ಒಂದೇ ರಾಕೆಟ್ ಬಳಸಿ 83 ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು!

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 29: ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸದೊಂದು ವಿಕ್ರಮ ಸಾಧಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಸಜ್ಜಾಗಲಿದೆ. ಮುಂದಿನ ವರ್ಷ ಒಂದೇ ರಾಕೆಟ್ ಮೂಲಕ ಒಟ್ಟಿಗೆ 83 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮತ್ತೊಂದು ವಿಶ್ವ ದಾಖಲೆಗೆ ಸಿದ್ಧವಾಗುತ್ತಿದೆ.

ಒಂದೇ ರಾಕೆಟ್ ಮೂಲಕ ಭಾರತದ 2 ಹಾಗೂ ವಿದೇಶದ 81 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಯೋಜನೆಯನ್ನು ಇಸ್ರೋ ಕೈಗೆತ್ತಿಕೊಂಡಿದೆ. 2017ರ ಆರಂಭದಲ್ಲಿ ಪೂರ್ಣಗೊಳಿಸಲಿದೆ ಎಂದು ಆಂತ್ರಿಕ್ಸ್ ಕಾರ್ಪೊರೇಷನ್ ಹೇಳಿದೆ.

ISRO's World record bid: Launching 83 satellites on single rocket

2017ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಒಂದೇ ರಾಕೆಟ್ ಮೂಲಕ 83 ಉಪಗ್ರಹ ಉಡಾವಣೆಗೆ ಯೋಜನೆ ಹಾಕಿಕೊಳ್ಳಲಾಗಿದೆ. ವಿದೇಶದ ನ್ಯಾನೋ ಸೆಟ್‍ಲೈಟ್ ಗಳನ್ನೂ ಕೂಡ ಉಡಾವಣೆ ಮಾಡಲಾಗುವುದು ಎಂದು ಆಂತ್ರಿಕ್ಸ್ ಕಾರ್ಪೊರೇಷನ್ ಸಂಸ್ಥೆಯ ಅಧ್ಯಕ್ಷ ರಾಕೇಶ್ ಮಾಹಿತಿ ನೀಡಿದ್ದಾರೆ.

ಇಸ್ರೋದ ಕಮರ್ಷಿಯಲ್ ಅಂಗವಾದ ಆಂತ್ರಿಕ್ಸ್ ಕಾರ್ಪೊರೇಷನ್. ಒಂದೇ ರಾಕೆಟ್ 83 ಉಪಗ್ರಹಗಳನ್ನು ಒಂದೇ ಕಕ್ಷೆಗೆ ಸೇರಿಸಲಿದೆ. ಪಿಎಸ್‍ಎಲ್ವಿ ಪಿಐ ರಾಕೆಟ್ ಮೂಲಕ ಉಡಾವಣೆ ಮಾಡುವ ಸಾಧ್ಯತೆ ಇದೆ. ಈ ಹಿಂದೆ ಇಸ್ರೋ ಒಂದೇ ಬಾರಿ ಹಲವು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: ISRO's World record bid
English summary
Indian space agency ISRO is aiming for a world record by putting into orbit 83 satellites -- two Indian and 81 foreign -- on a single rocket in early 2017, a top official of Antrix Corporation said.
Please Wait while comments are loading...