ಇಂದು ಬೆಂಗಳೂರಿನಲ್ಲಿ 'Rally for Rivers' ಅಭಿಯಾನದಲ್ಲಿ ಭಾಗವಹಿಸಿ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 09: ನಶಿಸುತ್ತಿರುವ ನದಿಗಳನ್ನು ಉಳಿಸುವ ಉದ್ದೇಶದಿಂದ ಕೊಯಮತ್ತೂರಿನ ಈಶಾ ಫೌಂಡೇಷನ್ ನ ಸದ್ಗುರು ಜಗ್ಗಿ ವಾಸುದೇವ್ ಅವರು ಆರಂಭಿಸಿರುವ 'ನದಿಗಳನ್ನು ರಕ್ಷಿಸಿ ಅಭಿಯಾನ' (Rally for Rivers) ಇಂದು (ಸೆ.9) ಬೆಂಗಳೂರಿನಲ್ಲಿ ನಡೆಯಲಿದೆ.

ರ‍್ಯಾಲಿ ಫಾರ್ ರಿವರ್ ಅಭಿಯಾನದ ಸಲುವಾಗಿ ನಗರದ ಅರಮನೆ ಮೈದಾನದಲ್ಲಿ ಶನಿವಾರ ಸಂಜೆ 5 ಗಂಟೆಗೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

Jaggi Vasudev's 'The Rally for Rivers' will be held in Bangaluru today

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಅನಂತ ಕುಮಾರ್ ಮತ್ತು ಡಿ.ವಿ.ಸದಾನಂದ ಗೌಡ, ರಾಜ್ಯದ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ನಟ ಪುನೀತ್ ರಾಜಕುಮಾರ್ ಹಾಗೂ ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಪಾಲ್ಗೊಳ್ಳಲಿದ್ದಾರೆ.

Rally for Rivers ಗೆ ಮೈಸೂರು ಆನೆರಾಯನ ಬೆಂಬಲ!

ಶುಕ್ರವಾರ (ಸೆ,08) ಮೈಸೂರಿನಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ದೇಶದ 16 ರಾಜ್ಯಗಳ ಮೂಲಕ ಸಂಚರಿಸಲಿರುವ ಈ ರ‍್ಯಾಲಿಗೆ ಕೊಯಮುತ್ತೂರಿನಲ್ಲಿ ಇದೇ 3ರಂದು ಚಾಲನೆ ನೀಡಲಾಗಿತ್ತು.

ಮದುರೈ, ಕನ್ಯಾಕುಮಾರಿ, ತಿರುವನಂತಪುರ, ತಿರುಚಿನಾಪಳ್ಳಿ, ಪುದುಚೇರಿ ಮಾರ್ಗವಾಗಿ ಸಾಗಿಬಂದ ರ‍್ಯಾಲಿ ಬೆಂಗಳೂರಿನ ಮೂಲಕ ಚೆನ್ನೈ ತಲುಪಲಿದೆ. ಅಕ್ಟೋಬರ್‌ 2ರಂದು ನವದೆಹಲಿಯಲ್ಲಿ ರ‍್ಯಾಲಿ ಫಾರ್ ರಿವರ್ ಕೊನೆಗೊಳ್ಳಲಿದೆ.

ಸಾರ್ವಜನಿಕರು 8000980009 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಅಭಿಯಾನಕ್ಕೆ ಬೆಂಬಲ ಸೂಚಿಸಬಹುದು' ಎಂದು ಈಶಾ ಫೌಂಡೇಷನ್ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Rally for Rivers, launched by Sadhguru Jaggi Vasudev of the Esha Foundation in Coimbatore, will be held in Bangaluru, Shri Krishna Vihar, Mekrhi Circle Palace Grounds, today (Sep. 9).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ