ಬೆಂಗಳೂರಿನಲ್ಲಿ ಐಟಿ ಅಧಿಕಾರಿ ಮಗನನ್ನು ಅಪಹರಿಸಿದ ದುಷ್ಕರ್ಮಿಗಳು

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 14 : ಆದಾಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರ ಪುತ್ರನನ್ನು ಅಪಹರಿಸಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಆದಾಯ ತೆರಿಗೆ ಅಧಿಕಾರಿ ನಿರಂಜನ್ ಎಂಬವರ ಪುತ್ರ (19) ಶರತ್ ನನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಶರತ್ ನನ್ನು ಬಿಡುಗಡೆಗೊಳಿಸಲು 50 ಲಕ್ಷ ರು. ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ.

IT officer's son reportedly kidnapped by a gang in Bengaluru

'ಅಪ್ಪ ನನ್ನನ್ನು ಅಪಹರಣ ಮಾಡಿದ್ದಾರೆ. ನನಗೆ ತುಂಬಾ ಟಾರ್ಚರ್ ಕೊಡುತ್ತಿದ್ದಾರೆ. ಅವರಿಗೆ 50 ಲಕ್ಷ ದುಡ್ಡು ಬೇಕಂತೆ, ಪ್ಲೀಸ್‌ ಅವರಿಗೆ ಹಣ ತಂದು ಕೊಡಿ ಎಂದು ಶರತ್ ಅವರ ವಾಟ್ಸಪ್ ವಿಡಿಯೋವನ್ನು ಶರತ್ ತಂದೆಯ ವಾಟ್ಸಪ್ ಗೆ ಕಳುಹಿಸಿದ್ದಾರೆ.

ಈ ಸಂಬಂಧ ಶರತ್ ಪೋಷಕರು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಶರತ್ ಮೊಬೈಲ್ ನೆಟ್ ವರ್ಕ್ ಆಧಾರದ ಮೇಲೆ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An Income Tax officer Niranjan's 19-year-old son Sharath was reportedly kidnapped by a gang two days ago for a ransom.The victim, Sharath, is a diploma student and resident of Kengeri Ullala was missing for the past two days.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ