ಐಟಿ ದಾಳಿ: ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಸಿಕ್ಕ ಒಟ್ಟು ನಗದೆಷ್ಟು?

Posted By:
Subscribe to Oneindia Kannada

ಬೆಂಗಳೂರು, ಜನವರಿ 24: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ನಿವಾಸ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ರು. 162.06 ಕೋಟಿ ಘೋಷಣೆಯಾಗದ ನಗದು ದೊರೆತಿದೆ. ಜೊತೆಗೆ ವಿವರಣೆ ಸಿಗದ 41ಲಕ್ಷ ಮತ್ತು 12.8 ಕೆಜಿ ಚಿನ್ನ ಪತ್ತೆಯಾಗಿದೆ.

ಜನವರಿ 19ರಂದು ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಮನೆ, ಕಚೇರಿ ಸೇರಿದಂತೆ ಬೆಂಗಳೂರು, ಬೆಳಗಾವಿಯಲ್ಲಿ ಹಲವೆಡೆ ಕರ್ನಾಟಕ ಮತ್ತು ಗೋವಾ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಕಾಂಗ್ರೆಸ್ ಮುಖಂಡರು ಸರಿಯಾಗಿ ಆದಾಯ ತೆರಿಗೆ ಪಾವತಿ ಮಾಡಿರುವ ಮಾಹಿತಿಯನ್ನು ನೀಡಿದ್ದರು. ಆದರೆ ದಾಳಿಯಲ್ಲಿ ಘೋಷಣೆಯೇ ಮಾಡದ 162.06 ಕೋಟಿ ನಗದು ಪತ್ತೆಯಾಗಿದೆ. ಅಲ್ಲದೆ 41 ಲಕ್ಷ ಹಣಕ್ಕೆ ಐಟಿ ಅಧಿಕಾರಿಗಳಿಗೆ ಸೂಕ್ತ ವಿವರಣೆ ದೊರೆತಿಲ್ಲ. ಜತೆಗೆ 12.8 ಕೆಜಿ ಚಿನ್ನಾಭರಣ ದೊರೆತಿದ್ದು ವಿವರಣೆಯಿಲ್ಲದ ಕಾರಣ ಎಲ್ಲವನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಹಲವು ಕಡತಗಳನ್ನೂ ಪರಿಶೀಲನೆಗೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.[ಕಾಂಗ್ರೆಸ್ ನಾಯಕರ ಕಚೇರಿ, ಮನೆಯ ಮೇಲೆ ಐಟಿದಾಳಿ]

congress leader

ಇನ್ನು ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಕಾಂಗ್ರೆಸ್ ಪಕ್ಷದ ಬಹುಮುಖ್ಯ ಸ್ಥಾನವನ್ನು ಅಲಂಕರಿಸಿದ್ದು ತೆರಿಗೆ ಇಲಾಖೆಗೆ ಒಂದೇ ಮಾದರಿಯಲ್ಲಿ ವಂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಸಕ್ಕರೆ ಕಂಪನಿಯೊಂದರಲ್ಲಿ ಅನೇಕ ಶೇರು ವ್ಯವಹಾರದಲ್ಲಿ ತೊಡಗಿ ಅಕ್ರಮ ಹಣವನ್ನು ಹೊಂದಿದ್ದಾರೆ. ಇದರಲ್ಲಿ ಅನೇಕ ಅಧಿಕಾರಿಗಳು ಇದ್ದಾರೆ ಎಂದು ಮೂಲಗಳು ತಿಳಿಸಿವೆ.[ರಾಶಿ ಚಿನ್ನ, ನಗದು; ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ ಸಂಪತ್ತೆಷ್ಟು?]

ಅಪನಗದೀಕರಣ ಹಿನ್ನೆಲೆ ಕಳೆದ ನವೆಂಬರ್ ನಿಂದ ಅನೇಕ ಕಡೆಗಳಲ್ಲಿ ಐಟಿ ದಾಳಿ ನಡೆದಿದೆ. ಪ್ರಸ್ತುತ ದಾಳಿಯಲ್ಲಿ ಆಡಳಿತ ಪಕ್ಷದ ಕುಳಗಳು ಸಿಕ್ಕಿರುವುದು ಮುಂದೆ ಪಕ್ಷದಲ್ಲಿ ಇನ್ನು ಯಾರು ಯಾರು ಇರುವರು ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Officials of the Income tax department claimed that raids on a Karnataka cabinet minister and a Congress office bearer yielded Rs 162 cr undeclared income. Raids carried out at properties belonging to Ramesh Jarkiholi, a minister in the Siddaramaiah cabinet and Laxmi Hebbalkar.
Please Wait while comments are loading...