲಿ ಹಾರಾಡುತ್ತಾ ಪ್ರಿಯತಮೆಗೆ ಮುತ್ತಿಡಿ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 12: ಫೆಬ್ರವರಿ 14ರ ಪ್ರೇಮಿಗಳ ದಿನಕ್ಕೆ ಜಕ್ಕೂರು ಏರೋಡ್ರಮ್ ಪ್ರೇಮಿಗಳಿಗೆ ವಿನೂತನ ಆಫರ್‌ ಒಂದನ್ನು ನೀಡಿದೆ.

ಪ್ರೇಮಿಗಳು ಅಂದು ಮಿನಿ ವಿಮಾನದಲ್ಲಿ ಕೂತು ಆಕಾಶಕ್ಕೆ ಹಾರಿ ಹಕ್ಕಿಗಳಾಗಬಹುದು. 15 ನಿಮಿಷದಿಂದ ಅರ್ಧ ಗಂಟೆ ಆಕಾಶದಿಂದ ಬೆಂಗಳೂರಿನ ಸೊಬಗು ಸವಿಯಬಹುದು. ಮೋಡಗಳ ಮಧ್ಯೆ ಪ್ರಿಯತಮೆಗೆ ಪ್ರೇಮ ನಿವೇದನೆ ಮಾಡಬಹದುದು.

ಜಕ್ಕೂರು ಏರೋಡ್ರಮ್ ಇದೇ ಮೊದಲ ಬಾರಿಗೆ ಈ ರೀತಿಯ ಆಫರ್ ಒಂದನ್ನು ಪ್ರೇಮಿಗಳಿಗಾಗಿ ನೀಡಿದೆ, ಅರ್ಧ ಗಂಟೆಯ ಹಾರಾಟಕ್ಕೆ ಜೋಡಿಯೊಂದು 5000 ಪಾವತಿಸಬೇಕಿದ್ದು, ವಿಮಾನದಲ್ಲಿ ಗುಲಾಬಿ, ಚಾಕಲೇಟ್‌ಗಳು ಪ್ರೇಮಿಗಳ ಸಮಯವನ್ನು ಸುಂದರಗೊಳಿಸಲು ಇರಿಸಲಾಗಿರುತ್ತದೆ.

Jakkur aerodrome gives special offers to lovers for valentines day

ಮೆಚ್ಚಿನ ಹುಡುಗಿಗೆ ಪ್ರೀತಿ ನಿವೇದಿಸಿಕೊಳ್ಳಲು, ಅಥವಾ ಈಗಾಗಲೇ ನಿಮ್ಮವಳಾದ ಹುಡುಗಿಗೆ ಪ್ರೇಮಿಗಳ ದಿನದ ಗಿಫ್ಟ್ ನೀಡಲು ನಾವು ನೀಡಿರುವ ಅವಕಾಶವನ್ನು ಬಳಸಿಕೊಳ್ಳಿ ಎಂದು ಜಕ್ಕೂರು ಏರೋಡ್ರಮ್ ಅಧಿಕಾರಿಗಳು ಹೇಳಿದ್ದಾರೆ.

ಒಂದು ಬಾರಿಗೆ ಇಬ್ಬರು ಮತ್ತು 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ ಹಾರಲು ಅವಕಾಶ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jakkur aerodrome gives special offer on valentines day. couples can fly in aerodrome's mini flight and see Bengaluru. they can express their love in between clouds.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ