ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಬಸ್‌ಗಳು ತಾಸಿಗೆ ಹದಿನೈದೇ ಕಿಮೀ ಓಡುತ್ತಂತೆ

By Nayana
|
Google Oneindia Kannada News

ಬೆಂಗಳೂರು, ಜು.13: ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಟ್ರಾಫಿಕ್‌ ಸಮಸ್ಯೆ ವಿಪರೀತವಾಗುತ್ತಿದೆ. ಇದು ದಿನನಿತ್ಯ ಬಸ್‌ ಸಂಚಾರಕ್ಕೆ ಶಾಪವಾಗಿ ಪರಿಣಮಿಸಿದೆ.

ನಾಲ್ಕೈದು ವರ್ಷಗಳ ಹಿಂದೆ ಗಂಟೆಗೆ ಸರಾಸರಿ 20 ಕಿ.ಮೀ ವೇಗದಲ್ಲಿ ಬೆಂಗಳೂರಿನಲ್ಲಿ ಬಸ್ ಸಂಚರಿಸುತ್ತಿದ್ದವು ಅದನ್ನು ಇದೀಗ 15ರಿಂದ 16 ಕಿ.ಮೀ ಇಳಿಕೆಯಾಗಿದೆ. ಇದರ ಪರಿಣಾಮವಾಗಿ ಬಸ್‌ ನಿಗದಿತ ಸಮಯದಲ್ಲಿ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಪ್ರಯಾಣಿಕರು ಬಿಎಂಟಿಸಿ ಮೇಲೆ ಕ್ರಮೇಣವಾಗಿ ನಂಬಿಕೆ ಕಳೆದುಕೊಳ್ಳುತ್ತಿದ್ದು, ಖಾಸಗಿ ವಾಹನ ಬಳಕೆ ಹೆಚ್ಚಾಗುತ್ತಿದೆ.

ಬಿಎಂಟಿಸಿ ಬಸ್‌ಪಾಸ್‌ ಅಂಚೆ ಮೂಲಕ ನೇರವಾಗಿ ವಿದ್ಯಾರ್ಥಿಗಳ ಮನೆಗೆಬಿಎಂಟಿಸಿ ಬಸ್‌ಪಾಸ್‌ ಅಂಚೆ ಮೂಲಕ ನೇರವಾಗಿ ವಿದ್ಯಾರ್ಥಿಗಳ ಮನೆಗೆ

3-4 ವರ್ಷಗಳ ಹಿಂದೆ ಮೆಜೆಸ್ಟಿಕ್‌ನಿಂದ ಕಾಡುಗುಡಿಗೆ 1.15 ಗಂಟೆಯಲ್ಲಿ ಬಸ್‌ ತಲುಪುತ್ತಿತ್ತು ಆದರೆ ಇದೀಗ 2.30 ತಾಸು ಹಿಡಿಯುತ್ತಿದೆ. ಚತುರ ಸಾರಿಗೆ ವ್ಯವಸ್ಥೆ ಮೂಲಕ ಪ್ರತಿ ಬಸ್‌ ಕಾರ್ಯಾಚರಣೆ ಅವಧಿ ನಿಗಮಕ್ಕೆ ಲಭ್ಯವಾಗುತ್ತಿದೆ. ಈ ಅಂಕಿ-ಅಂಶ ಬಳಸಿಕೊಂಡು ಅಂದಾಜು 3 ಸಾವಿರ ಟ್ರಿಪ್‌ಗಳ ವೇಳಾಪಟ್ಟಿ ಬದಲಾವಣೆಗೆ ನಿಗಮ ನಿರ್ಧರಿಸಿದೆ ಎಂದು ನಿಗಮ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್‌ ತಿಳಿಸಿದ್ದಾರೆ.

ITS reveals BMTC buses running out of time table!

ಐಟಿಎಸ್‌ ಬಳಸಿಕೊಂಡು ಬಿಎಂಟಿಸಿ ಅಪ್ಲಿಕೇಷನ್‌ ಮೂಲಕ ಬಸ್‌ ಇಂತಿಷ್ಟೇ ಸಮಯಕ್ಕೆ ನಿಲ್ದಾಣ ತಲುಪಲಿದೆ ಎಂದು ತಿಳಿಯಲು ಸಾಧ್ಯ, ಈಗಿರುವ ಬಸ್‌ ವಿಳಂಬದ ಹಿನ್ನೆಲೆಯಲ್ಲಿ ಈ ಅಂಕಿ-ಅಂಶ ನೀಡಲು ಸಾಧ್ಯವಾಗುತ್ತಿಲ್ಲ, ವೇಳಾಪಟ್ಟಿ ಬದಲಾವಣೆ ನಂತರ ಪ್ರಯಾಣಿಕರಿಗೆ ನಿಖರವಾದ ಮಾಹಿತಿ ದೊರೆಯಲಿದೆ ಎಂದು ಹೇಳಿದ್ದಾರೆ.

8.5 ಲಕ್ಷ ಕಿ.ಮೀ ಮೀರಿದ ಅಥವಾ 11 ವರ್ಷ ಮೀರಿದ ಬಸ್‌ಗಳನ್ನು ಗುಜರಿಗೆ ಹಾಕಲಾಗುತ್ತದೆ. 2017-8ನೇ ಸಾಲಿನಲ್ಲಿ 1,398 ಬಸ್‌ಗಳನ್ನು ಗುಜರಿಗೆ ಹಾಕಲು ನಿಗಮ ನಿರ್ಧರಿಸಿತ್ತು. ಇದರಲ್ಲಿ 898 ಬಸ್‌ಗಳನ್ನು ಗುಜರಿಗೆ ಹಾಕಲಾಗಿದೆ. 2018-19 ನೇ ಸಾಲಿನಲ್ಲಿ 1299 ಬಸ್‌ಗಳನ್ನು ಗುಜರಿಗೆ ಹಾಕಲು ಬಿಎಂಟಿಸಿ ನಿರ್ಧರಿಸಿದೆ.

ಒಟ್ಟು 3,158 ಹೊಸ ಬಸ್‌ ಖರೀದಿಗೆ ನಿಗಮ ನಿರ್ಧರಿಸಿದೆ. ಇದರಲ್ಲಿ 2017-18ರಲ್ಲಿ 1035 ಸಾಮಾನ್ಯ ಬಸ್‌ ಹಾಗೂ 151 ಹವಾನಿಯಂತ್ರಿತ ಬಸ್‌ ಖರೀದಿಸಲಾಗಿದೆ. 2018-19ರಲ್ಲಿ 268 ಹೊಸ ಬಸ್‌ ಸೇರ್ಪಡೆಯಾಗಿದೆ.

English summary
Intelligent Transport System has revealed that buses under BMTC running out of designated time because of heavy traffic in city. Following this data, corporation is thinking about revision of time table.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X