ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಸಹಿಷ್ಣುತೆ ಬಗ್ಗೆ ಸೊಲ್ಲೆತ್ತಿದ್ದ ಅಮೀರ್ ಗೆ ಬಹಿರಂಗ ಪತ್ರ

By Mahesh
|
Google Oneindia Kannada News

ಬೆಂಗಳೂರು, ನ.24: ದೇಶದಲ್ಲಿ ಅಸಹಿಷ್ಣುತೆ, ಅಸುರಕ್ಷತೆ ಹೆಚ್ಚುತ್ತಿದೆ ಹೀಗಾಗಿ ದೇಶವನ್ನು ತೊರೆಯಬಾರದೇಕೆ ಎಂದು ಪತ್ನಿ ಕಿರಣ್ ಅವರು ಕೇಳಿದ ಪ್ರಶ್ನೆಯನ್ನು ಎಲ್ಲರ ಮುಂದಿಟ್ಟ್ ಅಮೀರ್ ಸಂಸಾರದ ಗುಟ್ಟು ವ್ಯಾಧಿ ರಟ್ಟು ಎಂಬ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಬಹುತೇಕ ಅಮೀರ್ ಖಾನ್ ಅವರ ವಿರುದ್ಧ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. ಇಲ್ಲೊಂದು ಬಹಿರಂಗ ಪತ್ರ ಇದೆ ನೋಡಿ...

ಸಾಮಾಜಿಕ ಜಾಲ ತಾಣಗಳಲ್ಲಿ ಅಮೀರ್ ಪರ -ವಿರೋಧದ ಟ್ವೀಟ್ಸ್, ಸ್ಟೇಟಸ್ ಅಪ್ಡೇಟ್ಸ್, ಮೀಮ್ಸ್, ಟ್ರಾಲ್ಸ್ ಎಲ್ಲೆಡೆ ಅಮೀರ್ ದರ್ಶನವಾಗುತ್ತದೆ. ರಾಮನಾಥ್ ಗೋಯೆಂಕಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಆಮಿರ್ ಖಾನ್ ಅವರು ಮಾತನಾಡುತ್ತಾ ತಾವು ಪತ್ನಿ ಕಿರಣ್ ರಾವ್ ಅವರೊಂದಿಗೆ ಚರ್ಚೆ ನಡೆಸುತ್ತಿದ್ದ ವೇಳೆ ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದ್ದು, ಅಸುರಕ್ಷತೆಯ ಆತಂಕ ಕಾಡುತ್ತಿದೆ, ತಾವು ಭಾರತ ದೇಶವನ್ನು ತೊರೆಯಬಾರದೇಕೆ ಎಂದು ಪ್ರಶ್ನಿಸಿದ್ದರು. ಕಿರಣ್ ಅವರು ಮಕ್ಕಳ ಭದ್ರತೆಯ ದೃಷ್ಟಿಯಿಂದ ತಾವು ವಿದೇಶದಲ್ಲಿ ನೆಲೆಸಬಾರದೇಕೆ ಎಂದು ನನ್ನನ್ನು ಪ್ರಶ್ನಿಸಿದ್ದರು ಎಂದಿದ್ದರು. [ಶಾರುಖ್, ಸಲ್ಮಾನ್ ನಂತರ ಅಮೀರ್ ಗೆ ಅಸಹಿಷ್ಣುತೆ ಬಿಸಿ ಏಕೆ?]

ಇದಕ್ಕೆ ಪ್ರತಿಕ್ರಿಯೆ ರೂಪವಾಗಿ ಮೈವಾಯ್ಸ್. ಒಪಿಇಂಡಿಯಾ,ಕಾಂನಲ್ಲಿ ಶುಭಂ ಅಗರವಾಲ್ ಬರೆದ ಪತ್ರದ ಸಾರಾಂಶ ಇಲ್ಲಿದೆ:

ನೀವು ಯಾವ ಧರ್ಮಕ್ಕೆ ಸೇರಿದ್ದೀರಿ ಎಂಬುದು ನನಗೆ ಮುಖ್ಯವಲ್ಲ. ಜಾತಿ ಧರ್ಮಕ್ಕಿಂತ ಭಾರತವೇ ಮುಖ್ಯ ಎಂದರೆ ಮಾತ್ರ ನಾನು ನಿಮ್ಮೊಟ್ಟಿಗೆ ಮಾತನಾಡಬಲ್ಲೆ. ಬಾಲಿವುಡ್ ಮಂದಿ ನೀಡುವ ಹೇಳಿಕೆ ಬಗ್ಗೆ ನನಗೆ ಅಂಥಾ ಆಸಕ್ತಿ ಇಲ್ಲ. ಅದು ಭಾರತಕ್ಕೆ ಸಂಬಂಧಿಸಿದ್ದರೆ ಮಾತ್ರ ನಾನು ಪ್ರತಿಕ್ರಿಯಿಸುತ್ತೇನೆ. ಈಗಲೂ ಅಷ್ಟೇ ಎಂಬ ಮುನ್ನಡಿಯೊಂದಿಗೆ ಪತ್ರ ಸಾಗುತ್ತದೆ.[ಎಲ್ಲಿಯ ಶಾಶ್ವತಿ, ಎಲ್ಲಿಯ ಕಿರಣ್; ಎಲ್ಲಿಯ ಅಕ್ಷಯ್, ಎಲ್ಲಿಯ ಅಮೀರ್!]

ಅಮೀರ್, ನಿಮ್ಮ ನಂಬಿಕೆಗೆ ಆಧಾರವಾದರೂ ಏನು?

ಅಮೀರ್, ನಿಮ್ಮ ನಂಬಿಕೆಗೆ ಆಧಾರವಾದರೂ ಏನು?

ಅಮೀರ್ ಖಾನ್ ಅವರ ಹೇಳಿಕೆ ಆಮೇಲೆ, ನೀವು ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಗೆ ನಂಬಿದ್ದೀರಿ? ಮಾಧ್ಯಮಗಳ ವರದಿ ಆಧಾರವೇ? ಅಖ್ಲಾಕ್ ಹತ್ಯೆ ಬಗ್ಗೆ ಕೋರ್ಟ್ ಇನ್ನೂ ಆದೇಶ ನೀಡಿಲ್ಲ. ಹೀಗಾಗಿ ಮಾಧ್ಯಮವಾಗಲಿ, ರಾಜಕಾರಣಿಗಳಾಗಲಿ ಕೋರ್ಟಿಗಿಂತ ಮೇಲ್ಮಟ್ಟದಲ್ಲಿಲ್ಲ. ಜಸ್ಲೀನ್ ಕೌರ್ ಹಾಗೂ ಸರಬ್ಜೀತ್ ಸಿಂಗ್ ಕೇಸ್ ಉದಾಹರಣೆ ತೆಗೆದುಕೊಂಡರೆ, ಅರವಿಂದ್ ಕೇಜ್ರಿವಾಲ್ ಅವರು ಜಸ್ಲೀನ್ ಗೆ ಧನ್ಯವಾದ ಅರ್ಪಿಸಿದ್ದರು. ಟೈಮ್ಸ್ ನೌ ನಂತರ ಸರಬ್ಜಿತ್ ಗೆ ಕ್ಷಮೆಯಾಚಿಸುವಂತೆ ಬಲವಂತ ಮಾಡಿತ್ತು. [ಆಧಾರಕ್ಕಾಗಿ ವಿಡಿಯೋ ನೋಡಿ]

ನಿಮಗೆ ಪರಿಸ್ಥಿತಿಯ ಬಗ್ಗೆ ಸರಿಯಾದ ಅರಿವು ಇಲ್ಲ

ನಿಮಗೆ ಪರಿಸ್ಥಿತಿಯ ಬಗ್ಗೆ ಸರಿಯಾದ ಅರಿವು ಇಲ್ಲ

ಪೊಲೀಸ್ ವರದಿ ನಂತರದ ಸತ್ಯಗಳನ್ನು ಮಾಧ್ಯಮಗಳು ಎಂದಿಗೂ ವರದಿ ಮಾಡುವುದಿಲ್ಲ. ಕ್ಷಮೆಯಾಚಿಸುವುದು ಕನಸಿನ ಮಾತಾಗುತ್ತದೆ. ನಿಮ್ಮ ಉದಾಹರಣೆಯಲ್ಲೇ ತೆಗೆದುಕೊಂಡರೆ, ವಿವಾದಿತ ಎನ್ನಬಹುದಾದ ಹೇಳಿಕೆ ನೀಡಿದ ಬಳಿಕ ನಿಮಗೆ ಕೇಳಿದ ಪ್ರಶ್ನೆ ಹೀಗಿತ್ತು: ನಿಮಗೆ ಮಾಧ್ಯಮಗಳ ಬಗ್ಗೆ ಸಂಪೂರ್ಣ ನಂಬಿಕೆಯಿದೆಯೇ? ಇದಕ್ಕೆ ನೀವು ಭಾಗಶಃ ನಂಬುತ್ತೇನೆ ಎಂದು ಉತ್ತರಿಸಿದ್ದೀರಿ. ಹೀಗಾಗಿ ನಿಮಗೆ ಪರಿಸ್ಥಿತಿಯ ಬಗ್ಗೆ ಸರಿಯಾದ ಅರಿವು ಇಲ್ಲ.

ಅಸಹಿಷ್ಣುತೆ ಬಿಸಿ ತಟ್ಟುವುದಿಲ್ಲವೇ?

ಅಸಹಿಷ್ಣುತೆ ಬಿಸಿ ತಟ್ಟುವುದಿಲ್ಲವೇ?

ದೇಶದಲ್ಲಿನ ಅತ್ಯಾಚಾರ, ಗಲಭೆ, ನಕಲಿ ಎನ್ ಕೌಂಟರ್,ವಿದೇಶದಲ್ಲಿ ರಾಜಕಾರಣಿಗಳು ಭಾರತವನ್ನು ತೆಗೆಳುವುದು, ಭಾರತವನ್ನು ಶತ್ರು ಎಂದು ಹೇಳಿದಾಗ ನಿಮಗೆ ಅಸಹಿಷ್ಣುತೆ ಬಿಸಿ ತಟ್ಟುವುದಿಲ್ಲವೇ? ನಿಮ್ಮ ಲಾಜಿಕ್ ಪ್ರಕಾರವೇ ನೋಡಿದರೆ ಇಡೀ ವಿಶ್ವದಲ್ಲಿ ಅಮೆರಿಕ ಅತ್ಯಂತ ಅಸಹಿಷ್ಣುತೆಯಿಂದ ಕೂಡಿದ ದೇಶ ಎನಿಸಲಿದೆ.

ನಿಮ್ಮ ಅಸಹಿಷ್ಣುತೆ ಇವರ ಮೇಲಿರಲಿ

ನಿಮ್ಮ ಅಸಹಿಷ್ಣುತೆ ಇವರ ಮೇಲಿರಲಿ

ನಿಮ್ಮ ಅಸಹಿಷ್ಣುತೆಯನ್ನು ಮುಲಾಯಂ ಸಿಂಗ್ ಯಾದವ್, ಅಜಂ ಖಾನ್, ಮಣಿ ಶಂಕರ್ ಅಯ್ಯರ್,ಸಲ್ಮಾನ್ ಖುರ್ಷಿದ್, ಆದಿತ್ಯಾನಾಥ್, ಸಾಧ್ವಿ ಪ್ರಾಚಿ ಅವರ ಹೇಳಿಕೆ ವಿರುದ್ಧ ತೋರಿಸಿ, ಭಾರತದ ಮೇಲಲ್ಲ. ಭಾರತಕ್ಕೆ ಅಪಮಾನವಾಗುವ ಹೇಳಿಕೆ ನೀಡಿ ನೀವು ಇವರ ಸಾಲಿಗೆ ಸೇರಬೇಡಿ. ನಿಮ್ಮ ಮಾತಿಗೆ ಬೆಲೆ ಇದೆ. ಇಲ್ಲದಿದ್ದರೆ ಈ ಪತ್ರ ಬರೆಯುವ ಅಗತ್ಯವಿರಲಿಲ್ಲ.

ಸಾಹಿತಿಗಳ ಪ್ರಶಸ್ತಿ ವಾಪಸ್ ವಿಷ್ಯದಲ್ಲೂ ಹೀಗೆ ಮಾಡಿದ್ರಿ

ಸಾಹಿತಿಗಳ ಪ್ರಶಸ್ತಿ ವಾಪಸ್ ವಿಷ್ಯದಲ್ಲೂ ಹೀಗೆ ಮಾಡಿದ್ರಿ

ಪ್ರಶಸ್ತಿ ವಾಪಸ್ ಮಾಡುವವರ ಪರ ಮಾತನಾಡಿ ಮತ್ತೊಮ್ಮೆ ಬಣ್ಣಗೆಡಿಸಿಕೊಂಡಿದ್ದೀರಿ. ಅನುಪಮ್ ಖೇರ್, ವಿವೇಕ್ ಅಗ್ನಿಹೋತ್ರಿ, ರವೀನಾ ಟಂಡನ್ ಹಾಗೂ ಇತರರು ಏಕೆ ಪ್ರಶಸ್ತಿ ವಾಪಸ್ ಮಾಡುವವರ ವಿರುದ್ಧ ದನಿ ಎತ್ತಿದರು ಎಂಬುದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳಿ.

ಇಷ್ಟಕ್ಕೂ ನೀವು ಯಾವ ದೇಶಕ್ಕೆ ಹೋಗಲು ಬಯಸುತ್ತೀರಿ

ಇಷ್ಟಕ್ಕೂ ನೀವು ಯಾವ ದೇಶಕ್ಕೆ ಹೋಗಲು ಬಯಸುತ್ತೀರಿ

* ಯುಎಸ್ ಎ (ಶಾಲಾ ಮಕ್ಕಳೇ ಶೂಟೌಟ್ ಮಾಡುತ್ತಾರೆ, ವರ್ಣಬೇಧ ನೀತಿ ಇನ್ನೂ ಇದೆ)
* ಆಸ್ಟ್ರೇಲಿಯಾ ( ಭಾರತೀಯ ಮೇಲೆ ದಾಳಿ)
* ಶ್ರೀಲಂಕಾ (ತಮಿಳರ ಮೇಲೆ ದಾಳಿ)
* ಫ್ರಾನ್ಸ್ (ಇರಾಕಿ ಉಗ್ರರ ಟಾರ್ಗೆಟ್)
* ಯುಕೆ (ಉಗ್ರರ ಟಾರ್ಗೆಟ್, ಅಸಹಿಷ್ಣುತೆಗೆ ಮೂಲವಾಗುತ್ತಿದೆ)
* ನೇಪಾಳ (ಭೂಕಂಪವೇ ಸಾಕು ನೆಮ್ಮದಿ ಕೆಡಿಸಲು)
* ಸಿಂಗಪುರ (ಕ್ರೈಂ ದರ ಕಡಿಮೆ ಇದ್ದರೂ ಭಾರತದಂತೆ ವಾಕ್ ಸ್ವಾತಂತ್ರ್ಯ ಇಲ್ಲ)
* ದಕ್ಷಿಣ ಆಫ್ರಿಕಾ ( ವರ್ಣ ಬೇಧ ನೀತಿ ಇಲ್ಲದಿದ್ದರೂ ಕ್ರೈಂ ದರ ಅಧಿಕ)

ಬಹಿರಂಗದ ಪೂರ್ಣಪಾಠ ಇದೆ

ಬಹಿರಂಗದ ಪೂರ್ಣಪಾಠ ಇದೆ

ನಿಮಗೆ ಹಾಗೆ ನೋಡುತ್ತಾ ಹೋದರೆ ಕೊನೆಗೆ ಅಂಟಾರ್ಟಿಕಾ ಅಥವಾ ಗ್ರೀನ್ ಲ್ಯಾಂಡ್ ಮಾತ್ರ ವಾಸಿಸಲು ಯೋಗ್ಯ ಎನಿಸುತ್ತದೆ. ಅಮೆರಿಕ ಸೇರಿದಂತೆ ಅಸಹಿಷ್ಣುತೆಯಿಂದ ಬಳಲುವ ದೇಶಗಳಲ್ಲೂ ಇಂಥ ಹೇಳಿಕೆ ವಿರುದ್ಧ ಬರುವ ಪರ ವಿರುದ್ಧ ಹೇಳಿಕೆ, ಟೀಕೆಗಳನ್ನು ಮುಕ್ತವಾಗಿ ಸ್ವೀಕರಿಸಲಾಗುತ್ತದೆ. ನೀವು ಹೀಗೆ ಮಾಡುತ್ತೀರಿ ಎಂಬ ಭರವಸೆ ಇದೆ.ಬಹಿರಂಗ ಪತ್ರದ ಪೂರ್ಣಪಾಠ ಓದಲು ಇಲ್ಲಿ ಕ್ಲಿಕ್ ಮಾಡಿ

English summary
Just a day after his controversial interview, Bollywood actor Aamir Khan faced criticism and this time he was slammed by his colleagues in Bollywood. Here is an Open letter to Aamir Khan by Shubham Agarwal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X