ಐಟಿ ಅಧಿಕಾರಿಗಳು ದಾಳಿಗೆ ಹೋದರೆ ನಾಯಿ ಛೂ ಬಿಟ್ಟ ಅಜ್ಜಿ!

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 15: ಆದಾಯ ತೆರಿಗೆ ಅಧಿಕಾರಿಗಳಿಗೆ ಭಯ ಹುಟ್ಟಿಸಿದ ಅಜ್ಜಿಯ ಸ್ಟೋರಿ ಕೇಳಿದಿರಾ? ಕಪ್ಪು ಹಣ ಇದೆ ಎಂಬ ಮಾಹಿತಿ ಸಿಕ್ಕಿದ್ದರಿಂದ ಬೆಂಗಳೂರಿನ ಯಶವಂತಪುರದ ಅಪಾರ್ಟ್ ಮೆಂಟ್ ಗೆ ತೆರಳಿದ್ದಾರೆ. ಅಲ್ಲಿದ್ದದ್ದು ಒಬ್ಬ ಅಜ್ಜಿ ಜತೆಗೆ ಎರಡು ನಾಯಿ. ಇನ್ನು ಆ ಅಜ್ಜಿ ತನಿಖೆಗೆ ಸಹಕರಿಸದೆ, ನಾಯಿಯನ್ನು ಕಟ್ಟಿ ಹಾಕದೆ ಅಧಿಕಾರಿಗಳನ್ನೇ ಸತಾಯಿಸಿದ್ದಾರೆ.

ಖಚಿತ ಮಾಹಿತಿ ಸಿಕ್ಕಿದೆಯಲ್ಲಾ ಎಂದು ದಾಳಿ ನಡೆಸಲು ತೆರಳಿದವರು, ಆ ನಂತರ ಸ್ಥಳೀಯ ಪೊಲೀಸರು ಹಾಗೂ ನಿವಾಸಿಗಳ ನೆರವು ಪಡೆದು ಫ್ಲ್ಯಾಟ್ ಪ್ರವೇಶಿಸಿದ್ದಾರೆ. ಒಳಗೆ ಹಣವಿಟ್ಟಿದ್ದ ಕೋಣೆಗೆ ಬೀಗ ಹಾಕಿದ್ದು ಕಂಡುಬಂದಿದೆ. ಅದೇ ವೇಳೆ ಲೆಕ್ಕ ನೀಡದೆ ಬಚ್ಚಿಟ್ಟಿದ್ದ 2.89 ಕೋಟಿ ರುಪಾಯಿ ಪತ್ತೆಯಾಗಿದೆ. ಅದರಲ್ಲಿ 2.25 ಕೋಟಿ ಹೊಸ ಎರಡು ಸಾವಿರ ನೋಟುಗಳೇ ಸಿಕ್ಕಿವೆ.[ಕರ್ನಾಟಕ-ಗೋವಾದಲ್ಲಿ ಐಟಿ ದಾಳಿಯಲ್ಲಿ ಸಿಕ್ಕಿದ್ದು ಸಾವಿರ ಕೋಟಿ ಪ್ಲಸ್]

Income tax

ವಿಚಾರಣೆ ನಂತರ ಗೊತ್ತಾಗಿರೋದು ಏನು ಅಂದರೆ, ಅದು ಬೇರೆ ವ್ಯಕ್ತಿಗೆ ಸೇರಿದ ಹಣ. ಅದು ಲೆಕ್ಕಕ್ಕೆ ತೋರಿಸದೆ ಇಟ್ಟಿದ್ದ ಕಪ್ಪು ಹಣ ಎಂಬುದನ್ನು ಆತ ಮೊದಲಿಗೆ ಒಪ್ಪದಿದ್ದರೂ ಆ ನಂತರ ತಪ್ಪೊಪ್ಪಿಕೊಂಡಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With the help of local police and residents of the complex in Yashwanthpur, Bengaluru , I-T officials entered the apartment. They found a locked room where the cash was kept. In the raid, unaccounted cash of Rs 2.89 crore of which Rs 2.25 crore was in Rs 2000 notes was seized.
Please Wait while comments are loading...