ಇನ್ವೆಸ್ಟ್‌ ಕರ್ನಾಟಕ –2016 : ವಾಹನ ಸಂಚಾರದ ವಿವರಗಳು

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 02 : ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ 'ಇನ್ವೆಸ್ಟ್‌ ಕರ್ನಾಟಕ -2016'ರ ಹಿನ್ನಲೆಯಲ್ಲಿ ಅರಮನೆ ಮೈದಾನದ ಪ್ರವೇಶ, ನಿರ್ಗಮನ ಮತ್ತು ನಿಲುಗಡೆಗೆ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ.

ಫೆಬ್ರವರಿ 3ರ ಬುಧವಾರದಿಂದ ಫೆ.5ರ ತನಕ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ 'ಇನ್ವೆಸ್ಟ್‌ ಕರ್ನಾಟಕ -2016'ರ ಸಮಾವೇಶ ನಡೆಯಲಿದೆ. [ಇನ್ ವೆಸ್ಟ್ ಕರ್ನಾಟಕ ವೆಬ್ ಸೈಟ್]

ಸಮಾವೇಶ ನಡೆಯುವ ದಿನಗಳಂದು ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟಟೆಯ ವರೆಗೆ ರಮಣ ಮಹರ್ಷಿ ರಸ್ತೆ, ಚಕ್ರವರ್ತಿ ಲೇಔಟ್ ರಸ್ತೆ, ಜಯರಾಮನ್ ರಸ್ತೆ ಮತ್ತು ಜಯಮಹಲ್ ರಸ್ತೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಬಳಸದೇ, ಪರ್ಯಾಯ ಮಾರ್ಗ ಬಳಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. [ಇನ್ ವೆಸ್ಟ್ ಕರ್ನಾಟಕ ಮೊಬೈಲ್ ಅಪ್ಲಿಕೇಶನ್]

invest karnataka

* ಪಾಸು ಹೊಂದಿರುವ ಗಣ್ಯ ವ್ಯಕ್ತಿಗಳು ಮತ್ತು ಅತಿಗಣ್ಯ ವ್ಯಕ್ತಿಗಳ ವಾಹನಗಳು ಅರಮನೆಯ ಮಖ್ಯ ಪ್ರವೇಶದ ಗೇಟ್ ನಂ.1 ರ ಮೂಲಕ ಪ್ರವೇಶಿಸಿ ಸಮಾವೇಶದ ಸ್ಥಳಕ್ಕೆ ಹೋಗಿ ಗಣ್ಯರನ್ನು ಇಳಿಸಿದ ಮೇಲೆ ವಾಹನಗಳನ್ನು ತೆಗೆದುಕೊಂಡು ಹೋಗಿ ಪಾರ್ಕಿಂಗ್ -ಎ ಸ್ಥಳದಲ್ಲಿ ನಿಲುಗಡೆ ಮಾಡಬೇಕು. [ಬಸ್ ಪ್ರವೇಶ ನಿರ್ಬಂಧಕ್ಕೆ ತಡೆ ಇಲ್ಲ, ಪರ್ಯಾಯ ಏನು?]

* ವಾಹನ ಪಾಸ್ ಹೊಂದಿರುವ ಎಲ್ಲಾ ಗಣ್ಯ / ಹಿರಿಯ ಸರ್ಕಾರಿ ಅಧಿಕಾರಿಗಳ ವಾಹನಗಳು ಅರಮನೆಯ ಮಖ್ಯ ದ್ವಾರದ ಗೇಟ್ ನಂ. 2 ರ ಮೂಲಕ ಪ್ರವೇಶಿಸಿ ಟೆನ್ನಿಸ್ ಪೆವಿಲಿಯನ್ ರಸ್ತೆಗೆ ಮುಂದುವರೆದು ಸಾಗಿ ಸಮಾವೇಶದ ಸ್ಥಳಕ್ಕೆ ತಲುಪಲು ಸಿದ್ಧಪಡಿಸಿರುವ ಅಡ್ಡ ರಸ್ತೆಯಲ್ಲಿ ಇಳಿಸಿದ ಬಳಿಕ ವಾಹನಗಳನ್ನು ಪಾರ್ಕಿಂಗ್-ಬಿ ಸ್ಥಳದಲ್ಲಿ ನಿಲ್ಲಿಸಬೇಕು.

* ಸಮಾವೇಶದಲ್ಲಿ ಭಾಗವಹಿಸುವ ಎಲ್ಲಾ ಪ್ರತಿನಿಧಿಗಳು ಅರಮನೆ ಮುಖ್ಯ ಪ್ರವೇಶದ ಗೇಟ್ ನಂ. 1 ರ ಮೂಲಕ ಪ್ರವೇಶ ಪಡೆದು ಎಡ ತಿರುವು ಪಡೆದು ಸ್ಕಾರ್ಫಿಯೋ ಸೆಕ್ಯೂರಿಟಿ ಕಡೆಗೆ ಸಾಗಿ ಪ್ರತಿನಿಧಿಗಳಿಗಾಗಿಯೇ ಕಲ್ಪಿಸಿರುವ ಪಾರ್ಕಿಂಗ್-ಡಿ ಸ್ಥಳದಲ್ಲಿ ವಾಹನ ನಿಲ್ಲಿಸಬೇಕು. ನಿಲುಗಡೆ ಮಾಡಿದ ವಾಹನಗಳಿಂದ ಇಳಿದು ನೋಂದಣಿ ಸ್ಥಳಕ್ಕೆ ಪ್ರವೇಶ ಪಡೆಯಲು ಪಾರ್ಕಿಂಗ್-ಡಿ ಸ್ಥಳದಲ್ಲಿಯೇ ಇರುವ ಹಗುರ ಎಲೆಕ್ಟ್ರಿಕ್ ಗಾಡಿಗಳ (buggies) ಸೇವೆಯನ್ನು ಪಡೆಯಬೇಕು.

* ಮಲ್ಲೇಶ್ವರಂ ಮತ್ತು ರಮಣ ಮಹರ್ಷಿ ರಸ್ತೆ ಕಡೆಯಿಂದ ಬರುವ ಪ್ರತಿನಿಧಿಗಳು ಅರಮನೆ ಮೈದಾನದೊಳಕ್ಕೆ ಪ್ರವೇಶ ಪಡೆಯಲು ಗೇಟ್ ನಂ. 3 ಕಾಮಧೇನು ಗೇಟ್ ಮೂಲಕ ಪ್ರವೇಶಿಸಿ ಪಾರ್ಕಿಂಗ್-ಡಿ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡಿ, ಹಗುರ ಎಲೆಕ್ಟ್ರಿಕ್ ಗಾಡಿಗಳ ಮೂಲಕ ಸಮಾವೇಶಕ್ಕೆ ತೆರಳಬಹುದು.

* ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಬ್ಬಾಳ ಮಾರ್ಗವಾಗಿ ನೇರವಾಗಿ ಬರುವ ಪ್ರತಿನಿಧಿಗಳು ಮೇಖ್ರಿ ವೃತ್ತದ ಮೇಲ್ಸೇತುವೆಗೆ ತಲುಪಲು ಇರುವ ಸರ್ವೀಸ್ ರಸ್ತೆಯಲ್ಲಿ ಸಾಗಿ ಮೇಖ್ರಿ ವೃತ್ತದಲ್ಲಿ ಜಯಮಹಲ್ ರಸ್ತೆಗೆ ಎಡ ತಿರುವು ಪಡೆದು ಸಾಗಿ ಗೇಟ್ ನಂ.4 ಮಾವಿನಕಾಯಿ ಮಂಡಿ ರಸ್ತೆಯ ಮೂಲಕ ಅರಮನೆ ಮೈದಾನಕ್ಕೆ ಪ್ರವೇಶ ಪಡೆದು ಪಾರ್ಕಿಂಗ್-ಡಿ ಸ್ಥಳದಲ್ಲಿ ವಾಹನ ನಿಲ್ಲಿಸಬೇಕು.

* ಇನ್‌ವೆಸ್ಟ್ ಕರ್ನಾಟಕ-2016 ರ ಸಮಾವೇಶಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ನಿಯೋಜನೆಗೊಂಡ ಎಲ್ಲಾ ಅಧಿಕಾರಿಗಳು ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಬೆಳಿಗ್ಗೆ 8.45 ಗಂಟೆಯೊಳಗೆ ಅರಮನೆ ಮೈದಾನದೊಳಕ್ಕೆ ಪ್ರವೇಶವನ್ನು ಪಡೆಯುವುದು.

* ಎಲ್ಲಾ ಪ್ರದರ್ಶಕ ವಾಹನಗಳು ಜಯಮಹಲ್ ರಸ್ತೆ ಅಥವಾ ರಮಣ ಮಹರ್ಷಿ ರಸ್ತೆಯಲ್ಲಿರುವ ಪ್ರವೇಶ ದ್ವಾರಗಳಿಂದ ಬೆಳಗ್ಗೆ 8ಗಂಟೆಯವೊಳಗೆ ಅರಮನೆ ಮೈದಾನದೊಳಕ್ಕೆ ಪ್ರವೇಶ ಪಡೆಯುವುದು.

* ಸಮಾವೇಶದಲ್ಲಿ ಪಾಲ್ಗೊಳ್ಳುವ ಎಲ್ಲಾ ಪ್ರತಿನಿಧಿಗಳು ಬೆಳಗ್ಗೆ 9.15ರೊಳಗೆ ಅರಮನೆ ಮೈದಾನಕ್ಕೆ ಪ್ರವೇಶವನ್ನು ಪಡೆಯುವುದು.

* ಹೊರ ಪ್ರಸಾರದಲ್ಲಿ ತೊಡಗಿಸಿಕೊಳ್ಳುವ ಮಾಧ್ಯಮದ ವಾಹನಗಳಿಗೆ ಸಮಾವೇಶಕ್ಕೆ ಹೊಂದಿಕೊಂಡಂತೆ ಇರುವ ಸ್ಕಾರ್ಫಿಯೋ ಸೆಕ್ಯೂರಿಟಿ ಆಫೀಸ್ ಬಳಿ ಸಜ್ಜುಗೊಳಿಸಿರುವ ಪಾರ್ಕಿಂಗ್-ಓ ಸ್ಥಳದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

* ಎಲ್ಲಾ ವಾಹನಗಳು ಗೇಟ್ ನಂ. 3 ಮತ್ತು ಗೇಟ್ ನಂ. 4ರ ಮೂಲಕವೇ ಅರಮನೆ ಮೈದಾನದಿಂದ ನಿರ್ಗಮಿಸುವುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Traffic restrictions for Invest Karnataka (@investkarnataka) 2016 : Invest Karnataka global business meet 2016 to be held at the palace grounds, Bengaluru from February 3 to 5.
Please Wait while comments are loading...