ಜಿಯೋ ಗ್ರಾಹಕರಿಗೆ ಐಫೋನಿನಲ್ಲಿ ಇಂಟರ್ನೆಟ್ ಉಚಿತ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 10: 4ಜಿ ಇದ್ದರೆ ಸಾಕು, ಐಪಿ ನೆಟ್‍ವರ್ಕ್ ನಲ್ಲಿನ ನೆಕ್ಸ್ಟ್ ಜೆನ್ ಐಫೋನಿಗೆ ಭಾರತದಲ್ಲಿ ರಿಲಯನ್ಸ್ ಜಿಯೋ ಭರ್ಜರಿಯಾಗಿ ಸ್ವಾಗತ ಕೋರಿದೆ.

ಎಲ್ಲಾ ಎಲ್ಲಾ ಹೊಸ ಸುಧಾರಿತ ಕ್ಯಾಮರಾ ಸಿಸ್ಟಮ್, ಧೂಳು ಮತ್ತು ನೀರು ನಿರೋಧಕ ವಿನ್ಯಾಸ, ಸ್ಟೀರಿಯೋ ಸ್ಪೀಕರ್ ಸಿಸ್ಟಮ್ ಮತ್ತು ಯಾವುದೇ ಸ್ಮಾರ್ಟ್‍ಫೋನ್‍ಗಳಲ್ಲೇ ಅತ್ಯಂತ ಶಕ್ತಿಶಾಲಿ ಚಿಪ್ ಆಗಿರುವ ಎ10 ಫ್ಯೂಶನ್ ಚಿಪ್, ಮತ್ತು ಈ ವರೆಗಿನ ಐಫೋನ್ ಹೊಂದಿರದಂತಹ ಅತ್ಯುತ್ತಮ ಬ್ಯಾಟರಿ ಬಾಳ್ವಿಕೆಯನ್ನು ಒದಗಿಸುವ ಅತ್ಯಂತ ಸುಧಾರಿತ ಐಫೋನ್ ಆಗಿರುವ ಐಫೋನ್ 7 ಮತ್ತು ಐಫೋನ್ ಪ್ಲಸ್‍ನ ಆಫರ್ ಅನ್ನು ಜಿಯೋ ಪ್ರಕಟಿಸಿದೆ. [ಫೇಸ್ಬುಕ್, ವಾಟ್ಸಪ್ ದಾಖಲೆ ಮುರಿದ ರಿಲಯನ್ಸ್ ಜಿಯೋ]

ಈ ಹೊಸ ಐಫೋನ್ ಖರೀದಿಸುವ ಎಲ್ಲಾ ಜಿಯೋ ಗ್ರಾಹಕರು ಖರೀದಿಯೊಂದಿಗೆ ಕಾಂಪ್ಲಿಮೆಂಟರಿಯಾಗಿ 12 ತಿಂಗಳುಗಳ ಕಾಲ ಜಿಯೋ ಡಿಜಿಟಲ್ ಸೇವೆಗಳನ್ನು ಸ್ವೀಕರಿಸಲಿದ್ದಾರೆ. ಈ ಆಫರ್ ಎಲ್ಲಾ ರಿಲಯನ್ಸ್ ಡಿಜಿಟಲ್ ಸ್ಟೋರ್ಸ್ ಗಳು ಮತ್ತು ಆಯ್ದ ಆಪಲ್ಲ್ ಪ್ರೀಮಿಯಂ ರಿಸೆಲ್ಲರ್ ಗಳು (ಎಎಆರ್)ಗಳಲ್ಲಿ ನಡೆಸುವ ಹೊಸ ಐಫೋನ್ ಖರೀದಿಗಳ ಮೇಲೆ ಲಭ್ಯವಿರಲಿದೆ.

ಐಫೋನ್ ನ ನೈಜ ಶಕ್ತಿಯನ್ನು ಈಗ ಎಲ್ಲಾ ಭಾರತೀಯ ಐಫೋನ್ ಬಳಕೆದಾರರು ಜಿಯೋ ನೆಟ್‍ವರ್ಕ್‍ನಲ್ಲಿ ಅನುಭವಿಸಬಹುದಾಗಿದೆ" ಎಂದು ಮ್ಯಾಥ್ಯೂ ಒಮ್ಮನ್, ಜಿಯೋದ ಅಧ್ಯಕ್ಷರು ಹೇಳಿದ್ದಾರೆ.

 ಐಫೋನ್ ಗ್ರಾಹಕರಿಗಾಗಿ ಜಿಯೋ

ಐಫೋನ್ ಗ್ರಾಹಕರಿಗಾಗಿ ಜಿಯೋ

ಹೊಸ ಐಫೋನ್ 7, ಐಫೋನ್ 7 ಪ್ಲಸ್, ಐಫೋನ್ 6ಎಸ್, ಐಫೋನ್ 6ಎಸ್ ಪ್ಲಸ್ ಅಥವಾ ಐಫೋನ್ ಎಸ್‍ಇಯನ್ನು ರಿಲಯನ್ಸ್ ಡಿಜಿಟಲ್ ಮತ್ತು ಆಯ್ದ ಎಪಿಆರ್ ಮತ್ತು ಎಎಆರ್ ನಲ್ಲಿ ಖರೀದಿಸುವ ಪ್ರತಿ ಗ್ರಾಹಕರು 18,0000 ರೂ. ಮೌಲ್ಯದ ಜಿಯೋ ಡಿಜಿಟಲ್ ಸೇವೆಗಳನ್ನು 12 ತಿಂಗಳ ಕಾಲ ಕಾಂಪ್ಲಿಮೆಂಟರಿಯಾಗಿ ಪಡೆಯಲಿದ್ದಾರೆ.

ಏನೇನು ಸೌಲಭ್ಯ ಸಿಗಲಿದೆ?

ಏನೇನು ಸೌಲಭ್ಯ ಸಿಗಲಿದೆ?

ಇದು ಅನಿಯಮಿತ ಸ್ಥಳೀಯ, ಎಸ್ಟಿಡಿ ಮತ್ತು ರಾಷ್ಟ್ರೀಯ ರೋಮಿಂಗ್ ಧ್ವನಿ, ಅನಿಯಮಿತ ಟೆಕ್ಸ್ಟ್, 20 ಜಿಬಿಯಷ್ಟು 4ಜಿ ಡಾಟಾ, 40 ಜಿಬಿಯಷ್ಟು ವೈಫೈ ಡಾಟಾ ಮತ್ತು ಅನಿಯಮಿತ ರಾತ್ರಿ 4ಜಿ ಡಾಟಾ, ಪ್ರೀಮಿಯಂ ಜಿಯೋ ಅಪ್ಲಿಕೇಶನ್‍ಗಳ ಅನಿಯಮಿತ ಚಂದಾ ಸೌಲಭ್ಯಗಳನ್ನು ಒಳಗೊಂಡಿರಲಿದೆ.

ಉದ್ಯಮಗಳಿಗೆ ಅದ್ಭುತ ಮೌಲ್ಯ ಯೋಜನೆ

ಉದ್ಯಮಗಳಿಗೆ ಅದ್ಭುತ ಮೌಲ್ಯ ಯೋಜನೆ

ಎಲ್ಲಾ ಉದ್ಯಮ ಗ್ರಾಹಕರು ಹೊಸ ಐಫೋನ್ 7, ಐಫೋನ್ 7 ಪ್ಲಸ್, ಐಫೋನ್ 6ಎಸ್, ಐಫೋನ್ 6ಎಸ್ ಪ್ಲಸ್ ಮತ್ತು ಐಫೋನ್ ಎಸ್‍ಇ ಮೇಲೆ ವಿಶೇಷ ರಿಯಾಯ್ತಿ ಪಡೆಯಬಹುದಾಗಿದೆ. ಜತೆಗೆ ವಿಶೇಷ ಜಿಯೋ ಟ್ಯಾರಿಫ್ ಪ್ಲಾನ್ ಕೂಡಾ ಇರಲಿದೆ. www.jio.com/apple ನಲ್ಲಿ ವಿವರಗಳು ಲಭ್ಯವಿದೆ. ಮೇಲಿನ ಎರಡೂ ಆಫರ್‍ಗಳನ್ನು ನಿಮಗಾಗಿ ರಿಲಯನ್ಸ್ ರಿಟೈಲ್ ನೀಡುತ್ತಿದೆ.

ರಿಲಯನ್ಸ್ ಸ್ಟೋರ್ ನಲ್ಲಿ ಐಫೋನ್ ಪ್ರೀ ಆರ್ಡರ್ ಲಭ್ಯ

ರಿಲಯನ್ಸ್ ಸ್ಟೋರ್ ನಲ್ಲಿ ಐಫೋನ್ ಪ್ರೀ ಆರ್ಡರ್ ಲಭ್ಯ

ಐಫೋನ್ 7 ಮತ್ತು ಐಫೋನ್ 7 ಪ್ಲಸ್, ಐಒಎಸ್ 10 ನಿಂದ ಚಾಲಿತವಾಗಿದ್ದು, ಇದು ವಿಶ್ವದಲ್ಲೇ ಅತ್ಯಂತ ಸುಧಾರಿತ ಮೊಬೈಲ್ ಆಪರೇಟಿಂಗ್ ಸಿಸ್ಟಮ್ಸ್ ನ್ನು ಬಿಡುಗಡೆಯಾಗಿದೆ. ಗ್ರಾಹಕರು ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಅನ್ನು ಈಗ ಪೂರ್ವ ಆರ್ಡರ್ ಮಾಡಬಹುದಾಗಿದೆ. ಇವೆರಡೂ ರಿಲಯನ್ಸ್ ಡಿಜಿಟಲ್ ಸ್ಟೋರ್ಸ್‍ನಲ್ಲಿ ಮತ್ತು www.jio.com/apple. ನಲ್ಲಿ ಆನ್‍ಲೈನ್‍ನಲ್ಲಿ ಲಭ್ಯ ಇವೆ. ಐಫೋನ್ ಕುರಿತ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ: www.apple.com/in/iphone/

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
All Jio customers purchasing a new iPhone will receive 12 months of Jio Digital Services complimentary with purchase. This offer will be available for new iPhone purchases across all Reliance Digital stores and select Apple Premium Resellers (APR) and Apple Authorized Resellers (AAR).
Please Wait while comments are loading...