ಜಮೀರ್ ಹುಟ್ಟಿದ ಹಬ್ಬಕ್ಕೆ ದೇವೇಗೌಡ್ರು ಕೊಟ್ಟ ಭರ್ಜರಿ ರಾಜಕೀಯ ಗಿಫ್ಟ್ !

Posted By:
Subscribe to Oneindia Kannada

ಜೆಡಿಎಸ್ ಭಿನ್ನಮತೀಯ ಶಾಸಕ ಜಮೀರ್ ಅಹಮದ್ ಖಾನ್ ತನ್ನ ಹುಟ್ಟಿದ ಹಬ್ಬವನ್ನು ಬಾಲಿವುಡ್ ನಟರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. 'ಅಲ್ಲಾ' ನಂತರ ದೇವೇಗೌಡರೇ ನನಗೆಲ್ಲಾ ಎಂದು ಜಮೀರ್ ಹೇಳಿದ್ದಾರೆ.

ಕೆಲವೇ ದಿನಗಳ ಕೆಳಗೆ ರುಂಡ ತೆಗೆದುಕೊಡುತ್ತೇನೆಂದು ಅಬ್ಬರಿಸಿದ್ದ ಜಮೀರ್ ಅಹಮದ್, ಮಂಗಳವಾರ (ಆ 1) ಜೆಡಿಎಸ್ ವರಿಷ್ಠ ದೇವೇಗೌಡರ ಬಗ್ಗೆ ಅಭಿಮಾನದ ಮಾತನ್ನಾಡಲು ಕಾರಣ, ಗೌಡ್ರು ನೀಡಿದ ಸ್ಪೆಷಲ್ ರಾಜಕೀಯ ಗಿಫ್ಟ್ ಎಂದು ಜೆಡಿಎಸ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಏ ಕ್ಯಾ ಜಮೀರ್ ಭಾಯ್, ನಿಮ್ಮನ್ನು ಬೆಳೆಸಿದ ಗೌಡರಿಗೇ ಚಾಲೆಂಜಾ

ಸೋತು ಹೈರಾಣವಾಗಿದ್ದ ಜಮೀರ್ ಅಹಮದ್ ಅವರನ್ನು ಮತ್ತೆ ಶಾಸಕರನ್ನಾಗಿ ಮಾಡಿದ್ದು ದೇವೇಗೌಡ್ರು. ಈಗ ಅವರ ವಿರುದ್ದ ತಿರುಗಿ ಬಿದ್ದರೆ ಗೌಡ್ರು ಬಿಟ್ಟಾರಾ.. ಅದಕ್ಕೆ ಜಮೀರ್ ಆಪ್ತನನ್ನೇ ತನ್ನಡೆಗೆ ಸೆಳೆದುಕೊಳ್ಳುವ ಮೂಲಕ, ಜಮೀರ್ ಗೆ ಸ್ಪೆಷಲ್ ಗಿಫ್ಟ್ ಕಳುಹಿಸಿದ್ದಾರೆನ್ನುವ ಮಾತು ಜೆಡಿಎಸ್ ನಲ್ಲಿ ಕೇಳಿ ಬರುತ್ತಿದೆ.

ಸ್ವಕ್ಷೇತ್ರ ಚಾಮರಾಜಪೇಟೆಯಲ್ಲಿ ದೇವೇಗೌಡರು ನಡೆಸಿದ್ದ ಎರಡೆರಡು ಸಮಾವೇಶಕ್ಕೆ ತಿರುಗೇಟು ನೀಡಲು ನಡೆದಂತಹ ಜಮೀರ್ ಹುಟ್ಟುಹಬ್ಬ ಆಚರಣೆಯಲ್ಲಿ, ಟಿಪ್ಪು ಖಡ್ಗದ ರೀತಿಯಲ್ಲಿನ ಕತ್ತಿಯಲ್ಲಿ ಜಮೀರ್ ಕೇಕ್ ಕಟ್ ಮಾಡಿದ್ದರು.

ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆಲ್ಲೋದು ದೂರದ ಮಾತು ಮೊದಲು ಠೇವಣಿ ಸಿಗುತ್ತಾ ನೋಡೋಣ ಎಂದು ಸವಾಲೆಸೆದಿದ್ದ ಜಮೀರ್ ಅಹಮದಿಗೆ, ದೇವೇಗೌಡರು ಜಮೀರ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಬಿಬಿಎಂಪಿ ಸದಸ್ಯರೊಬ್ಬರನ್ನು ಗೌಡ್ರು ತನ್ನತ್ತ ಸೆಳೆದುಕೊಂಡಿದ್ದಾರೆ. ಮುಂದೆ ಓದಿ..

ಚಾಮರಾಜಪೇಟೆಯಲ್ಲಿ ಜಮೀರ್ ಅಹಮದಿಗೆ ಪೈಪೋಟಿ ನೀಡುವ ಅಭ್ಯರ್ಥಿ

ಚಾಮರಾಜಪೇಟೆಯಲ್ಲಿ ಜಮೀರ್ ಅಹಮದಿಗೆ ಪೈಪೋಟಿ ನೀಡುವ ಅಭ್ಯರ್ಥಿ

ಗೌಡರ ಈ ನಿರ್ಧಾರದಿಂದಾಗಿ ಚಾಮರಾಜಪೇಟೆಯಲ್ಲಿ ಜಮೀರ್ ಅಹಮದಿಗೆ ಪೈಪೋಟಿ ನೀಡುವ ಅಭ್ಯರ್ಥಿ ಜೆಡಿಎಸ್ ಪಕ್ಷಕ್ಕೆ ಸಿಕ್ಕಂತಾಗಿದೆ ಎನ್ನುವ ಮಾತಿದೆ. ಈಗಿಂದಲೇ ಅವರಿಗೆ ರಾಜಕೀಯ ಪಾಠ ಕಲಿಸಿ, ಚುನಾವಣೆಯ ವೇಳೆ ಭರ್ಜರಿ ತಿರುಗೇಟು ನೀಡಲು ಗೌಡ್ರು ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ.

ಜಮೀರ್ ಬಲಗೈ ಬಂಟ ಇಮ್ರಾನ್ ಪಾಷಾ ಕಣಕ್ಕೆ ಸಾಧ್ಯತೆ

ಜಮೀರ್ ಬಲಗೈ ಬಂಟ ಇಮ್ರಾನ್ ಪಾಷಾ ಕಣಕ್ಕೆ ಸಾಧ್ಯತೆ

ಜಮೀರ್ ಅಹಮದ್ ಅವರ ಬಲಗೈ ಬಂಟ ಎಂದೇ ಕರೆಯಲಾಗುವ ಇಮ್ರಾನ್ ಪಾಷಾ ಅವರನ್ನು ಗೌಡ್ರು ಜೆಡಿಎಸ್ ಪಕ್ಷಕ್ಕೆ ಸೆಳೆದುಕೊಳ್ಳಲು ಯಶಸ್ವಿಯಾಗಿದ್ದು, ಗೌಡರ ತಂತ್ರಗಾರಿಕೆ ಜಮೀರ್ ಹುಟ್ಟುಹಬ್ಬಕ್ಕೆ ಗೌಡ್ರು ನೀಡಿದ ಸ್ಪೆಷಲ್ ಗಿಫ್ಟ್ ಎಂದು ಜೆಡಿಎಸ್ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ಪಾದರಾಯನಪುರ ಕ್ಷೇತ್ರದ ಕಾರ್ಪೋರೇಟರ್ ಇಮ್ರಾನ್ ಪಾಷಾ

ಪಾದರಾಯನಪುರ ಕ್ಷೇತ್ರದ ಕಾರ್ಪೋರೇಟರ್ ಇಮ್ರಾನ್ ಪಾಷಾ

ವಾರ್ಡ್ ನಂಬರ್ 135, ಪಾದರಾಯನಪುರ ಕ್ಷೇತ್ರದ ಕಾರ್ಪೋರೇಟರ್ ಇಮ್ರಾನ್ ಪಾಷಾ ಅವರಿಗೆ ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡಲು ದೇವೇಗೌಡರು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ. ಗೌಡರ ಈ ನಿರ್ಧಾರ ಜಮೀರ್ ಗೆ ಶಾಕ್ ನೀಡಿದೆ ಎನ್ನುವ ಮಾತಿದೆ.

ಚಾಮರಾಜಪೇಟೆ ಅಸೆಂಬ್ಲಿ ಕ್ಷೇತ್ರದ ಸೂಕ್ಷ ಅರಿತಿರುವ ಇಮ್ರಾನ್

ಚಾಮರಾಜಪೇಟೆ ಅಸೆಂಬ್ಲಿ ಕ್ಷೇತ್ರದ ಸೂಕ್ಷ ಅರಿತಿರುವ ಇಮ್ರಾನ್

ಜಮೀರ್ ಪರಮಾಪ್ತರಾಗಿರುವ ಇಮ್ರಾನ್ ಪಾಷಾಗೆ ಚಾಮರಾಜಪೇಟೆ ಅಸೆಂಬ್ಲಿ ಕ್ಷೇತ್ರದ ಕೆಲವೊಂದು ಸೂಕ್ಷಗಳ ಅರಿವು ಇರುವುದರಿಂದ ಅದು ಮುಂದಿನ ಚುನಾವಣೆಯಲ್ಲಿ ಜಮೀರ್ ಹಣೆಯಲು ಉಪಯೋಗವಾಗುತ್ತದೆ ಎನ್ನುವುದು ಗೌಡ್ರ ಲೆಕ್ಕಾಚಾರ.

H D Deve Gowda celebrates his 85th Birthday in Tirupati on 18th of May
ದೇವೇಗೌಡರನ್ನು ಹಾಡಿಹೊಗಳಿದ ಜಮೀರ್ ಅಹಮದ್

ದೇವೇಗೌಡರನ್ನು ಹಾಡಿಹೊಗಳಿದ ಜಮೀರ್ ಅಹಮದ್

ಕೆಲವೇ ದಿನಗಳ ಹಿಂದೆ ಗೌಡ್ರ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಜಮೀರ್, ಹುಟ್ಟುಹಬ್ಬದಂದು ಗೌಡರ ವಿರುದ್ದ ಏನಾದರೂ ಮಾತನಾಡಿದರೆ ಬಾಯಿಗೆ ಹುಳ ಬೀಳುತ್ತದೆ, ಗೌಡರೇ ನನಗೆಲ್ಲಾ, ಅವರೇ ನನ್ನ ಗುರುಗಳು ಎಂದು ಜಮೀರ್ ಹೇಳಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Surprise move from JDS Supremo HD Devegowda. Is Zameer Ahmed Khan close aid, Corporator from Padarayanapura (Ward No. 135) Imran Pasha is the possible JDS candidate from Chamrajpet consituency for the upcoming Assembly election.
Please Wait while comments are loading...