ನೆಲಮಂಗಲ, ಕಾಡಾನೆ ತುಳಿತಕ್ಕೆ ಯುವಕ ಬಲಿ: ಗ್ರಾಮಸ್ಥರ ಆಕ್ರೋಶ

Posted By:
Subscribe to Oneindia Kannada

ನೆಲಮಂಗಲ, ಡಿಸೆಂಬರ್ 23: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ವ್ಯಾಪ್ತಿಯ ಗಂಗೇನಹಳ್ಳಿಯಲ್ಲಿ ಕಾಡಾನೆ ದಾಳಿ ಮಾಡಿದ್ದು ಯುವಕನೊಬ್ಬ ಹತನಾಗಿದ್ದು, ಸ್ಥಳಕ್ಕಾಗಮಿಸಿದ ಹೋಮ್ ಗಾರ್ಡ್ ಮೇಲೆ ಗ್ರಾಮಸ್ಥರು ಸಿಟ್ಟುತೀರಿಸಿಕೊಂಡ ಘಟನೆ ಜರುಗಿದೆ.

ಸಾವಿಗೀಡಾಗಿರುವ ಯುವಕ ನೆಲಮಂಗಲ ತಾಲೂಕಿನ ಗಂಗೇನಹಳ್ಳಿಗ್ರಾಮದ ಗುರುನಂಜಪ್ಪ(22) ಎನ್ನಲಾಗಿದೆ. ಗುರುವಾರ ರಾತ್ರಿ ಮನೆಯಿಂದ ಹೊರಬಂದು ತನ್ನ ತೋಟಕ್ಕೆ ತೆರಳುತ್ತಿದ್ದ ಗುರು ಮೇಲೆ ಕಾಡಾನೆ ದಾಳಿ ಮಾಡಿದ್ದು, ಆನೆಯ ತುಳಿತದಿಂದ ಗುರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.[ಚಾಮರಾಜನಗರ: ಕಾಡಾನೆ ದಾಳಿಗೆ ಕಾಲು ಮುರಿದುಕೊಂಡ ರೈತ]

Jackboot wild elephant killed a young man in gangenahalli

ಮರುದಿನ ಸ್ಥಳದಲ್ಲಿ ನೋಡಿದ ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಆರಕ್ಷಕರಿಗೆ ಸುದ್ದಿ ಮುಟ್ಟಿಸಿದರು. ಸಮಯಕ್ಕೆ ಸರಿಯಾಗಿ ಬಾರದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಗಂಗೇನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದು, ಸ್ಥಳಕ್ಕೆ ಬಂದ ಹೋಮ್ ಗಾರ್ಡ್ ನನ್ನು ಥಳಿಸಿ ತಮ್ಮ ಸಿಟ್ಟ ತೀರಿಸಿಕೊಂಡರು. [ಚಿತ್ರದುರ್ಗದಲ್ಲಿ ಆನೆ ದಾಳಿಗೆ ಗರ್ಭಿಣಿ ಬಲಿ]

ಡಾಬಾಸ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದ್ದು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ದೂರು ದಾಖಲಿಸಿಕೊಂಡರು.ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಹೋಮ್ ಗಾರ್ಡ್ ಮೇಲೆ ಆಕ್ರೋಶ ತೀರಿಸಿಕೊಂಡ ಜನರ ಮೇಲೆ ಕ್ರಮ ಜರುಗಲಿದೆಯೇ ನೋಡಬೇಕು?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jackboot wild elephant killed a young man in Gangenahalli, Bengalur rual. The forest department did not timely, Home Gard beating by villagers.
Please Wait while comments are loading...