ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೆರಿಗೆ ತುಂಬದ ಸಾವಿರ ಆಸ್ತಿ ಪತ್ತೆ ಹಚ್ಚಿದ ಇಸ್ರೋ ಸಮೀಕ್ಷೆ

|
Google Oneindia Kannada News

ಬೆಂಗಳೂರು, ನವೆಂಬರ್ 6: ಬಿಬಿಎಂಪಿಗೆ ತೆರಿಗೆ ತುಂಬದ ಸುಮಾರು 1 ಸಾವಿರಕ್ಕೂ ಹೆಚ್ಚು ಆಸ್ತಿಗಳನ್ನು ಇಸ್ರೋ ಪತ್ತೆ ಮಾಡಿದೆ. ಬಿಬಿಎಂಗೆ ಇಸ್ರೋ ನೀಡಿರುವ ಉಪಗ್ರಹ ಚಿತ್ರಗಳ ಮೂಲಕ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ತೆರಿಗೆ ಪಾವತಿಸದೆ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ದೀಪಾವಳಿ ವಿಶೇಷ ಪುರವಣಿ

ಜಿಐಎಸ್ ಮ್ಯಾಪಿಂಗ್ ಮೂಲಕ ಪತ್ತೆಯಾಗದ ಆಸ್ತಿಗಳನ್ನು ಇಸ್ರೋ ಶೋಧಿಸಿದೆ. ಈ ಮೊದಲು ನಿವೇಶನವಾಗಿದ್ದು, ಈಗ ಕಟ್ಟಡ ನಿರ್ಮಾಣವಾಗಿರುವ ಮತ್ತು ಬಿಬಿಎಂಪಿಯಿಂದ ಅನುಮತಿ ಪಡೆದು ಅದಕ್ಕಿಂತ ಹೆಚ್ಚಿನ ಅಳತೆಯಲ್ಲಿ ಕಟ್ಟಡ ನಿರ್ಮಾಣ ಮಾಡಿರುವ ಆಸ್ತಿಗಳೂ ಲೆಕ್ಕಕ್ಕೆ ದೊರೆತಿವೆ.

ಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆ

ISRO images find out 1k properties which evaded taxes

ಆಸ್ತಿ ತೆರಿಗೆ ಮೋಸ: ಇಸ್ರೋಗೆ ಮೊರೆ ಹೋದ ಬಿಬಿಎಂಪಿ ಆಸ್ತಿ ತೆರಿಗೆ ಮೋಸ: ಇಸ್ರೋಗೆ ಮೊರೆ ಹೋದ ಬಿಬಿಎಂಪಿ

ತೆರಿಗೆ ವ್ಯಾಪ್ತಿಗೆ ಬರದ 3 ಲಕ್ಷ ಆಸ್ತಿಗಳನ್ನು ಎರಡು ವರ್ಷದ ಹಿಂದೆ ಜಿಐಎಸ್ ಮ್ಯಾಪಿಂಗ್ ಮೂಲಕ ಪತ್ತೆ ಮಾಡಲಾಗಿತ್ತು. ಅದರಿಂದಾಗಿ ನಗರದಲ್ಲಿರುವ ಆಸ್ತಿಗಳ ಸಂಖ್ಯೆ 16 ಲಕ್ಷವಲ್ಲ ಬದಲಾಗಿ 19 ಲಕ್ಷ ಎನ್ನುವುದು ಮನದಟ್ಟಾಗಿತ್ತು. ಆದರೂ ಕೆಲವು ಆಸ್ತಿಗಳ ತೆರಿಗೆ ವ್ಯಾಪ್ತಿಗೊಳಪಡದೆ ಇರುವ ಕುರಿತು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು. ಸಧ್ಯಕ್ಕೆ ಬೊಮ್ಮನಹಳ್ಳಿಯಲ್ಲಿ ಮಾತ್ರ ಈ ಕ್ರಮ ಕೈಗೊಂಡಿದ್ದು ಶೀಘ್ರ ಎಲ್ಲಾ ಪ್ರದೇಶದಲ್ಲಿಯೂ ಕ್ರಮ ವಹಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

English summary
Satellite images of ISRO have find out more than one thousand properties Bommanahalli which have not paid the taxes to BBMP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X