ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ತಿನ್ನೋಕೆ ಹೋದ ಡಿಸಿಎಂ ಪೇಚಿಗೆ ಸಿಲುಕಿದ್ರು

|
Google Oneindia Kannada News

Recommended Video

ಸ್ಪೂನ್ ಇಲ್ಲದೆ ಒದ್ದಾಡಿದ ಡಿಸಿಎಂ ಜಿ.ಪರಮೇಶ್ವರ್ | Oneindia Kannada

ಬೆಂಗಳೂರು, ನವೆಂಬರ್ 23: ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ತಿನ್ನಲು ಹೋಗಿ ಸ್ಪೂನ್ ಇಲ್ಲದೆ ಉಪಮುಖ್ಯಮಂತ್ರಿ ಜಿ ಪರಮೇಶ್ವರ ಪೇಚಿಗೆ ಸಿಲುಕಿರುವ ಘಟನೆ ಶುಕ್ರವಾರ ನಡೆಯಿತು.ಬೆಳ್ಳಬೆಳಗ್ಗೆ ಉಪಮುಖ್ಯಮಂತ್ರಿ ಜಿ ಪರಮೇಶ್ವರ ದಿಢೀರ್ ಬೆಂಗಳೂರು ಪ್ರದಕ್ಷಿಣೆ ಕೈಗೊಂಡರು.

ಸದಾಶಿವನಗರದ ಬಿಡಿಎ ಕ್ವಾರ್ಟರ್ಸ್‌ನಿಂದ ಹಲವು ಪ್ರದೇಶಗಳಿಗೆ ಅನಿರೀಕ್ಷಿತ ಬೇಟಿ ನೀಡಿದರು. ಆ ಸಂದರ್ಭದಲ್ಲಿ ಹಲವು ಇಂದಿರಾ ಕ್ಯಾಂಟೀನ್‌ಗಳಿಗೂ ಕೂಡ ಭೇಟಿ ನೀಡಿದರು. ದೇವಸಂಧ್ರ ರಾಮಕೃಷ್ಣ ದೇವಸ್ಥಾನ ವಾರ್ಡ್ ನಂಬರ್ 18ರ ಇಂದಿರಾ ಕ್ಯಾಂಟೀನ್‌ಗೆ ಡಿಸಿಎಂ ಭೇಟಿ ನೀಡಿದ್ದು ಅಲ್ಲಿಯೇ ತಿಂಡಿ ಸೇವಿಸಿದರು. ಡಿಸಿಎಂ ಪರಮೇಶ್ವರ್ ಭೇಟಿ ಕೊಟ್ಟ ಬಳಿಕ ಗಾಬರಿಗೊಂಡ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳು ಅವಸರವಾಗಿ ಕ್ಯಾಂಟೀನ್ ಶುಚಿ ಕಾರ್ಯದಲ್ಲಿ ತೊಡಗಿದರು.

Its funny, DCM asks spoon to have breakfast at Indira Canteen

 ಬಿಬಿಎಂಪಿ ಸದಸ್ಯರಿಗೆ ಲಕ್ಷುರಿ ಭೋಜನ ಬದಲು ಇಂದಿರಾ ಕ್ಯಾಂಟೀನ್ ಊಟ ಬಿಬಿಎಂಪಿ ಸದಸ್ಯರಿಗೆ ಲಕ್ಷುರಿ ಭೋಜನ ಬದಲು ಇಂದಿರಾ ಕ್ಯಾಂಟೀನ್ ಊಟ

ಇಂದಿರಾ ಕ್ಯಾಂಟೀನ್‌ನಲ್ಲಿ 2 ಸಾವಿರ ರೂ ನೀಡಿ ಟೋಕನ್ ಖರೀದಿಸಿದ ಪರಮೇಶ್ವರ ಬಿಸಿಬೇಳೆ ಬಾತ್ ಸವಿಯಲು ಹೊರಟರು ಆಗ ಚಮಚ ಇಲ್ಲದಿರುವುದನ್ನು ಗಮನಿಸಿ ತಿಂಡಿ ತಿನ್ನಲು ಸ್ಪೂನ್ ನೀಡುವುದಿಲ್ಲವೇ ಎಂದು ಪ್ರಶ್ನಿಸಿದರು.ಆಗ ಅವಸರವಸರವಾಗಿ ಸಿಬ್ಬಂದಿಗಳು ಚಮಚ ನೀಡಿದರು.

Its funny, DCM asks spoon to have breakfast at Indira Canteen

ಒಂದು ಇಂದಿರಾ ಕ್ಯಾಂಟೀನ್ ಬಣ್ಣ ಬದಲು, ಶುರುವಾಯ್ತು ಹೊಸ ವಿವಾದಒಂದು ಇಂದಿರಾ ಕ್ಯಾಂಟೀನ್ ಬಣ್ಣ ಬದಲು, ಶುರುವಾಯ್ತು ಹೊಸ ವಿವಾದ

ಡಾಲರ್ಸ್ ಕಾಲೊನಿಯಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ತೆರಳಿ ಸ್ವಚ್ಛತೆ ವೀಕ್ಷಿಸಿದ್ದಾರೆ, ಪರಮೇಶ್ವರ ಆಗಮನ ಹಿನ್ನೆಲೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಡಿಸಿಎಂ ಶಸ್ತ್ರ ಚಿಕಿತ್ಸಾ ಘಟಕಕ್ಕೆ ಚಪ್ಪಲಿ ಹಾಕಿಕೊಂಡು ಹೋಗಿ ಇನ್ನೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಬೆಳಗ್ಗೆ ಇಂದಿರಾ ಕ್ಯಾಂಟೀನ್ ಪರಿಶೀಲನೆ ಮುಗಿಸಿ ಆಸ್ಪತ್ರೆಗಳಿಗೆ ಭೇಟಿ ನೀಡಿದ ಪರಮೇಶ್ವರ ಗಂಗಾ ನಗರ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಾ ಘಟಕ, ಹೆರಿಗೆ ವಾರ್ಡ್‌ಗಳಿಗೆ ಚಪ್ಪಲಿ ಹಾಕಿಕೊಂಡೇ ಹೋಗಿದ್ದಾರೆ.

English summary
Deputy chief minister Dr.G. Parameshwar has asked spoon to have breakfast at Indira canteen during his surprise visit on Friday. But staff of the canteen were helpless that they was no practice of provide spoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X