ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಸ್ರೊದಿಂದ 'ಫಾಲ್ಕೊನ್ ಹೆವಿ' ಮಾದರಿ ರಾಕೆಟ್‌ ಅಭಿವೃದ್ಧಿ

By Manjunatha
|
Google Oneindia Kannada News

ಬೆಂಗಳೂರು, ಫೆಬ್ರವರಿ 08: ತನ್ನ ಪರಿಕ್ಷಾರ್ಥ ಉಡಾವಣೆಯಲ್ಲೇ ಸುಗಮವಾಗಿ ಮಂಗಳನ ಕಕ್ಷೆಗೆ ಹಾರಿದ ಸ್ಪೇಸ್‌-ಎಕ್ಸ್‌ನ ವಿಶ್ವದ ಶಕ್ತಿಶಾಲಿ ರಾಕೆಟ್ ಫಾಲ್ಕೊನ್ ಹೆವಿ ಮಾದರಿಯ ಮರುಬಳಕೆ ತಂತ್ರಜ್ಞಾನ ಹೊಂದಿದ ರಾಕೆಟ್‌ ಅನ್ನು ಅಭಿವೃದ್ಧಿಪಡಿಸಲು ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ (ISRO) ಚಿಂತನೆ ನಡೆಸಿದೆ.

ವಿಶ್ವದ ಅತ್ಯಂತ ಶಕ್ತಿಯುತ ಮತ್ತು ಮರುಬಳಕೆ ತಂತ್ರಜ್ಞಾನದಿಂದ ಕೂಡಿದ ಸ್ಪೇಸ್‌ ಎಕ್ಸ್‌ನ 'ಫಾಲ್ಕೊನಿ ಹೆವಿ' ರಾಕೆಟ್‌ ಬಗ್ಗೆ ವಿಶ್ವದೆಲ್ಲೆಡೆಯಿಂದ ಭಾರಿ ಪ್ರಶಂಸೆಗಳ ಮಹಾಪೂರ ಹರಿದು ಬರುತ್ತಿದೆ. ಇಸ್ರೊ ಕೂಡ ಫಾಲ್ಕನ್ ಹೆವಿ ರಾಕೆಟ್ ಉಡಾಯನವನ್ನು ಸಂಶೋಧಕ ಕಣ್ಣುಗಳಿಂದ ಗಮನಿಸಿದ್ದು, ಭವಿಷ್ಯದಲ್ಲಿ ಆ ಮಾದರಿಯ ರಾಕೆಟ್‌ಗಳನ್ನು ಅಭಿವೃದ್ಧಿ ಪಡಿಸುವುದಾಗಿ ಹೇಳಿಕೊಂಡಿದೆ.

2018ರಲ್ಲಿ ಇಸ್ರೋದಿಂದ ತಿಂಗಳಿಗೊಂದು ಉಪಗ್ರಹ ಉಡಾವಣೆ: ಕಿರಣ್ ಕುಮಾರ್2018ರಲ್ಲಿ ಇಸ್ರೋದಿಂದ ತಿಂಗಳಿಗೊಂದು ಉಪಗ್ರಹ ಉಡಾವಣೆ: ಕಿರಣ್ ಕುಮಾರ್

ಸ್ಪೇಸ್‌-ಎಕ್ಸ್‌ ಸಂಸ್ಥೆಯ ಸಂಸ್ಥಾಪಕ, ವಿಜ್ಞಾನಿ ಎಲೋನ್ ಮಸ್ಕ್ ಅವರಿಗೆ ಅಭಿನಂದನೆ ಸಲ್ಲಿಸಿದ ಇಸ್ರೊ ಮುಖ್ಯಸ್ಥ ಕೆ.ಶಿವನ್ ಫಾಲ್ಕೊನ್ ಹೆವಿ ರಾಕೆಟ್ ಉಡಾವಣೆಯನ್ನು 'ಇದೊಂದು ಅಭೂತಪೂರ್ವ ವೈಜ್ಞಾನಿಕ ಜಿಗಿತ' ಎಂದು ಬಣ್ಣಿಸಿದ್ದಾರೆ.

ISRO likely to develop Rocket like Falcon Heavy

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಇಸ್ರೊ ಸಹ ಕಳೆದ ಮೂರು ವರ್ಷಗಳಿಂದ ರಾಕೆಟ್‌ ತಂತ್ರಜ್ಞಾನ ಸುಧಾರಣೆ ಬಗ್ಗೆ ಸಂಶೋಧನೆಯಲ್ಲಿ ನಿರತವಾಗಿದೆ. ಇಸ್ರೊ ಪ್ರಮುಖವಾಗಿ ಮುರು ವಿಭಾಗಗಳ ಬಗ್ಗೆ ಗಮನ ಹರಿಸುತ್ತಿದ್ದು, ಕಕ್ಷೆಗೆ ರಾಕೆಟ್‌ನ ಪುನರ್‌ ಪ್ರವೇಶ, ರಾಕೆಟ್‌ ಉಡಾಯನ ಯಂತ್ರಗಳ ಮರುಬಳಕೆ, ರಾಕೆಟ್‌ ಸ್ಟೇಜ್‌ಗಳ ಮರುಬಳಕೆ ಬಗ್ಗೆ ಸಂಶೋಧನೆಗಳು ಜಾರಿಯಲ್ಲಿವೆ ಎಂದು ಅವರು ಹೇಳಿದ್ದಾರೆ.

'ನಮ್ಮ ಪ್ರಮುಖ ಗುರಿ ಇರುವುದು ರಾಕೆಟ್‌ನ ಭಾರ ಹೊತ್ತೊಯ್ಯುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು, ಸಾಮರ್ಥ್ಯವನ್ನು 4 ಟನ್‌ನಿಂದ 6.5 ಟನ್‌ಗೆ ಹೆಚ್ಚಿಸುವುದು ಮೇಲಿನ ಎಲ್ಲಾ ಸಂಶೋಧನೆ, ಬದಲಾವಣೆಗಳ ಮೂಲಕ ರಾಕೆಟ್ ಉಡಾಯನಾ ವೆಚ್ಚವನ್ನು ಕಡಿಮೆಗೊಳಿಸುವ ಗುರಿ ಇದೆ' ಎಂದು ಅವರು ಮಾಹಿತಿ ನೀಡಿದ್ದಾರೆ.

English summary
Indian Space Research Center working towards develop rocket like space-X's Falcon Heavy. ISRO Chairman K.Shivan said that ISRO already working on reusable technology rockets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X