ಎಂಟಿಆರ್ ಎಂಬ ಬೆಂಗಳೂರಿನ ತಿಂಡಿಪೋತರ ಸ್ವರ್ಗ

Posted By:
Subscribe to Oneindia Kannada

ಬೆಂಗಳೂರು, ಜೂನ್ 17: ವಾರಾಂತ್ಯಕ್ಕೆ ಬಂದು ನಿಂತಿದ್ದೇವೆ. ಮನೆಯವರ ಜತೆಗೋ ಸ್ನೇಹಿತರೊಂದಿಗೋ ಸಂಜೆ ಒಂದೊಳ್ಳೆ ಹೋಟೆಲ್ ಗೆ ಹೋಗಿ, ಮನಸಾರೆ ತಿಂಡಿ ತಿಂದು, ಪಟ್ಟಾಂಗ ಹೊಡೆದು, ಸಿನಿಮಾ ನೋಡಿ ಬರೋಣ ಎಂದು ನೀವಂದು ಕೊಂಡಿದ್ದರೆ ಬೆಂಗಳೂರಿನಲ್ಲೇ ತುಂಬ ಹೆಸರುವಾಸಿಯಾದ ಹೋಟೆಲಿನ ಪರಿಚಯ ನಿಮಗೆ ಮತ್ತೆ ಮಾಡಿಸ್ತಿದೀವಿ.

ಎಂಟಿಆರ್‌ನಲ್ಲಿ ದೋಸೆ, ರವಾ ಇಡ್ಲಿ, ಹಲ್ವಾ ಸವಿದ ಸಿಎಂ

ಮಾವಳ್ಳಿ ಟಿಫನ್ ರೂಮ್ಸ್ (ಎಂಟಿಆರ್)ನ ಬಗ್ಗೆ ನಿಮಗೆ ತಿಳಿಸುವ ಪ್ರಯತ್ನದ ಫಲವೇ ಈ ಲೇಖನ. ಊರ್ವಶಿ ಚಿತ್ರಮಂದಿರದ ಹತ್ತಿರವೇ ಇರುವ ಎಂಟಿಆರ್ ನಲ್ಲಿ ಮಧ್ಯಾಹದ ಊಟ ಭರ್ಜರಿಯಾಗಿರುತ್ತದೆ. ಆದರೆ ಸಂಜೆ ತಿಂಡಿಯದು ಮತ್ತೊಂದು ಬಗೆ. ಅಂದರೆ ಶುದ್ಧ, ಸ್ವಚ್ಛ, ಬಾಯಲ್ಲಿ ನೀರೂರಿಸುವ ತಿಂಡಿಗಳನ್ನು ಅಲ್ಲೇ ತಿನ್ನಬೇಕು.

It's all about Bengaluru MTR hotel

ನಾವು ಅಲ್ಲಿಗೆ ಹೋದರೆ ಐದಾರು ಮಂದಿ ಹೋಗೇ ಹೋಗ್ತೀವಿ. ಅದರಲ್ಲೂ ಶನಿವಾರವನ್ನೇ ಆಯ್ಕೆ ಮಾಡಿಕೊಳ್ತೀವಿ. ಏಕೆಂದರೆ ಅವತ್ತು ಬಾದಾಮಿ ಹಲ್ವಾ ಮಾಡುತ್ತಾರೆ. ಅದು ಅದ್ಭುತ ಎಂಬಂತೆ ಇರುತ್ತದೆ. ಇನ್ನು ಐದಾರು ಜನ ಏಕೆ ಹೋಗ್ತೀವಿ ಅಂದರೆ ಒಂದೊಂದೆ ತಿಂಡಿ ಆರ್ಡರ್ ಮಾಡಿ ಎಲ್ಲವನ್ನೂ ರುಚಿ ನೋಡಬಹುದು ಎಂಬ ಕಾರಣಕ್ಕೆ.

ಸಿಂಗಪುರದಲ್ಲಿ ಎಂಟಿಆರ್ ಮಾಲೀಕರ ಸಂದರ್ಶನ

ವಡೆ-ಸಾಂಬಾರ್, ಮೊಸರು ವಡೆ, ರವೆ ಇಡ್ಲಿ, ಮಸಾಲೆ ದೋಸೆ, ಕೇಸರಿ ಬಾತ್, ಉಪ್ಪಿಟ್ಟು, ರವೆ ದೋಸೆ, ಜಾಮೂನ್, ಬಾದಾಮಿ ಹಲ್ವಾ, ಬಿಸಿಬೇಳೆ ಬಾತ್, ಮಿಕ್ಸ್ಚರ್, ಚಂದ್ರಹಾರ, ಕಾಫಿ, ಮಾವಿನ ಹಣ್ಣಿನ ರಸ (ಸೀಸನ್ ನಲ್ಲಿ ಮಾತ್ರ). ಫ್ರೂಟ್ ಸಲಾಡ್ ವಿಥ್ ಐಸ್ ಕ್ರೀಂ...ಹೀಗೆ ಪಟ್ಟಿ ಬೆಳೆಯುತ್ತದೆ.

It's all about Bengaluru MTR hotel

ಮಧ್ಯಾಹ್ನ ಊಟದ ಪಾಳಿ ಮುಗಿದ ತಕ್ಷಣ ತಿಂಡಿಯನ್ನು ವಿತರಿಸಲು ಆರಂಭಿಸಲಾಗುತ್ತದೆ. ಅಂದರೆ ಮಧ್ಯಾಹ್ನ ಮೂರು ಮೂವತ್ತರ ಸುಮಾರಿಗೆ ಊಟ ಬಂದ್ ಆಗುತ್ತದೆ. ನಾಲ್ಕು ಗಂಟೆ ಹೊತ್ತಿಗೆ ತಿಂಡಿ ಸರದಿ ಶುರುವಾಗುತ್ತದೆ. ಮತ್ತು ಶನಿವಾರ ಹಾಗೂ ಭಾನುವಾರಗಳಂದು ಮಾತ್ರ ರಾತ್ರಿ ವೇಳೆ ಇಲ್ಲಿ ಊಟ ಇರುತ್ತದೆ.

ಸಿಂಗಪುರದಲ್ಲಿ ಮಾವಳ್ಳಿ ಟಿಫಿನ್ ರೂಮ್ಸ್

ವಿಪರೀತ ಜನ ಇರುತ್ತಾರೆ ಆದ್ದರಿಂದ ಮುಂಚಿತವಾಗಿಯೇ ಸೀಟು ಕಾದಿರಿಸಿ ಹೋಗುವುದು ಉತ್ತಮ. ಬೆಳಗ್ಗೆ 6.30ಕ್ಕೆ ಹೋಟೆಲ್ ಆರಂಭವಾಗುತ್ತದೆ. ಬೆಳಗ್ಗೆ 11.30ರಿಂದ ಮಧ್ಯಾಹ್ನ 3.30ರವರೆಗೆ ಊಟ ಹಾಗೂ ಸಂಜೆ 4ರ ನಂತರ ತಿಂಡಿ ಸಿಗುತ್ತದೆ. ಸೋಮವಾರದಂದು ಹೋಟೆಲ್ ಗೆ ರಜಾ ಇರುತ್ತದೆ.

ಮುಂಚೆಯೇ ಸೀಟು ಕಾಯ್ದಿರಿಸುವುದಕ್ಕೆ ಸಂಪರ್ಕ ಸಂಖ್ಯೆ 080-22220022.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
MTR hotel situated in Bengaluru Lalbagh road. It is very famous for it's snacks and lunch. You should try at least once in a life- This is the opinion of food lovers.
Please Wait while comments are loading...