ವೀಡಿಯೋ: ಹೇಳಿದ್ದು ವೆಜ್, ತಂದಿದ್ದು ಚಿಕನ್, ಅಯ್ಯೋ ಮಹಾವೀರ!

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,22: ಹೋಟೆಲಿನಲ್ಲಿ ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಅವರ ಬಳಿ ಬಂದ ಆಹಾರವನ್ನು ಕುಟುಂಬದವರೆಲ್ಲಾ ತಿಂದು ಮುಗಿಸಿದ್ದಾರೆ. ನಂತರ ರುಚಿಯಲ್ಲಿ ಏನೋ ವ್ಯತ್ಯಾಸ ಕಂಡಿದೆ. ಕುಲಂಕುಷವಾಗಿ ನೋಡಿದಾಗ ಅದು ನಾನ್ ವೆಜ್ ಬಿರಿಯಾನಿ ಎಂದು ತಿಳಿದಿದೆ. ವಿಚಾರ ತಿಳಿದ ಇವರು ರೆಸ್ಟೊರೆಂಟ್ ಮೇಲೆ ತಿರುಗಿ ಬಿದ್ದಿದ್ದಾರೆ.

ಹೌದು..ವೆಜ್ ಬಿರಿಯಾನ್ ಆರ್ಡರ್ ಮಾಡಿ ನಾನ್ ವೆಜ್ ಬಿರಿಯಾನಿ ತಿಂದು ಪೇಚಿಗೆ ಸಿಲುಕಿದ್ದು ಜೈನ ಸಮುದಾಯದ ಅಶ್ವಿನ್ ಸೆಮಲಾನಿ. ರೆಸ್ಟೊರೆಂಟ್ ನವರ ಎಡವಟ್ಟಿಗೆ ಕೋಪಗೊಂಡ ಅವರು ರೆಸ್ಟೊರೆಂಟ್ ವಿರುದ್ಧ ಕೇಸು ದಾಖಲಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.[ಆತ್ಮಶುದ್ಧಿ, ತ್ಯಾಗದ ದ್ಯೋತಕ ಜೈನರ ಪರ್ಯೂಷಣ ಪರ್ವ]

Jain family orders veg biriyani, served chicken biriyani instead in bengaluru restaurant

ರೆಸ್ಟೊರೆಂಟ್ ನಲ್ಲಿ ಆಗಿದ್ದೇನು?

ಅಶ್ವಿನ್ ಸೆಮಲಾನಿ ಅವರು ಬೆಂಗಳೂರಿನ ಗಾಂಧಿನಗರದ ಕಾಳಿದಾಸ ರಸ್ತೆಯಲ್ಲಿರುವ ರಂಗೋಲಿ ರೆಸ್ಟೊರೆಂಟ್ ಗೆ ತಮ್ಮ ಕುಟುಂಬದ ಸಮೇತ ಹೋಗಿದ್ದಾರೆ. ಅಲ್ಲಿ ಅವರು ಜೀರಾ ರೈಸ್ ಮತ್ತು ಸಸ್ಯಹಾರಿ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಅವರು ಕುಳಿತಿರುವ ಟೇಬಲ್ ಗೆ ವೆಜಿಟೇರಿಯನ್ ಬಿರಿಯಾನಿ ಬರುವ ಬದಲು ಚಿಕನ್ ಬಿರಿಯಾನಿ ಬಂದು ಬಿಟ್ಟಿದೆ. ಅದು ಅಲ್ಲದೆ ಈ ರೆಸ್ಟೊರೆಂಟ್ ಸಸ್ಯಹಾರಿ ರೆಸ್ಟೊರೆಂಟ್.

ಬಿರಿಯಾನಿ ತಿನ್ನುವ ವೇಳೆ ಕೆಲವರಿಗೆ ಚಿಕನ್ ತುಂಡುಗಳು ಸಿಕ್ಕಿದೆ. ಆಗ ಅವರು ವೆಜ್ ಬಿರಿಯಾನಿಯಲ್ಲಿ ಈ ತುಂಡುಗಳು ಸಿಗಲು ಹೇಗೆ ಸಾಧ್ಯ ಎಂದು ಯೋಚಿಸಿದ ಅಶ್ವಿನ್ ಸೆಮಲಾನಿ ಹೋಟೆಲ್ ಮಾಲಿಯನ್ನು ಕರೆದು ಕೇಳಿದಾಗ ಆತ ಅದು ಮಶ್ರೂಮ್ ಮತ್ತು ಪನೀರ್ ಎಂದು ಹೇಳಿದ್ದಾನೆ.[ಜೈನರ ಸಲ್ಲೇಖನ ವ್ರತ ಕಾನೂನುಬಾಹಿರ ಆಚರಣೆಯಂತೆ!]

ಮಾಲಿ ಹೇಳಿದ ಮಾತನ್ನು ನಂಬಿದ ಕುಟುಂಬದವರು ಬಿರಿಯಾನಿ ತಿನ್ನಲು ಪ್ರಾರಂಭಿಸಿದ್ದಾರೆ. ಬಳಿಕ ಕುಟುಂಬದ ಒಬ್ಬಾಕೆಗೆ ಬಿರಿಯಾನಿಯಲ್ಲಿ ಮೂಳೆ ಸಿಕ್ಕಿದೆ. ಆಗ ಇಡೀ ಕುಟುಂಬದ ಸಹನೆಯ ಕಟ್ಟೆ ಒಡೆದಿದ್ದು, ಹೋಟೆಲ್ ಮ್ಯಾನೇಜ್ ಮೆಂಟ್ ವಿರುದ್ಧ ಹರಿಹಾಯ್ದಿದ್ದಾರೆ. ಸಸ್ಯಹಾರಿ ಹೋಟೆಲಿನಲ್ಲಿ ಮಾಂಸಾಹಾರ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

Jain family orders veg biriyani, served chicken biriyani instead in bengaluru restaurant

ರಂಗೋಲಿ ಹೇಳಿ ಕೇಳಿ ಸಸ್ಯಹಾರಿ ಹೋಟೆಲ್. ಇಲ್ಲಿನ ಬಾಣಸಿಗ ಹೋಟೆಲ್ ಅಕ್ಷಯ ಆರೋದಲ್ಲಿರುವ ಅತಿಥಿಗಳಿಗಾಗಿ ಮಾಂಸಾಹಾರವನ್ನು ತಯಾರಿಸಿದ್ದನು. ಇದನ್ನು ನೋಡದ ಸರ್ವರ್ ನಿಮಗೆ ಮಾಂಸಾಹಾರ ತಂದು ಕೊಟ್ಟಿದ್ದಾನೆ ಎಂದು ಆದ ಎಡವಟ್ಟನ್ನು ರಂಗೋಲಿ ಹೋಟೆಲಿನ ನಿರ್ವಹಣಾಧಿಕಾರಿ ವಿವರಿಸಿದ್ದಾರೆ.[ಅಡಿಗಾಸ್ ಹೋಟೆಲ್ ಫುಡ್ ನಲ್ಲಿ ಇಲಿ ಪಿಚ್ಕೆ ಸಿಕ್ತಂತೆ!]

ನಿರ್ವಹಣಾಧಿಕಾರಿಯ ಮಾತನ್ನು ಒಪ್ಪದ ಅಶ್ವಿನ್ ಸೆಮಲಾನಿ ಉಪ್ಪಾರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದು, ಇವರು ನಮ್ಮ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A group of about 25 members from a Jain family had a shock of their life on Sunday night when they were served chicken biriyani in a Rangoli vegetarian restaurant, Near Kalidase Road in Gandhi nagar. Some of the unsuspecting members finished it, only to realise later that what they ate was a non-veg dish.
Please Wait while comments are loading...