ಮತ್ತೊಂದು ಭಾರೀ ಮಳೆಗೆ ಕೊಡೆ ಹಿಡಿದಿರುವ ಬೆಂಗಳೂರು

Posted By:
Subscribe to Oneindia Kannada

ಬೆಂಗಳೂರು, ಜುಲೈ 30 : ಬುಧವಾರ ಮತ್ತು ಗುರುವಾರ ರಾತ್ರಿ ಸುರಿದ ಮಳೆಯಿಂದ ಬಸವಳಿದಿದ್ದ ಬೆಂಗಳೂರಿನ ಜನತೆ, ಒಂದು ದಿನದ ಬಿಡುವಿನ ನಂತರ ಮತ್ತೊಂದು ಅಂಥದೇ ಹೊಡೆತಕ್ಕೆ ಸಿದ್ಧವಾಗಬೇಕಾಗಿದೆ. ಆದರೆ, ಬೆಂಗಳೂರು ಸಿದ್ಧವಾಗಿದೆಯಾ? ಬಿಬಿಎಂಪಿ ಸಿದ್ಧವಾಗಿದೆಯಾ?

ಬೆಂಗಳೂರಿನ ಆಗಸದ ತುಂಬ ಆಷಾಢದ ಕಪ್ಪು ಮೋಡಗಳು ಆವರಿಸಿಕೊಂಡಿವೆ. ಶನಿವಾರ ಮಧ್ಯಾಹ್ನವೇ ಸಂಜೆಯ 6 ಗಂಟೆಯಂತಹ ಕತ್ತಲು ಕವಿದ ವಾತಾವರಣ ಸೃಷ್ಟಿಯಾಗಿದೆ. ಆಗಸಕ್ಕೆ ಸಣ್ಣಾಗಿ ತೂತುಬಿದ್ದಿದ್ದು, ಜಿಟಿಜಿಟಿ ಮಳೆ ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಶುರುವಾಗಿದೆ. [ಬೆಂಗಳೂರಿಗೆ ಮುಂದೇನು ಕಾದಿದೆಯೋ ಭಗವಂತಾ!]

ಬೆಂಗಳೂರು ಹವಾಮಾನ ಇಲಾಖೆಯ ಪ್ರಕಾರ, ಶನಿವಾರ ಕನಿಷ್ಠ ತಾಪಮಾನ 19.5 ಡಿಗ್ರಿ ಇದ್ದು, ಗರಿಷ್ಠ ತಾಪಮಾನ 23.2 ಡಿಗ್ರಿ ಸೆಲ್ಶಿಯಸ್ಸಿಗೆ ಕುಸಿದಿದೆ. ಹಾಗು, ಇನ್ನೆರಡು ದಿನ ವಾತಾವರಣ ಹೀಗೆಯೇ ಇರಲಿದೆ. [ಭಾರೀ ಮಳೆಗೆ ಕೊಳಚೆ ನೀರಿನ ಕೆರೆಯಾದ ಬೆಂಗಳೂರು]

Is Bengaluru ready for another rain havoc?

ಗುರುವಾರ ಬಿದ್ದಂತಹ ಮತ್ತೊಂದು ಮಳೆ ಶನಿವಾರವೂ ಸುರಿದರೆ ಗತಿಯೇನು ಎಂಬಂತಹ ಚಿಂತೆ ಹಲವಾರು ನಾಗರಿಕರಲ್ಲಿ ಮನೆಮಾಡಿದೆ. ಬೆಂಗಳೂರಿಗರಿಗೆ ಇಂತಹ ಮಳೆಗಾಲದ ವಾತಾವರಣ ಕಂಡು ವರ್ಷಗಳೇ ಆಗಿದ್ದವು. ಹಲವರಿಗೆ ಈ ಮಳೆ ಸಂತಸ ಸಂದಿದ್ದರೆ, ಕೆಲವರು ಯಾಕಪ್ಪಾ ಮಳೆ ಬರುತ್ತಿದೆ ಎನ್ನುವಂತಾಗಿದೆ.

ಕೋಡಿಚಿಕ್ಕನಹಳ್ಳಿ, ಬೊಮ್ಮನಹಳ್ಳಿ, ಬನ್ನೇರುಘಟ್ಟ ರಸ್ತೆ, ನಾಯಂಡಹಳ್ಳಿ, ಜಯನಗರ ಬಡಾವಣೆಗಳು ಗುರುವಾರ ರಾತ್ರಿಯ ಮಳೆಗೆ ಥರಥರ ನಡುಗಿದ್ದವು. ಬೊಮ್ಮನಹಳ್ಳಿ ಬಳಿಯಿರುವ ಕೋಡಿಚಕ್ಕನಹಳ್ಳಿಯಂತೂ ಮಳೆನೀರಿನ ಪ್ರವಾಹದಲ್ಲಿ ಕೊಚ್ಚಿಹೋಗಿತ್ತು. ಅಂಥದೇ ಮತ್ತೊಂದು ಮಳೆ ಬಂದರೆ ಗೋವಿಂದಾ ಗೋವಿಂದ. ತುಂಬಿಕೊಂಡಿರುವ ತಾವರೆಕೆರೆ ಮತ್ತೆ ಉಕ್ಕಿಹರಿಯಲು ಕಾದು ಕೂತಿದೆ. [ಬೆಂಗ್ಳೂರಲ್ಲಿ ಇನ್ನೆರಡು ದಿನ ಮಳೆ, ನೀವೇನು ಮಾಡ್ಬೇಕು?]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Is Bengaluru ready for another rain havoc? Wednesday and Thursday rain has battered Bengaluru. People and BBMP is not yet ready to face such an onslaught. Ashadha clouds are hovering over Bengaluru threatening with another heavy shower.
Please Wait while comments are loading...