ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ಅಪರಾಧ ತಡೆಗಟ್ಟಲು ಬೆಂಗಳೂರಲ್ಲಿ ಸೈಬರ್ ಕ್ರೈಂ ಠಾಣೆ

ನೀವು ತಂತ್ರಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರೆ, ಸೈಬರ್ ಅಪರಾಧಗಳನ್ನು ತಡೆಗಟ್ಟಲು ಏನೇನು ಕ್ರಮ ತೆಗೆದುಕೊಳ್ಳಬೇಕು, ಏನು ಟಿಪ್ಸ್ ನೀಡಬಹುದು ಎಂಬ ಬಗ್ಗೆ #CyberSafety ಹ್ಯಾಶ್ ಟ್ಯಾಗ್ ಹಾಕಿ ಟ್ವೀಟ್ ಮಾಡಿ ಎಂದು ಕೇಳಿದ್ದಾರೆ.

By Prasad
|
Google Oneindia Kannada News

ಬೆಂಗಳೂರು, ಜನವರಿ 12 : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯನ್ನು ಪ್ರತ್ಯೇಕವಾಗಿ ಬೆಂಗಳೂರಿನಲ್ಲಿ ತೆರೆಯುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರು ಹೇಳಿದ್ದಾರೆ.

ಈ ಕುರಿತು ಕೆಲ ದಿನಗಳ ಹಿಂದೆ ಬೆಂಗಳೂರು ಪೊಲೀಸ್ ಆಯುಕ್ತರಾಗಿ ನಿಯುಕ್ತರಾಗಿರುವ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರು ಗುರುವಾರ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಟ್ವಿಟ್ಟರ್ ನಲ್ಲಿಯೇ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಪೊಲೀಸರು ಕೂಡ, ನೀವು ತಂತ್ರಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರೆ, ಸೈಬರ್ ಅಪರಾಧಗಳನ್ನು ತಡೆಗಟ್ಟಲು ಏನೇನು ಕ್ರಮ ತೆಗೆದುಕೊಳ್ಳಬೇಕು, ಏನು ಟಿಪ್ಸ್ ನೀಡಬಹುದು ಎಂಬ ಬಗ್ಗೆ #CyberSafety ಹ್ಯಾಶ್ ಟ್ಯಾಗ್ ಹಾಕಿ ಟ್ವೀಟ್ ಮಾಡಿ ಎಂದು ಕೇಳಿದ್ದಾರೆ.

IT related crime : Cyber crime police station in Bengaluru

ಅಂತಹ ಉಪಯುಕ್ತ ಸೈಬರ್ ಕ್ರೈಂ ಟಿಪ್ಸ್ ಗಳನ್ನು ಟ್ವೀಟ್ ಮಾಡಿದರೆ ನಾಗರಿಕರ ಅನುಕೂಲತೆಗಾಗಿ ಬೆಂಗಳೂರು ನಗರ ಪೊಲೀಸ್ ಟ್ವೀಟ್ ಅಕೌಂಟ್ ಅವನ್ನು ರಿಟ್ವೀಟ್ ಮಾಡುತ್ತದೆ ಎಂದು ಟ್ವಿಟ್ಟಿಗರಿಗೆ ಕರೆ ನೀಡಿದೆ.

ಪ್ರವೀಣ್ ಸೂದ್ ಅವರ ಈ ಘೋಷಣೆಗೆ ಒಬ್ಬರು ಈರೀತಿ ಪ್ರಶ್ನೆ ಕೇಳಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಎಫ್ಐಆರ್ ಮತ್ತು ನಂತರ ನಡೆಯುವ ತನಿಖೆಗಳನ್ನು ಆನ್ ಲೈನ್ ಮೂಲಕ ಟ್ರಾಕ್ ಮಾಡುವಂಥ ವ್ಯವಸ್ಥೆ ಏಕೆ ಆರಂಭಿಸಬಾರದು? ಎಂದು ಸೂದ್ ಅವರನ್ನು ಗೌರವ್ ಗುಪ್ತಾ ಎಂಬುವವರು ಕೇಳಿದ್ದಾರೆ.

ಅದಕ್ಕೆ, ಎಫ್ಐಆರ್ ಮತ್ತು ತದನಂತರ ನಡೆಯುವ ತನಿಖೆಗಳನ್ನು ಆನ್ ಲೈನ್ ಮೂಲಕ ಹಿಂಬಾಲಿಸುವ ವ್ಯವಸ್ಥೆ ಈಗಾಗಲೆ ಜಾರಿಯಲ್ಲಿದೆ. ಆದರೆ, ಅದು ಪೊಲೀಸ್ ಇಲಾಖೆಯ ನಿಯಂತ್ರಣದಲ್ಲಿದೆ ಎಂದು ಪ್ರವೀಣ್ ಸೂದ್ ಉತ್ತರಿಸಿದ್ದಾರೆ.

ಬೆಂಗಳೂರು ಪೊಲೀಸ್ ಇಲಾಖೆ ಮೇಘರಿಕ್ ಅವರ ಅವಧಿಯಲ್ಲಿಯೇ ಟ್ವಿಟ್ಟರಿನಲ್ಲಿ ಸಾಕಷ್ಟು ಚಟುವಟಿಕೆಯಲ್ಲಿ ತೊಡಗಿದೆ. ಟ್ವಿಟ್ಟರ್ ಮೂಲಕ ಜನರಿಗೆ ಸ್ಪಂದಿಸುತ್ತಿದೆ. ಆಗುಹೋಗುಗಳನ್ನು, ಅಪರಾಧಗಳನ್ನು ಗಮನಿಸುತ್ತಿದೆ. ಇದು ಪ್ರವೀಣ್ ಸೂದ್ ಅವರ ಅವಧಿಯಲ್ಲಿಯೂ ಮುಂದುವರಿಯುವ ಲಕ್ಷಣಗಳು ಕಾಣಿಸುತ್ತಿವೆ. ಪೊಲೀಸ್ ಇಲಾಖೆಗೆ ಅಭಿನಂದನೆಗಳು.

English summary
Will open a CYBER CRIME POLICE STATION soon to deal with IT related crime exclusively. Bengaluru City Police Commissioner Praveen Sood has tweeted like this on 12th January. This move is welcomed by Bengalureans. Bengaluru police also has requested tech savvy people to give tips for cyber safety.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X