ಅಡಿಕೆ ಚಹಾಗೆ ವರ್ಷದ ಸಂಭ್ರಮ, ಜ.24ಕ್ಕೆ ಪತ್ರಿಕಾಗೋಷ್ಠಿ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಜನವರಿ 23: ವಿಶ್ವದ ಮೊದಲ ಅಡಿಕೆ ಚಹಾ ಬಿಡುಗಡೆಯಾಗಿ ವರ್ಷದ ಸಂಭ್ರಮ. ಗ್ರೀನ್ ರೆಮಿಡೀಸ್ ಅವರ ಅರೇಕಾ ಟೀ ಉತ್ಪಾದನೆಯಿಂದ ರೈತರಿಗೂ ಅನುಕೂಲವಾಗಿದೆ. ಅಡಿಕೆ ಬಳಕೆಯ ಹೊಸ ಸಾಧ್ಯತೆಯನ್ನು ಪರಿಚಯಿಸಿದ ಕಾರಣಕ್ಕೆ ಕಂಪನಿ ಕೂಡ ಮೆಚ್ಚುಗೆಗೆ ಕಾರಣವಾಗಿದೆ.

ಅಡಿಕೆ ಚಹಾ ಉತ್ಪನ್ನವನ್ನು ಬಿಡುಗಡೆ ಮಾಡಿ, ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಜನವರಿ 24 (ಮಂಗಳವಾರ) ಬೆಳಗ್ಗೆ 11.30ಕ್ಕೆ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಅಡಿಕೆ ಯುವ ಸಂಶೋಧಕ ನಿವೇದನ್ ನೆಂಪೆ ಸಹ ಉಪಸ್ಥಿತರಿರುತ್ತಾರೆ.

Invitation for Areca tea 1st year Anniversary press meet

ದಿನದಿಂದ ದಿನಕ್ಕೆ ಹಲವು ಸವಾಲುಗಳನ್ನು ಎದುರಿಸುತ್ತಿರುವ ಅಡಿಕೆ ಬೆಳೆಗಾರರಿಗೆ 'ಅಡಿಕೆ ಚಹಾ' ಒಂದು ಆಶಾಕಿರಣದಂತಿದೆ. ಮಾರುಕಟ್ಟೆಯ ಬೆಲೆ ಏರಿಳಿತಗಳ ಸುಳಿಗೆ ಸಿಲುಕಿ ಕಂಗಾಲಾಗಿರುವ ಬೆಳೆಗಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂಥ ಸಾಹಸಕ್ಕೆ ಕೈ ಹಾಕಿದೆ ಗ್ರೀನ್ ರೆಮಿಡೀಸ್ ಕಂಪನಿ.

ಈ ಒಂದು ವರ್ಷದ ತಮ್ಮ ಅನುಭವ, ಹೋರಾಟ ಮತ್ತಿತರ ವಿವರಗಳನ್ನು ಹಂಚಿಕೊಳ್ಳುವ ಕಾರಣಕ್ಕೆ ಪತ್ರಿಕಾಗೋಷ್ಠಿ ಕರೆಯಲಾಗಿದೆ. ಹೆಚ್ಚಿನ ವಿವರಗಳಿಗೆ ಅಥವಾ ಮಾಹಿತಿಗೆ ಮೊಬೈಲ್ ಫೋನ್ ಸಂಖ್ಯೆ 7829193195.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Press Meet organized by Areca Tea on the occasion of their 1st year Anniversary at Press Culb, Bengaluru on 24th Jan 2017 at 11.30am.
Please Wait while comments are loading...