ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನು ಬೆಂಗಳೂರಿನಲ್ಲಿ ಸಿಗಲಿದೆ ಇಸ್ರೇಲ್ ವೀಸಾ

|
Google Oneindia Kannada News

ಬೆಂಗಳೂರು, ಜು. 16 : ಇಸ್ರೇಲ್ ಗೆ ಭೇಟಿ ನೀಡಲು ಬಯಸುವ ದಕ್ಷಿಣ ಭಾರತದ ಪ್ರವಾಸಿಗರು ಇನ್ನು ಮುಂದೆ ವೀಸಾ ಪಡೆಯಲು ಮುಂಬೈ ಅಥವ ದೆಹಲಿಗೆ ತೆರಳಬೇಕಾಗಿಲ್ಲ. ಬೆಂಗಳೂರಿನಲ್ಲಿ ವೀಸಾ ಸೇವಾಕೇಂದ್ರವನ್ನು ತೆರೆಯಲಾಗಿದ್ದು, ಎಂ.ಜಿ.ರಸ್ತೆಯಲ್ಲಿ ಮಂಗಳವಾರ ಕಚೇರಿಯನ್ನು ಉದ್ಘಾಟಿಸಲಾಗಿದೆ.

ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಇಸ್ರೇಲ್‌ ರಾಯಭಾರಿ ಕಚೇರಿಯಲ್ಲಿ ಮಂಗಳವಾರ ವೀಸಾ ಕೇಂದ್ರವನ್ನು ಆರಂಭಿಸಲಾಗಿದೆ. ಇಸ್ರೇಲ್ ಗೆ ಭೇಟಿ ನೀಡಲು ಬಯಸುವ ಉದ್ಯಮಿಗಳು, ಪ್ರವಾಸಿಗರು (ಬಿ-2) ಮತ್ತು ವಿದ್ಯಾರ್ಥಿಗಳಿಗೆ (ಎ-1) ವೀಸಾಗಳನ್ನು ಈ ಕೇಂದ್ರದಲ್ಲಿ ನೀಡಲಾಗುತ್ತದೆ.

visa

ಇಷ್ಟುದಿನ ಇಸ್ರೇಲ್‌ ಗೆ ಭೇಟಿ ನೀಡುವ ದಕ್ಷಿಣ ಭಾರತದ ಪ್ರವಾಸಿಗರು ವೀಸಾ ಪಡೆಯಲು ಮುಂಬೈ ಮತ್ತು ದೆಹಲಿಯಲ್ಲಿರುವ ಕಚೇರಿಗೆ ತೆರಳಬೇಕಾಗಿತ್ತು. ಆದರೆ, ಇನ್ನುಮುಂದೆ ಬೆಂಗಳೂರು ನಗರದಲ್ಲಿಯೇ ವೀಸಾ ಪಡೆಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. [ಎಸ್ಎಂಎಸ್ ನಲ್ಲಿ ಸಿಗುತ್ತೆ ಪಾಸ್ ಪೋರ್ಟ್ ಮಾಹಿತಿ]

ವೀಸಾಗಳನ್ನು ನೇರವಾಗಿ ಅರ್ಜಿದಾ­ರರ ಮನೆ ಬಾಗಿಲಿಗೆ ತಲುಪಿಸಲು ಸೇವಾ ಕೇಂದ್ರದಲ್ಲಿ ಕೊರಿಯರ್ ಸೇವೆಯನ್ನು ಸಹ ಆರಂಭಿಸಲಾಗಿದೆ. ಐವಿಎಸ್ ಗ್ಲೋಬಲ್ ಸಂಸ್ಥೆಯ ಸಹಯೋಗದಲ್ಲಿ ಸೇವಾ ಕೇಂದ್ರ ಕಾರ್ಯನಿರ್ವಹಿಸಲಿದೆ.

ವಿಳಾಸ : ನಗರದ ಮಹಾತ್ಮ ಗಾಂಧಿ ರಸ್ತೆಯ ಮಿತ್ತಲ್‌ ಟವರ್‌ ಆರನೇ ಮಹಡಿ­ಯಲ್ಲಿರುವ ಕಚೇರಿಯುಲ್ಲಿ ವೀಸಾ ಕೇಂದ್ರವಿದೆ. No 604, ‘A' Wing, 6th Floor, Mittal Tower on MG Road, Bangalore. ಹೆಚ್ಚಿನ ಮಾಹಿತಿಗಾಗಿ 080-40964999 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಈಗ : ಎಸ್ಎಂಎಸ್ ಸೇವೆ ಆರಂಭವಾಗಿದೆ. ಅರ್ಜಿಸಲ್ಲಿಸಲಾದ ನಂತರದಿಂದ ಮೊದಲುಗೊಂಡು ಸ್ಪೀಡ್ ಪೋಸ್ಟ್ ಮೂಲಕ ಪಾಸ್ ಪೋರ್ಟ್ ಪುಸ್ತಕ ನಿಮ್ಮ ಮನೆ ಬಾಗಿಲಿಗೆ ಬರುವತನಕ ಸೇವಾ ಕೇಂದ್ರದಿಂದ ಎಸ್ಎಂಎಸ್ ಸೂಚನೆಗಳು ಬರಲಾರಂಭಿಸಿವೆ. ಕರ್ನಾಟಕದ ಪಾಸ್ ಪೋರ್ಟ್ ಅಪೇಕ್ಷಿಗಳು ಈ ಸೇವೆಯಿಂದ ಸಂತಸಗೊಂಡಿದ್ದಾರೆ.

English summary
With the growing number of people wanting to travel to Israel going up, Israeli visa has been made simple with the setting up of the new visa service in MG Road, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X