ಉಬರ್ ರೆಫರ್ ಮಾಡಿ, ಉಚಿತ ರೈಡ್ ಪಡೆಯಿರಿ

Posted By:
Subscribe to Oneindia Kannada

ಬೆಂಗಳೂರು, ಜನವರಿ, 25: ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದೆಯಾ? ಅದರಲ್ಲಿ ನಗರದಲ್ಲಿ ಓಡಾಡಲು ಸೇವೆ ನೀಡುತ್ತಿರುವ ಉಬರ್ ಅಪ್ಲಿಕೇಶನ್ ಇದೆಯಾ? ಇದ್ದರೆ ಕುಳಿತಲ್ಲೇ 250 ರು. ಸಂಪಾದನೆ ಮಾಡಬಹುದು.

ಹೇಗೆ ಅಂತಿರಾ?....ನಿಮ್ಮ ಸ್ನೇಹಿತರಿಗೆ ಉಬರ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಲು ರೆಫರೆನ್ಸ್ ನೀಡಿ. ಆಗ ತನ್ನಿಂದ ತಾನೇ 250 ರು. ನಿಮ್ಮ ಅಕೌಂಟಿಗೆ ಬಂದು ಬೀಳುತ್ತದೆ. ನೀವು ರೆಫರೆನ್ಸ್ ಮಾಡಿದ ತಕ್ಷಣ 250 ರು. ಮೊತ್ತದ ಉಚಿತ ರೈಡ್ ನಿಮ್ಮದಾಗುತ್ತದೆ.[ಬೆಂಗಳೂರು ನಾಗರಿಕರಿಗೆ ಹೊಸ ಟ್ಯಾಕ್ಸಿ ಸೇವೆ ಲಭ್ಯ]

Uber taxi

ಅಂತರಾಷ್ಟ್ರೀಯ ಸಾರಿಗೆ ವ್ಯವಸ್ಥೆಯಲ್ಲಿ ತನ್ನ ಸೇವೆಯನ್ನು ಇನ್ನಷ್ಟು ವಿಸ್ತರಿಸುವ ಅಭಿಲಾಷೆ ಹೊಂದಿರುವ ಉಬರ್ ಟ್ಯಾಕ್ಸಿ ಕಂಪನಿಯು ತನ್ನ ಬಳಕೆದಾರರಿಗೆ ಒಂದು ಆಫರ್ ನೀಡಿದೆ. ಆದರೆ ನೀವು ರೆಫರ್ ಮಾಡಿದ ವ್ಯಕ್ತಿ ಉಬರ್ ಆಪ್ ಡೌನ್ ಲೋಡ್ ಮಾಡಿ ಬಳಕೆ ಮಾಡಿದ್ದಲ್ಲಿ ಮಾತ್ರ ಈ ಆಫರ್ ನ ಉಪಯೋಗ ಲಭಿಸಲಿದೆ.[ಉಬರ್ ವಿರುದ್ಧ ತೊಡೆತಟ್ಟಿದ ಒಲಾ ತಂತ್ರ ಕೇಳಿದ್ರೇ ದಂಗು ಬೀಳ್ತಿರಾ!]

ಈಗಾಗಲೇ ಉಬರ್ ಸೇವೆ 60 ರಾಷ್ಟ್ರದ 360 ನಗರಗಳಲ್ಲಿ ಲಭ್ಯವಿದ್ದು, ಉಬರ್ ನಲ್ಲಿ ಹೋಗಲು ಬಯಸುವವರು ಕ್ರೆಡಿಟ್ , ಡೆಬಿಟ್ ಕಾರ್ಡ್, ಪೇಟಿಯಂ, ಏರ್ ಟೆಲ್ ಹಣ ಹೀಗೆ ನಾನಾ ಮಾರ್ಗಗಳ ಮೂಲಕ ಪ್ರಯಾಣ ಬಿಲ್ ಪಾವತಿ ಮಾಡಲು ಅವಕಾಶವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Invite your friends to get a free ride up to 250, this option give by Uber taxi company. This operational footprint in over 360 cities across 60 countries, Uber is now in the streets of Bengaluru, Mysuru and Mangaluru.
Please Wait while comments are loading...