ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಸಂಪತ್ತು ಮುಲಾಜಿಲ್ಲದೆ ವಶಪಡಿಸಿಕೊಳ್ಳಿ : ರಮೇಶ್ ಕುಮಾರ್

By Ananthanag
|
Google Oneindia Kannada News

ಬೆಂಗಳೂರು, ಜನವರಿ, 23: ಅಕ್ರಮ ಸಂಪತ್ತನ್ನು ಯಾರೇ ಹೊಂದಿದ್ದರೂ ಮುಲಾಜಿಲ್ಲದೆ ವಶಪಡಿಸಿಕೊಳ್ಳಬೆಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ರಮೇಶ್ ಕುಮಾರ್ ಗುಡುಗಿದ್ದಾರೆ.

ಸಚಿವ ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆ ಮೇಲೆ ಐಟಿ ದಾಳಿ ವೇಳೆ ರು.162ಕೋಟಿ ಅಕ್ರಮ ಸಂಪತ್ತು ಪತ್ತೆಯಾಗಿರುವ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು ದೇಶದ ಸಂಪತ್ತನ್ನು ಯಾರೇ ಕೊಳ್ಳೆ ಹೊಡೆದು ಅಕ್ರಮವಾಗಿಟ್ಟುಕೊಂಡಿದ್ದರೂ ಮುಲಾಜಿಲ್ಲದೆ ಬಲಿ ಹಾಕಬೇಕು. ಅಕ್ರಮ ವಡವೆ ದಾಸ್ತಾನು ಮಾಡಿದ್ದರೂ ಅದನ್ನು ವಶಪಡಿಸಿಕೊಳ್ಳಬೇಕು ಇದರಲ್ಲಿ ಪಕ್ಷಬೇದ ಮಾಡಬಾರದು ಎಂದು ಸುದ್ದಿಗಾರರ ಬಳಿ ಮಾರ್ಮಿಕವಾಗಿ ನುಡಿದರು.[ಐಟಿ ದಾಳಿ: ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಸಿಕ್ಕ ಒಟ್ಟು ನಗದೆಷ್ಟು?]

IT raid in congress leader's house, health Minister Ramesh Kumar reaction

ಸಾರ್ವಜನಿಕ ಜೀವನದಲ್ಲಿ ಪ್ರಮಾಣಿಕತೆ ಮುಖ್ಯ ಯಾರು ಅಕ್ರಮ ನಡೆಸಿದರೂ ಅನ್ನುವುದಕ್ಕಿಂತ ಅಕ್ರಮ ಅಕ್ರಮವೆಂದು ಪರಿಗಣಿಸಿ ಶಿಕ್ಷೆ ಆಗಬೇಕು ಎಂದರು. ಖಾಸಗಿ ಆಸ್ಪತ್ರೆಗಳು ಬಾಕಿ ಹಣ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಯಾರು ಎಲ್ಲಿ ಮುಷ್ಕರ ಮಾಡುತ್ತಾರೆ. ಲಿಖತ ಭರವಸೆ ಕೇಳಿದರೆ ಅದಕ್ಕೂ ಸೈ ಬರೆದು ಕೊಡೋಣ ಎಂದರು. ಕೆಲವರು ಸರ್ಕಾರವನ್ನು ಹಿಡಿತದಲ್ಲಿಟ್ಟುಕೊಳ್ಳಲು ಈ ರೀರಿ ಬೆದರಿಕೆ ಹಾಕುತ್ತಾರೆ ಎಂದರು.

ಕಳೆದ ನವೆಂಬರಿನಿಂದ ಐಟಿ ದಾಳಿಗಳು ನಿರಂತರವಾಗಿದ್ದರೂ ರಮೇಶ್ ಕುಮಾರ್ ಅವರು ತಮ್ಮ ಪಕ್ಷದಲ್ಲಿ ಆಗಿರುವ ಐಟಿದಾಳಿಗೆ ಮಾತ್ರ ಪ್ರತಿಕ್ರಿಯಿಸಿರುವುದು ಚಿಂತರಕರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.

English summary
After 5 days of IT ride in Minister Ramesh Jarakiholi and lakshmi Hebbalkar's house, officers found Rs. 165.06 crore cash. reaction of health Minister Ramesh Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X