ಅಂಬರೀಶ್ ಅವನತಿಗೆ ಕಾರಣವಾದ ಹೆಂಗಸಿನ ಬಗ್ಗೆ ಜಗ್ಗೇಶ್ ಟ್ವೀಟ್

Posted By:
Subscribe to Oneindia Kannada

ಬೆಂಗಳೂರು, ಜೂನ್ 19: ವಸತಿ ಸಚಿವ ಎಂಎಚ್ ಅಂಬರೀಶ್ ಅವರನು ಸಂಪುಟದಿಂದ ಕೈಬಿಟ್ಟ ಸುದ್ದಿ ಮಂಡ್ಯದಲ್ಲಷ್ಟೇ ಅಲ್ಲ ಸಿನಿಮಾರಂಗಕ್ಕೂ ನೋವು ತಂದಿದೆ. ನಟ ಕಮ್ ರಾಜಕಾರಣಿ ಜಗ್ಗೇಶ್ ಅವರು ತಮ್ಮ ನೋವನ್ನು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ತೋಡಿಕೊಂಡಿದ್ದಾರೆ. ಅಂಬರೀಶ್ ಅವರ ಅವನತಿಗೆ ಕಾರಣವಾದ 'ಹೆಂಗಸಿನ' ಬಗ್ಗೆ ಮಾತನಾಡಿದ್ದಾರೆ.

ಮಂಡ್ಯದ ಸಂಜಯ್ ವೃತ್ತದಲ್ಲಿ ಅಭಿಮಾನಿ ದ್ಯಾವಪ್ಪ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಬೆಂಗಳೂರು- ಮೈಸೂರು ರಸ್ತೆಯನ್ನು ಬಂದ್ ಮಾಡಲಾಗಿದೆ. [ಚನ್ನಪಟ್ಟಣದ ಶಾಸಕ ಸಿಪಿ ಯೋಗೇಶ್ವರ್ ಗೆ ಸಚಿವ 'ಭಾಗ್ಯ'?]

ಚಿತ್ರರಂಗದ ಅನೇಕ ಗಣ್ಯರು ಅಂಬರೀಶ್ ಅವರನ್ನು ಸಂಪುಟದಲ್ಲಿ ಉಳಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಜಗ್ಗೇಶ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಹಾಕಿರುವ ಪೋಸ್ಟ್ ಯಥಾವತ್ತಾಗಿ ಇಲ್ಲಿ ನೀಡಲಾಗಿದೆ. [ಸಚಿವ ಸಂಪುಟ ವಿಸ್ತರಣೆ, ಲೇಟೆಸ್ಟ್ ಸುದ್ದಿ ಏನಿದೆ?]

Actor-politician Jaggesh Facebook Post

ಇಂದು ಕನ್ನಡದ ಮೇರುನಟ ನೇರನುಡಿಯ ಮಗುವಿನ ಮನಸ್ಸಿನಂತ ಮನುಷ್ಯನಿಗೆ ಯಾವ ತಪ್ಪು ಮಾಡದೆ ಪ್ರಾಮಾಣಿಕವಾಗಿ ನಡೆದುಕೊಂಡವರಿಗೆ ಮಂತ್ರಿ ಪದವಿಯಿಂದ ಮುಕ್ತಗೊಳಿಸಿ ತಮಾನದ ‪#‎Congress‬ ಪಕ್ಷ ತಪ್ಪುಮಾಡಿಬಿಟ್ಟಿತು!!..[ಸಂಪುಟದಿಂದ ಅಂಬರೀಶ್ ಕಿಕ್ ಔಟ್: ಕನ್ನಡ ಚಿತ್ರೋದ್ಯಮ ಬಂದ್.!]

ಅದರಲ್ಲು ಒಬ್ಬ ಹೆಂಗಸಿನಿಂದ ಅಂತ ಟೀವಿಲಿ ನೋಡಿದ ಮೇಲಂತು ಬಹಳ ನೊಂದುಕೊಂಡೆ ಕಾರಣ ನಾನು ಅಂಬರೀಶರನ್ನ 1983ರಿಂದ ಬಲ್ಲೆ... ಆತ ಬೇದಭಾವ ಮಾಡದೆ ಎಲ್ಲರನ್ನು ಸಮಾನವಾಗಿ ಕೂರಿಸಿ ತಾನು ತಿನ್ನುವ ಊಟವನ್ನೆ ಹಂಚಿ ತಿನ್ನುವ ವಿಶಾಲಹೃದಯಿ... ಅವರ ಒಂದು ತಪ್ಪು ನಾನು ಕಂಡಿದ್ದು ದೇಹಿ ಅಂದವರನ್ನ ನಂಬೋದು... ಅದೆ ಇಂದು ಮುಳುವಾಯಿತು!! [ಶ್ರೀನಿವಾಸಪ್ರಸಾದ್ ರನ್ನು ಕೈಬಿಟ್ಟಿದ್ದಕ್ಕೆ ಮೈಸೂರಲ್ಲಿ ಆಕ್ರೋಶ]

ನನ್ನ ಮಗ ಗುರುರಾಜ ಅವರ ಚಿತ್ರದಲ್ಲಿ ಬಾಲನಟನಾಗಿ 88ರಲ್ಲಿ ನಟಿಸಿದ್ದ, ಆಗಲೆ ಅವರು ಮುಂದೆ ನಾನು ರಾಜಕೀಯದಲ್ಲಿ ಸೇರಿ ಗೆದ್ದು ಎಂಪಿಯಾಗಿ ಮಂತ್ರಿಯಾಗುತ್ತೇನೆ ಅಂದಿದ್ದರು, ಅಷ್ಟು ಅವರಲ್ಲಿ ಅವರಿಗೆ ವಿಶ್ವಾಸವಿತ್ತು... ಅವರ ಪ್ರಥಮ ಚುನಾವಣೆಯಲ್ಲಿ ರಾಮನಗರದಲ್ಲಿ ಅಲ್ಪ ಮತದಲ್ಲಿ ಸೋತಾಗ ನಾನು ಅತ್ತಿದ್ದೆ...[ಸಂಪುಟದಿಂದ ಹೊರಹೋಗಲಿರುವ 13 ಸಚಿವರು ಇವರೇ]

ನಂತರ ನಡೆದ ಮಂಡ್ಯ ಎಂಪಿ ಚುನಾವಣೆಯಲ್ಲಿ ಸುಮಾರು 400ಹಳ್ಳಿ ಅವರಿಗಾಗಿ ಸುತ್ತಿ ಪ್ರಚಾರ ಮಾಡಿ ಗೆದ್ದಾಗ ಕುಡಿದು ಕುಪ್ಪಳಿಸಿದ್ದೆ... ಶ್ರೀ ಬಾಲಗಂಗಾಧರ ಸ್ವಾಮೀಜಿ ನೇತೃತ್ವದ ಒಕ್ಕಲಿಗರ ಇತಿಹಾಸದ ಪ್ರತಿಭಟನೆಯಲ್ಲಿ ಅವರೊಟ್ಟಿಗೆ ಭಾಗವಹಿಸಿದ್ದೆ... ಅವರ ಅನೇಕ ಚಿತ್ರದಲ್ಲಿ ಸಹನಟನಾಗಿದ್ದೆ... ನನ್ನ ಪ್ರಥಮ ನಾಯಕ ನಟ ಚಿತ್ರ "ಭಂಡ ನನ್ನ ಗಂಡ" ಚಿತ್ರದಲ್ಲಿ ಹಿಂದುಮುಂದು ನೋಡದೆ ಪೋಷಕ ಪಾತ್ರ ಮಾಡಿ ನನಗೆ ಪ್ರೋತ್ಸಾಹಿಸಿದರು...[ಸಿದ್ದರಾಮಯ್ಯ ಸಂಪುಟ ಪುನಾರಚನೆ, ಮುಂದೇನು?]

ಇವೆ ನನ್ನ ಅವರ ಒಡನಾಟದ ಸಂಬಂಧ... ಅವರೆ ಬೇರೆ ಪಕ್ಷ, ನಾನೆ ಬೇರೆ ಪಕ್ಷ, ಆದರು ಅವರು ನನ್ನ ಅಣ್ಣನಂತೆ ಭಾವನೆ... ಇಡೀ ಕಾಂಗ್ರೇಸ್ ಪಕ್ಷದ ನಾಯಕರು ಒಟ್ಟು ಸೇರಿದರು ಅಂಬರೀಶ್ ಸಮ ಆಗಲು ಅಸಾಧ್ಯ... ಅಂತ ವ್ಯಕ್ತಿಯನ್ನ ಕಣ್ಣು ಬಿಡದ ಎಳಸು ಚಾಡಿಗೆ ಕೈಬಿಡುತ್ತಾರೆಂದರೆ ಇದಕ್ಕಿಂತ ದುರಂತ ಬೇರೆ ಯಾವುದಿಲ್ಲಾ ಅನ್ನಿಸಿತು...[ಸಚಿವ ಸ್ಥಾನ ಕೊಕ್ ಭೀತಿಯಲ್ಲಿರುವ ಅಂಬಿಗೆ ಜೆಡಿಎಸ್ ಆಫರ್]

ರಾಜಕೀಯ ಪದವಿ 5 ವರ್ಷ ಆದರೆ ಅವರ ಮೇಲೆ ಕನ್ನಡಿಗರ ಪ್ರೀತಿ ಶತಮಾನಗಳೂ ದಾಟಿ... Dear Ambi Sir ನೀವು ನೀವೆ :) 2018 ಕ್ಕೆ ಕರ್ನಾಟಕದ ಜನ ರಾಜಕೀಯ ಬದಲಾವಣೆ ಮಾಡುತ್ತಾರೆ ಎಲ್ಲರನ್ನ ಮರೆಯುತ್ತಾರೆ...ನೀವು ಮಾತ್ರ ಕನ್ನಡಿಗರ ಹೃದಯದಲ್ಲಿ ಉಳಿಯುತ್ತೀರ... ಹೊಡಿರಿ ಗೋಲಿ... ಹಚ್ಚಿ ಬಣ್ಣ... ಪಡಿರಿ ಚಪ್ಪಾಳೆ... ಉರಿಲಿ ಉರಿಸಿದವರ ತಳ!! ಯಾರು ಏನೇ ಮಾಡಿದ್ರು ನೀವು ಬರೀ ಮಂಡ್ಯದ ಗಂಡಲ್ಲ, ಕರ್ನಾಟಕದ ಗಂಡು... ಇಡೀ ಚಿತ್ರರಂಗ ನಿಮ್ಮೊಟ್ಟಿಗೆ ‪#‎ಕನ್ನಡಿಗ‬... ಶುಭರಾತ್ರಿ...

ಅಂಬರೀಶ್ ಅವನತಿಗೆ ಕಾರಣವಾದ ಹೆಂಗಸಿನ ಬಗ್ಗೆ ಜಗ್ಗೇಶ್ ಟ್ವೀಟ್

ಅಂಬರೀಶ್ ಅವನತಿಗೆ ಕಾರಣವಾದ ಹೆಂಗಸಿನ ಬಗ್ಗೆ ಜಗ್ಗೇಶ್ ಟ್ವೀಟ್

-
-
-
-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Actor-politician Jaggesh in his latest Facebook, Twitter post blamed a woman who is allegedly responsible for downfall of Minister Ambareesh. Jaggesh also extended his support to Ambareesh
Please Wait while comments are loading...