ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಸ್ಥಳದಿಂದ ಬೆಂಗಳೂರಿಗೆ ಬಂದವರ ನೋಟಿನ ಪರದಾಟಗಳು

By Ananthanag
|
Google Oneindia Kannada News

ಬೆಂಗಳೂರು, ನವೆಂಬರ್ 10: ದಿಢೀರನೆ ನೋಟ್ ಬದಲಾವಣೆ ದೂರದ ಊರಿನಿಂದ ಮತ್ತೊಂದು ಊರಿಗೆ ಬಂದವರಿಗೆ ಹೇಗಿರುತ್ತೆ ಕಷ್ಟ ಅನ್ನೊದಕ್ಕೆ ಇಸ್ತಿಯಾಕ್ ಸಾಕ್ಷಿಯಾಗಿದ್ದಾರೆ.

ಚಿತ್ರದುರ್ಗದಿಂದ ಕೆಲ ದಿನಗಳ ಹಿಂದೆ ಇಸ್ತಿಯಾಕ್ ಬೆಂಗಳೂರಿಗೆ ಬಂದು ವಾಸವಿದ್ದಾರೆ. ಅವರಿಗೆ ಬೆಂಗಳೂರು ಹೊಸದು, ಅಂತೆಯೇ ನೋಟುಗಳೂ ಹೊಸತು.[ಫೋಸ್ಟ್ ಆಫೀಸ್ ಗಳಲ್ಲೂ ಜನರ ಪರದಾಟ]

Istiyak have some such critical situation

ಅವರಿಗೆ ಕೇಂದ್ರ ಸರ್ಕಾರ ಮಾಡಿದ ಐನೂರು ಸಾವಿರ ನೋಟುಗಳ ಬದಲಾವಣೆ ನಿಜಕ್ಕೂ ಆಘಾತವನ್ನುಂಟು ಮಾಡಿದೆ

ಇಲ್ಲಿ ಮೊದಲಿನಿಂದಲೂ ಇದ್ದಿದ್ದರೆ ನಾನು ಒಂದು ಬ್ಯಾಂಕ್ ಅಕೌಂಟು ಮಾಡಿಸಿರಬಹುದಿತ್ತು. ಅದರೆ ಈಗ ಬೆಂಗಳೂರಿನಲ್ಲಿ ನನ್ನದೊಂದು ಬ್ಯಾಂಕಿನ ಅಕೌಂಟಿಲ್ಲ. ನನ್ನ ಬಳಿ ಹಣ ಇದೆ ಹೊಟೇಲ್ ನಲ್ಲಿ ತಿನ್ನಲು ಹಣ ನೀಡಿದರು ಐನೂರು ಸಾವಿರ ನೋಟುಗಳನ್ನು ಸ್ವೀಕರಿಸುತ್ತಿಲ್ಲ. ಬುಧವಾರ ಹೇಗೋ ಕತೆ ಹಾಕಿದ್ದಾಯಿತು ಎಂದುಕೊಂಡು ಗುರುವಾರ ಬ್ಯಾಂಕಿನಲ್ಲಿ ತಂದ ಹಣವನ್ನು ಬದಲಿಸೋಣವೆಂದರೆ ಅಕೌಂಟ್ ಇದ್ದವರಿಗೆ ಮಾತ್ರ ಹಣ ಬದಲಿ ಮಾಡುವುದು ಎಂದು ಬಾಂಕಿನವರು ಹೇಳುತ್ತಿದ್ದಾರೆ.[ಅಂತ್ಯ ಸಂಸ್ಕಾರದ ವೇಳೆಯೂ ಸದ್ದು ಮಾಡಿದ ನೋಟು ರದ್ದು]

Istiyak have some such critical situation

ಈಗ ಊರಿಗೆ ಹೋಗಲೂ ನನ್ನ ಬಳಿ ಹಣ ಇಲ್ಲ. ಊರಿನ ಅಕೌಂಟಿಗೆ ಹಣವನ್ನು ಅಕೌಂಟಿಗೆ ಜಮೆ ಮಾಡಿದರೆ ನಾನು ಇಲ್ಲಿನ ಖರ್ಚಿಗೆ ಏನು ಮಾಡುವುದು ಎನ್ನುತ್ತಿದ್ದಾರೆ ಇಸ್ತಿಯಾಕ್.

ಸರ್ಕಾರ ಮಾಡಿದ ಈ ಹೊಸ ನೀತಿಯಿಂದ ಜನಕ್ಕೆ, ಊರಿನಿಂದ ಊರಿಗೆ ಬಂದವರಿಗೆ, ಕೂಲಿ ನಾಲಿ ಮಾಡಿಕೊಂಡು ಬದುಕುವ ಸಾಮಾನ್ಯರಿಗೆ ತುಂಬಾ ತೊಂದರೆಯನ್ನುಂಟು ಮಾಡಿದೆ.

English summary
All of a sudden India Currency Swap have left this Man from Chitradurga in the middle of nowhere in the Cosmopolitan city Bengaluru. Istiyak arrived in the city on some work and caught unaware.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X