ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ನಡೆದ Rally For Rivers ಅಭಿಯಾನದ ನೋಟ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 09: ನಶಿಸುತ್ತಿರುವ ನದಿಗಳನ್ನು ಉಳಿಸುವ ಉದ್ದೇಶದಿಂದ ಕೊಯಮತ್ತೂರಿನ ಈಶಾ ಫೌಂಡೇಷನ್ ನ ಸದ್ಗುರು ಜಗ್ಗಿ ವಾಸುದೇವ್ ಅವರು ಆರಂಭಿಸಿರುವ 'ನದಿಗಳನ್ನು ರಕ್ಷಿಸಿ ಅಭಿಯಾನ' ಕ್ಕೆ (Rally for Rivers) ಇಂದು (ಸೆ.9) ಬೆಂಗಳೂರಿನಲ್ಲಿ ಅಭೂತ ಬೆಂಬಲ ವ್ಯಕ್ತವಾಯಿತು.

In Pics: ನದಿಗಳನ್ನು ಉಳಿಸಿ ಎಂದು ಬೆಂಗಳೂರಲ್ಲಿ ಕರೆ ಕೊಟ್ಟ ಸದ್ಗುರು

ಅರಮನೆ ಮೈದಾನದಲ್ಲಿ ನಡೆದ ಈ ಅಭಿಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಇಪ್ಪತ್ತೈದು ಕೋಟಿ ಸಸಿ ನಡುವ ಒಡಂಬಡಿಕೆಗೆ ಸಹಿ ಹಾಕುವ ಮೂಲಕ Rally for rivers ಅಭಿಯಾನಕ್ಕೆ ಬೆಂಬಲ ಸೂಚಿಸಿದರು.

'ನದಿಗಳನ್ನು ರಕ್ಷಿಸಿ ಅಭಿಯಾನ' ಕ್ಕೆ ಎಂಬ ಅಭಿಯಾನದಡಿ ಇಡೀ ದೇಶದಾದ್ಯಂತ ಸುತ್ತುವ ಯೋಜನೆ ಹಾಕಿಕೊಂಡಿರುವ ಸದ್ಗುರು ಜಗ್ಗಿ ವಾಸುದೇವ್ ಮಾತನಾಡಿ, ನಮ್ಮ ನದಿಗಳ ದುಸ್ಥಿತಿಯ ಕುರಿತು ಅರಿವು ಮೂಡಿಸಬೇಕಿದೆ. ಮುಂದಿನ ಪೀಳಿಗೆಗೆ ನಾವು ನೀಡಬೇಕಾಗಿರುವುದು ಸಮೃದ್ಧವಾದ ನದಿ-ನೆಲ ಮಾತ್ರ. ಆದ್ದರಿಂದ ಜನಜಾಗೃತಿ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಿ. ಇದು ಚಳವಳಿಯಲ್ಲ. ಇದೊಂದು ಅಭಿಯಾನ' ಎಂದು ಅವರು ತಿಳಿಸಿದರು.

Rally for Rivers: ಕೆ ಆರ್ ಎಸ್ ಹಿನ್ನೀರಿನಲ್ಲಿ ಸದ್ಗುರು ಪೂಜೆRally for Rivers: ಕೆ ಆರ್ ಎಸ್ ಹಿನ್ನೀರಿನಲ್ಲಿ ಸದ್ಗುರು ಪೂಜೆ

ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಇಂದಿನ ದಿನಗಳ ನೀರು ಎಲ್ಲರಿಗೂ ಅವಶ್ಯವಾಗಿದೆ. ಹಾಗಾಗಿ ಮುಂದೆ ನೀರು ಸಿಗಬೇಕಾದರೆ ನದಿಗಳನ್ನು ಉಳಿಕೊಳ್ಳುವುದು ಅಗತ್ಯವಾಗಿದೆ. ಸದ್ಗರುಗಳು ಮಾಡುತ್ತಿರುವ ಈ ಕಾರ್ಯ ಶ್ಲಾಘನೀಯವಾದದ್ದು. ಇವರು ಕೈಗೆತ್ತಿಕೊಂಡಿರುವ ಪುಣ್ಯದ ಕೆಲಸಕ್ಕೆ ನಮ್ಮ ಸರ್ಕಾರದ ಬೆಂಬಲ ಇದ್ದೆ ಇರುತ್ತದೆ ಎಂದು ಭರವಸೆ ನೀಡಿದರು.

ಸರ್ಕಾರ ರಾಜ್ಯದ ನದಿ ದಂಡೆಯಲ್ಲಿ 25 ಕೋಟಿ ಸಸಿ ನಡುವ ಭರವಸೆಯನ್ನು ನೀಡಿದರು. ಈ ವೇಳೆ ಕೇಂದ್ರ ಸಚಿವ ಅನಂತ್ ಕುಮಾರ್ ಮಾತನಾಡಿ, ನಾನು ಒಬ್ಬ ಸಚಿವನಾಗಿ ಅಥವಾ ರಾಜಕಾರಣಿಯಾಗಿ ಇಲ್ಲಿ ಬಂದಿಲ್ಲ. ಒಬ್ಬ ನದಿ ವೀರನಾಗಿ ಇಲ್ಲಿ ಬಂದಿದ್ದೇನೆ ಎಂದರು.

ಕೇಂದ್ರ ಸರ್ಕಾರ ಈಗಾಗೇ ನದಿ ಜೋಡಣೆಗೆ ಕೈ ಹಾಕಿದೆ. ಸದ್ಗುರುಗಳು ಸಹ ನದಿಗಳ ಉಳುವಿಗಾಗಿ ಅಭಿಯಾನಯ ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸದಾ ಬೆನ್ನೆಲುಬಾಗಿ ನಿಲ್ಲುತ್ತದೆ.

ಈ ಅಭಿಯಾನ ಕೈಗೊಂಡಿರುವ ಬರುವ ಬಗ್ಗೆ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಹಾಗೂ ನರೇಂದ್ರ ಮೋಧಿ ಅವರಿಗೆ ತಿಳಿಸಿ ಸದ್ಗುರುಗಳನ್ನು ಬೇಟಿ ಮಾಡಿಸುತ್ತೇನೆ ಎಂದು ಹೇಳಿದರು.

ನದಿಗಳನ್ನು ರಕ್ಷಿಸಿ ಅಭಿಯಾನದ ಉದ್ದೇಶವೇನು?

ನದಿಗಳನ್ನು ರಕ್ಷಿಸಿ ಅಭಿಯಾನದ ಉದ್ದೇಶವೇನು?

ಭಾರತದ ನದಿಗಳು ದುಸ್ಥಿತಿಗೆ ಬಂದಿದ್ದು, ಒಂದೊಮ್ಮೆ ವರ್ಷಾವಧಿ ಹರಿಯುತ್ತಿದ್ದ ನದಿಗಳು ಇಂದು ಮಳೆಗಾಲದಲ್ಲಿ ಮಾತ್ರ ಹರಿಯುತ್ತಿವೆ. ಅದೆಷ್ಟೋ ಸಣ್ಣ-ಸಣ್ಣ ನದಿಗಳು ಹೆಸರಿಲ್ಲದೆ ಮಾಯಾವಾಗಿವೆ. ಕೃಷ್ಣ, ಗಂಗಾ, ನರ್ಮದಾ ಹಾಗೂ ಕಾವೇರಿ ನದಿಗಳು ಬತ್ತಿ ಹೋಗುತ್ತಿವೆ. ಈಗಲೇ ಇವುಗಳಿಗೊಂದು ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನದಿ ನೀರಿಗಾಗಿ ರಾಜ್ಯ-ರಾಜ್ಯಗಳ ನಡುವೆ ಸಂಘರ್ಷಗಳು ನಡೆಯುವುದರಲ್ಲಿ ಅನುಮಾನವಿಲ್ಲ. ಇದರಿಂದ ನದಿಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಸದ್ಗುರುಗಳು ಸ್ವಯಂ ವಾಹನ ಚಾಲಾಯಿಸಿಕೊಂಡು ಕನ್ಯಾಕುಮಾರಿಯಿಂದ ಹಿಮಾಲಯಾದವರೆಗೆ ನದಿ ಉಳಿಸಿ ಎಂಬ ಅಭಿಯಾನ ಕೈಗೊಂಡಿದ್ದಾರೆ.

25 ಕೋಟಿ ಸಸಿ ನಡುವ ಒಡಂಬಡಿಕೆಗೆ ಸಹಿ

25 ಕೋಟಿ ಸಸಿ ನಡುವ ಒಡಂಬಡಿಕೆಗೆ ಸಹಿ

ಅರಮನೆ ಮೈದಾನದಲ್ಲಿ ನಡೆದ ಈ ಅಭಿಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ 25 ಕೋಟಿ ಸಸಿ ನಡುವ ಒಡಂಬಡಿಕೆಗೆ ಸಹಿ ಹಾಕುವ ಮೂಲಕ Rally for rivers ಅಭಿಯಾನಕ್ಕೆ ಬೆಂಬಲ ಸೂಚಿಸಿದರು.

ನದಿ ಉಳಿಸಿ ಅಭಿಯಾನದ ಬಗ್ಗೆ ಒಂದಿಷ್ಟು ತಿಳಿಯಿರಿ

ನದಿ ಉಳಿಸಿ ಅಭಿಯಾನದ ಬಗ್ಗೆ ಒಂದಿಷ್ಟು ತಿಳಿಯಿರಿ

ಸೆಪ್ಟೆಂಬರ್ 1ರಿಂದ ಆರಂಭವಾಗಿರುವ 'ನದಿ ಉಳಿಸಿ ಎಂಬ ಜನಜಾಗೃತಿ ಮೂಡಿಸುವ ಪ್ರಯತ್ನ ದೇಶದಾದ್ಯಂತ ನಡೆಯಲಿದೆ. ಬಾರತದ ಅರವತ್ತಕ್ಕೂ ಹೆಚ್ಚಿನ ನಗರಗಳಲ್ಲಿನ ಲಕ್ಷಾಂತರ ಜನರು ನದಿ ಉಳಿಸಿ ಎಂಬ ಸಂದೇಶವನ್ನು ಸಾರುವ ಟಿ-ಶರ್ಟ್, ಕ್ಯಾಪ್ ಗಳನ್ನು ಧರಿಸಿ ಜತಗೆ ಫಲಕಗಳನ್ನು ಹಿಡಿದು ಸಾರ್ವಜನಿಕರಲ್ಲಿ 80009 8009 ನಂಬರಿಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಈ ಅಭಿಯಾನಕ್ಕೆ ಬೆಂಬಲ ಸೂಚಿಸುವಂತೆ ಕೋರುತ್ತಿದ್ದಾರೆ. ಈ ಅಭಿಯಾನವನ್ನು ನೀವೂ ಕೂಡ 80009 80009 ನಂಬರಿಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಬೆಂಬಲಿಸಬಹುದು. ಕೇವಲ ಮಿಸ್ಡ್ ಕಾಲ್ ಮೂಲಕ ನೀವು ದೇಶದ ನದಿಗಳನ್ನು ರಕ್ಷಿಸುವುದರಲ್ಲಿ ನಿಮ್ಮ ಭಾಗದ ಜವಬ್ದಾರಿಯನ್ನು ಪೂರೈಸಬಹುದು.

ಈವರೆಗೆ ನಡೆದ ಹಾಗೂ ಮುಂದೆ ನಡೆಯುವ ಅಭಿಯಾನ

ಈವರೆಗೆ ನಡೆದ ಹಾಗೂ ಮುಂದೆ ನಡೆಯುವ ಅಭಿಯಾನ

3 ಸೆಪ್ಟೆಂಬರ್-ಕೊಯಮತ್ತೂರು, ಸೆ.4 ಮುದುರೈ ಮತ್ತು ಕನ್ಯಾಕುಮಾರಿ, ಸೆ,5 ತಿರುವನಂತಪುರ, ಸೆ.6 ತಿರುಚಿನಪಳ್ಳಿ, ಸೆ.7 ಪುದುಚೇರಿ, ಸೆ. 8 ಮೈಸೂರು, ಸೆ.9 ಬೆಂಗಳೂರು, ಸೆ. 10ಚೆನ್ನೈ, ಸೆ.13 ವಿಜಯವಾಡ, ಸೆ.14 ಹೈದರಾಬಾದ್, ಸೆ.17 ಮುಂಬೈ, ಸೆ.20 ಅಹಮದಾಬಾದ್, ಸೆ.23 ಇಂದೋರ್, ಸೆ.24 ಭೋಪಾಲ್, ಸೆ. 26 ಲಖನೌ, ಸೆ.28 ಜಯಪುರ, ಸೆ.29 ಚಂಡೀಗಡ, ಅ. 01 ಹರಿದ್ವಾರ, ಅ.02 ದೆಹಲಿ.

English summary
Sadhguru Jaggi Vasudev, who is planning to move across the country under the Rally for River campaign held in Palace Ground, Bengaluru on September 9th. And CM siddaramaiah signed the convenant to plant as many as 25Cr plants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X