ಜುಲೈ.24ರ ಸಂಜೆ ಹೆಬ್ಬಾಳದಲ್ಲಿ ಯು.ಆರ್.ರಾವ್ ಅಂತ್ಯಕ್ರಿಯೆ

Posted By:
Subscribe to Oneindia Kannada

ಬೆಂಗಳೂರು, ಜುಲೈ 24: ಇಂದು(ಜುಲೈ 24) ಬೆಳಗ್ಗೆ ಹೃದಯ ಸಂಬಂಧಿ ಕಾಯಿಲೆಯಿಂದ ವಿಧಿವಶರಾದ ಇಸ್ರೋ ಮಾಜಿ ಅಧ್ಯಕ್ಷ ಯು. ಆರ್. ರಾವ್(85) ಅವರ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಬೆಂಗಳೂರಿನ ಹೆಬ್ಬಾಳದಲ್ಲಿರುವ ಎಸ್ ಪಿ ಚಿತಾಗಾರದಲ್ಲಿ ನಡೆಯಲಿದೆ.

ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿ ಯು.ಆರ್.ರಾವ್ ವ್ಯಕ್ತಿ ಚಿತ್ರ

ಇಂದು ಬೆಳಗ್ಗಿನ ಜಾವ 2:55 ರ ಸುಮಾರಿಗೆ ಇಹಲೋಕತ್ಯಜಿಸಿದ ಬಾಹ್ಯಾಕಾಶ ಲೋಕದ ದಿಗ್ಗಜ, ರಾವ್, ಪತ್ನಿ ಯಶೋಧ ರಾವ್‌, ಪುತ್ರ ಮಧನ್ ರಾವ್‌, ಪುತ್ರಿ ಮಾಲಾ ರಾವ್‌ ಅವರನ್ನು ಅಗಲಿದ್ದಾರೆ.

ISRO former chief U R Rao's cremation on July 24th, in Hebbal
Bengaluru Karaga: C M Siddaramaiah visits temple in the midnight

ಈಗಾಗಲೇ ಇಂದಿರಾ ನಿವಾಸದಲ್ಲಿರುವ ಅವರ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಸ್ರೋದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದ ಯು.ಆರ್.ರಾವ್ ಭಾರತೀಯ ಬಾಹ್ಯಾಕಾಶ ಲೋಕಕ್ಕೆ ನೀಡಿದ ಕೊಡುಗೆಯನ್ನು ಮನಗಂಡು ಭಾರತ ಸರ್ಕಾರ ಪದ್ಮವಿಭೂಷಣ(2017, ಜನವರಿಯಲ್ಲಿ) ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Last rites of Dr U R Rao, eminent space scientist will be held on 24th July at Hebbal Crematorium, Bengaluru. He passed away in his Indiranagar home on the wee hours of Monday.
Please Wait while comments are loading...