ಪಾಕಿಸ್ತಾನಿ ಗೂಢಚಾರಿಯಾಗಿದ್ದ ಇಸ್ರೋದ ಅಧಿಕಾರಿ

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 29: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧಿಕಾರಿಯೊಬ್ಬರು ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಸೂಕ್ಷ್ಮ ಮಾಹಿತಿಯನ್ನು ನನಗೆ ನೀಡಿದ್ದರು ಎಂದು ಬಂಧಿತ ಪಾಕಿಸ್ತಾನದ ರಾಜತಾಂತ್ರಿಕ ಸಿಬ್ಬಂದಿ ಮೆಹಮೂದ್ ಅಖ್ತರ್ ಆಘಾತಕಾರಿ ಸಂಗತಿ ಹೊರಹಾಕಿದ್ದಾರೆ.

ಗೂಢಚರ್ಯ ಆರೋಪದಲ್ಲಿ ದೇಶ ತೊರೆಯಲು ಸೂಚನೆ ಪಡೆದಿರುವ ಪಾಕಿಸ್ತಾನದ ರಾಜತಾಂತ್ರಿಕ ಸಿಬ್ಬಂದಿ ಮೆಹಮೂದ್ ಅಖ್ತರ್ ಅವರು ವೀಡಿಯೊ ವಿಚಾರಣೆಯಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.

ISRO official under scanner for passing information to Pakistan spy

ಹೈಕಮಿಷನ್ ಸಿಬ್ಬಂದಿಗೆ ಅವರನ್ನು ಹಸ್ತಾಂತರಿಸುವ ಮುನ್ನ ಅವರ ಹೇಳಿಕೆಗಳನ್ನು ವೀಡಿಯೊ ದಾಖಲೀಕರಿಸಿಕೊಳ್ಳಲಾಗಿದೆ.ಈ ಸಂದರ್ಭದಲ್ಲಿ ಅಖ್ತರ್ ಅವರು ತಮಗೆ ಮಾಹಿತಿ ನೀಡಿದವರ ಬಗ್ಗೆ ಸುಳಿವು ನೀಡಿದ್ದಾರೆ. ಪಾಕಿಸ್ತಾನ ಹೈಕಮಿಷನ್ ಕಚೇರಿಯಲ್ಲಿ ಉದ್ಯೋಗದಲ್ಲಿರುವ ಐಎಸ್‌ಐ ಏಜೆಂಟ್‌ ಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.ಇಸ್ರೋದ ಒಬ್ಬ ಅಧಿಕಾರಿಯ ಹೆಸರನ್ನೂ ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

ದೆಹಲಿ ಪೊಲೀಸರು ಸುಮಾರು 45 ನಿಮಿಷಗಳ ಕಾಲ ಅಖ್ತರ್‌ ವಿಚಾರಣೆ ಮಾಡಿದರು. ಈಗಾಗಲೇ ರಾಜಸ್ಥಾನ್ಬದಲ್ಲಿ ಬಂಧಿತರಾಗಿರುವ ರಮ್ಜಾನ್ ಖಾನ್ ಹಾಗೂ ಸುಭಾಷ್ ಜಾಂಗೀರ್ ಅವರ ಹೆಸರಿನ ಜತೆಗೆ ಇತರ ಕೆಲ ಹೆಸರುಗಳನ್ನೂ ಬಹಿರಂಗಗೊಂಡಿದೆ. ಪಾಕಿಸ್ತಾನ ಹೈಕಮಿಷನ್‌ನಲ್ಲಿರುವ ಐಎಸ್‌ಐ ಏಜೆಂಟರು ಎನ್ನಲಾದ ಎಂಟು ಅಧಿಕಾರಿಗಳು ಹಾಗೂ ಇಸ್ರೋ ಅಧಿಕಾರಿಯ ವಿಚಾರಣೆಗೆ ಪೊಲೀಸ್ ಇಲಾಖೆ ಮುಂದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: ISRO official under scanner
English summary
Mehmood Akthar, the staffer in the high commission at Delhi who was declared non persona grata on Thursday revealed that he had sourced information from an ISRO official
Please Wait while comments are loading...