ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಸೌಧದ ಪ್ರಾಂಗಣವೋ ಕಾಂಗ್ರೆಸ್ ಕಚೇರಿಯೋ? ಟ್ವೀಟ್ ತರಾಟೆ

|
Google Oneindia Kannada News

ಬೆಂಗಳೂರು, ಜುಲೈ 11: ವಿಧಾನಸೌಧದ ಪ್ರಾಂಗಣ ಏನಾದರೂ ಕಾಂಗ್ರೆಸ್ ಪಕ್ಷದ ಕಚೇರಿಯೇ? ನಿಮ್ಮಂಥವರು ಸಭಾಧ್ಯಕ್ಷರಾಗಿದ್ದರೂ ಇದೇನು ವಿಧಾನಸೌಧವನ್ನು ಹೀಗೆ ಮಾಡಲು ಬಿಟ್ಟರಲ್ಲಾ ಎಂದು ಕೆ.ಆರ್.ರಮೇಶ್ ಕುಮಾರ್ ರನ್ನು ಪ್ರಶ್ನೆ ಮಾಡಿ ಅಜಿತ್ ಶೆಟ್ಟಿ ಹೆರಂಜೆ ಎಂಬುವವರು ಟ್ವೀಟ್ ಮಾಡಿದ್ದಾರೆ. ಫ್ಲೆಕ್ಸ್, ಬಂಟಿಂಗ್ಸ್ ಗಳ ಫೋಟೋ ಸಹ ಹಾಕಲಾಗಿದೆ.

ವಿಧಾನಸೌಧದ ಪರಿಸರ ಸೌಂದರ್ಯವು ಇಂಥ ಬ್ಯಾನರ್ ಹಾಗೂ ಬಂಟಿಂಗ್ಸ್ ಗಳಿಂದ ಹಾಳಾಗುತ್ತಿದೆ. ಇಂಥವಕ್ಕೆ ಅನುಮತಿ ನೀಡಬೇಡಿ ಎಂದು ಮನವಿ ಕೂಡ ಮಾಡಲಾಗಿದೆ. ಇದು ಹತ್ತು ರೀಟ್ವೀಟ್ ಆಗಿದ್ದು, ಇಪ್ಪತ್ತು ಲೈಕ್ ಕೂಡ ಬಿದ್ದಿದೆ. ಜತೆಗೆ ಹಿಂದೂಸ್ತಾನಿ@ ಶಿವುಗೌಡ ಎಂಬುವವರು ಕಾಮೆಂಟ್ ಕೂಡ ಮಾಡಿದ್ದಾರೆ.

ಬಿಜೆಪಿ ಸೋಲಿಸುವುದೇ ನಮ್ಮ ಗುರಿ : ದಿನೇಶ್ ಗುಂಡೂರಾವ್ ಘೋಷಣೆಬಿಜೆಪಿ ಸೋಲಿಸುವುದೇ ನಮ್ಮ ಗುರಿ : ದಿನೇಶ್ ಗುಂಡೂರಾವ್ ಘೋಷಣೆ

Is Vidhanasoudha become Congress office, angry tweet

ಕಾಂಗ್ರೆಸ್ ನವರು ವಿಧಾನಸೌಧದ ಸುತ್ತಲಿನ ಜಾಗವನ್ನು ದತ್ತು ತಗೊಂಡಿದ್ದಾರೆ. ಹೇಳೋರ್ ಕೇಳೋರ್ ಯಾರು ಇಲ್ಲ. ಫ್ಲೆಕ್ಸ್- ಬ್ಯಾನರ್ ಗಳಿಗೆಲ್ಲ ದಿನೇಶ್ ಗುಂಡೂರಾವ್ ಹಣನ, ಇಲ್ಲ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರದ ನಮ್ಮ ತೆರಿಗೆ ಹಣವ? ಬೊಕ್ಕಸದಲ್ಲಿ ಹಣವಿಲ್ಲ ಎಂದು ಭಿಕ್ಷೆ ಬೇಡುತ್ತಿದ್ದ ಕಾಂಗ್ರೆಸ್ ಬಳಿ ಫ್ಲೆಕ್ಸ್- ಬ್ಯಾನರ್ ಹಾಕಲು ಹಣ ಎಲ್ಲಿತ್ತೋ ಎಂದು ಪ್ರಶ್ನೆ ಮಾಡಲಾಗಿದೆ.

English summary
Photos of flex and buntings of Congress party outside Vidhanasoudha in Bengaluru become viral. And this kind of move questioned by public in twitter to speaker KR Ramesh Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X