ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರಿ ಚಳಿ, ಹೆಚ್ಚುತ್ತಿದೆ ಹೃದಯಾಘಾತ, ನೀವು ಹೇಗಿರಬೇಕು?

|
Google Oneindia Kannada News

ಬೆಂಗಳೂರು, ಜನವರಿ 7: ರಾಜ್ಯಾದ್ಯಂತ ಚಳಿ ಹೆಚ್ಚಳವಾಗಿದ್ದು, ಅದರಿಂದ ಹೃದಯಾಘಾತ ಸಂಖ್ಯೆಯೂ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಮೈಕೊರೆಯುವ ಚಳಿಯಿಂದ ಅಸ್ತಮಾ, ಪೊಥರ್ಮಿಯಾ ಹಾಗೂ ಶ್ವಾಸಕೋಶ ಸೋಂಕಿನಂತಹ ಪ್ರಕರಣ ಉಲ್ಬಣಗೊಂಡಿದ್ದು, ಬೆಳಗಿನ ಜಾವ ಹೈದಯಾಘಾತದಿಂದ ಸಂವಿಸುವ ಪ್ರಮಾಣಗಳು ಹೆಚ್ಚಳವಾಗುತ್ತಿವೆ.

ಇದೀಗ ಬೆಂಗಳೂರಿನ ಕನಿಷ್ಠ ಉಷ್ಣಾಂಶ 14ಡಿಗ್ರಿ ಸೆಲ್ಸಿಯಸ್‌ಗೆ ಬಂದು ತಲುಪಿದೆ, ಆದರೆ ಕಳೆದ ಒಂದು ವಾರದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರುಪೇರಾಗುತ್ತಿದೆ. ಕಳೆದ ವಾರ ಕನಿಷ್ಠ ಉಷ್ಣಾಂಶ 8-9 ಡಿಗ್ರಿ ಸೆಲ್ಸಿಯಸ್‌ಗೆ ಬಂದು ತಲುಪಿತ್ತು.

ಹೃದಯ ಆರೋಗ್ಯವಂತ ಆಗಿರಬೇಕಿದ್ದರೆ ಈ 5 ಲೇಖನ ತಪ್ಪದೆ ಓದಬೇಕು ಹೃದಯ ಆರೋಗ್ಯವಂತ ಆಗಿರಬೇಕಿದ್ದರೆ ಈ 5 ಲೇಖನ ತಪ್ಪದೆ ಓದಬೇಕು

ತಡವಾಗಿ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳೇ ಸ್ವತಃ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಕಳೆದ ಏಳು ದಿನಗಳ ತೀವ್ರ ಚಳಿಯಿಂದ ಉಂಟಾಗಿರುವ ಹೃದಯಾಘಾತ ಪ್ರಮಾಣವೂ ಕೂಡ ಹೆಚ್ಚಾಗಿದೆ.

ಎಳೆ ಬಿಸಿಲಿಗೆ ಮೈಯೊಡ್ಡಿ ನಿಲ್ಲಿ

ಎಳೆ ಬಿಸಿಲಿಗೆ ಮೈಯೊಡ್ಡಿ ನಿಲ್ಲಿ

ಹೃದಯ ಸಂಬಂಧಿ ಕಾಯಿಲೆ ಇರುವವರು ಸೇರಿದಂತೆ ಎಲ್ಲರೂ, ಚಳಿಗಾಲದಲ್ಲಿ ಬೆಳಗ್ಗೆ ಸ್ವಲ್ಪ ಹೊತ್ತು ಎಳೆಬಿಸಿಲಿಗೆ ಮೈಯೊಡ್ಡಿ ನಿಲ್ಲಿ, ಚಳಿಗಾಲದ ವಾತಾವರಣದ ಉಷ್ಣಾಂಶ ಹಾಗೂ ಆರ್ದ್ರತೆ ಕೂಡ ತೀವ್ರ ಹೃದಯಾಘಾತಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ. ಡಿ. ಜೀವಸತ್ವ ಕೊರತೆಯೂ ಹೃದಯಾಘಾತವನ್ನುಂಟು ಮಾಡಬಲ್ಲದು.

ತ್ಯಾಜ್ಯ ಸುಡುವುದರಿಂದ ಈ 22 ಕಾಯಿಲೆಗಳು ಬರಬಹುದು ಹುಷಾರ್! ತ್ಯಾಜ್ಯ ಸುಡುವುದರಿಂದ ಈ 22 ಕಾಯಿಲೆಗಳು ಬರಬಹುದು ಹುಷಾರ್!

ರಕ್ತ ಕೊಬ್ಬರಿ ಎಣ್ಣೆಯಂತಿರುತ್ತದೆ

ರಕ್ತ ಕೊಬ್ಬರಿ ಎಣ್ಣೆಯಂತಿರುತ್ತದೆ

ಚಳಿಗಾಲದ ದಿನಗಳಲ್ಲಿ ಕೊಬ್ಬರಿ ಎಣ್ಣೆ ಗಟ್ಟಿಯಾಗುವ ಸಂದರ್ಭ ಸಾಮಾನ್ಯವಾಗಿ ಗಮನಿಸಿರುತ್ತೇವೆ, ಅದೇ ರೀತಿ ಹೃದಯದಲ್ಲೂ ರಕ್ತದ ಕೊಬ್ಬು ಅಧಿಕವಿದ್ದರೆ ಇಂಥಹ ಅಪಾಯ ದೇಹದೊಳಗೂ ಸಂಭವಿಸುವ ಸಾಧ್ಯತೆ ಇರುತ್ತದೆ. ಹೃದಯದ ಹೊರಗೆ ಗೋಡೆಗಳಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ಕಿರುನಾಳಗಳಲ್ಲಿ ರಕ್ತ ಪ್ರವಾಹ ನಿರಂತರವಾಗಿರುತ್ತದೆ. ಕೊಬ್ಬಿನ ಕರಣೆ ಕಟ್ಟಿದರಂದೂ ಸಂಚಾರ ಕಠಿಣವಾಗುತ್ತದೆ. ಆಗಲೂ ಹೃದಯಾಘಾತವಾಗುವ ಸಾಧ್ಯತೆಗಳಿರುತ್ತವೆ.

ಚಳಿಗಾಲದಲ್ಲೇ ಹೃದಯಾಘಾತ ಸಂಭವ ಹೆಚ್ಚು

ಚಳಿಗಾಲದಲ್ಲೇ ಹೃದಯಾಘಾತ ಸಂಭವ ಹೆಚ್ಚು

ಹೆಚ್ಚಿನ ಹೃದಯಾಘಾತಗಳು ಚಳಿಗಾಲದಲ್ಲೇ ಸಂಭವಿಸುತ್ತವೆ. ಅದರಲ್ಲೂ ಬೆಳಗಿನ ಜಾವವೇ ಹೃದಯಾಘಾತವಾಗುವುದು ಹೆಚ್ಚು, ಚಳಿಗಾಲದ ರಾತ್ರಿಗಳಲ್ಲಿ ತಾಪಮಾನ ತುಂಬಾ ಕಡಿಮೆಯಿರುತ್ತದೆ. ಅಪಧಮನಿಗಳು ಪಡೆಸಾಗುತ್ತದೆ. ರಕ್ತದೊತ್ತಡ ಹಾಗೂ ಪ್ರೋಟಿನ್ ಪ್ರಮಾಣ ಏರುತ್ತದೆ. ಇವೆಲ್ಲವುಗಳ ಕ್ರೋಢೀಕರಣದಿಂದ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚು, ಹಾಗೆಯೇ ಈ ಅವಧಿಯಲ್ಲಿ ವೈರಲ್ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುವುದರಿಂದ, ಉಸಿರಾಟ ತೊಂದರೆ ಉಂಟಾಗುತ್ತದೆ.

ಚಳಿ ಅಪಾಯದಿಂದ ಪಾರಾಗುವುದು ಹೇಗೆ?

ಚಳಿ ಅಪಾಯದಿಂದ ಪಾರಾಗುವುದು ಹೇಗೆ?

-ಬೆಚ್ಚಗಿನ ಬಟ್ಟೆಗಳನ್ನು ಧರಿಸಬೇಕು, ಶ್ವಾಸಕೋಶ ಸೋಂಕುಗಳಿಗೆ ಸಕಾಲದಲ್ಲಿ ಸರಿಯಾದ ಚಿಕಿತ್ಸೆಯನ್ನು ತಜ್ಞರ ಸಲಹೆಯಂತೆ ಪಡೆದುಕೊಳ್ಳಬೇಕು.

-ಲಘು ಆಹಾರ ಸೇವಿಸಿ, ಕೊಬ್ಬು, ಮದ್ಯ ಹಾಗೂ ಧೂಮಪಾನ ಮಾಡಬಾರದು
-ಅತಿ ಹೆಚ್ಚಿನ ಬಳಲಿಕೆ, ಉಸಿರಾಡಲ ಸಾಧ್ಯವಾಗದೇ ಇರುವುದು, ಎದೆಯುರಿ ಮುಂತಾದ ಲಕ್ಷಣಗಳು ಬಗ್ಗೆ ಎಚ್ಚರಿಕೆ ವಹಿಸಬೇಕು.

-ತೀರಾ ನಸುಕಿನಲ್ಲಿ ವಾಕಿಂಗ್ ಹೋಗಬೇಡಿ, ಹಾಗೆಂದು ಸುಮ್ಮನೆ ಮಲಗಬಾರದು ಚಳಿಗಾಲದಲ್ಲಿ ಕ್ರಿಯಾಶೀಲನೆ ಶಿಸ್ತಿ ಬದುಕು ಕೂಡ ಅನಿವಾರ್ಯವಾಗುತ್ತದೆ.

English summary
You’ve probably heard that shoveling snow can up your risk of a heart attack. But falling temperatures can increase the odds of a heart attack even if you're not clearing a snow-covered driveway or digging out your car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X