ಬೆಂಗಳೂರು: ಹಗ್ಗದ ಮೇಲೆ ಯೋಗ ಮಾಡಿದ ಮಕ್ಕಳು

By: ಬೆಂಗಳೂರು ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಜೂನ್, 21: ಇಲ್ಲಿ ಹಗ್ಗದ ಮೇಲೆ ಯೋಗ ಪ್ರದರ್ಶನ ಮಾಡಿ ದಾಖಲೆ ಮಾಡಿದ್ದಾರೆ. ವೈಟ್ ಫೀಲ್ಡ್ ವಿಎನ್ ಎಸ್ ಕಲ್ಯಾಣ ಮಂಟಪದಲ್ಲಿ ಮಾತಾ ಫೌಂಡೇಶನ್ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನದ ಕಾರ್ಯಕ್ರಮದಲ್ಲಿ ಮಕ್ಕಳು ನಡೆಸಿಕೊಟ್ಟ ಕಾರ್ಯಕ್ರಮ ಗಮನ ಸೆಳೆಯಿತು.

ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ರೋಪ್ ಯೋಗವನ್ನು ಜನಪ್ರಿಯಗೊಳಿಸುವ ಅಗತ್ಯವಿದೆ. ಇದು ಪತಂಜಲಿ ಯೋಗ ಸೂತ್ರಗಳಲ್ಲಿ ಹೇಳಲಾದಂತೆ ಮೃದುತ್ವ ಮತ್ತು ಸ್ಥಿರತೆಯೊಂದಿಗೆ ಸೂಕ್ತ ರೀತಿಯಲ್ಲಿ ಸಮೀಕರಿಸುತ್ತದೆ. ರೋಪ್ ಯೋಗ ಸ್ನಾಯುಗಳನ್ನು ಹೊಸ ರೀತಿಯಲ್ಲಿ ಗಟ್ಟಿಗೊಳಿಸುತ್ತದೆ.[ಹುಬ್ಬಳ್ಳಿ-ಧಾರವಾಡ, ಗದಗದಲ್ಲಿ ವಿಶ್ವ ಯೋಗ ದಿನ]

yoga

ಈ ವಿಭಿನ್ನ ಭಂಗಿಗಳನ್ನು ಪ್ರಯತ್ನಿಸಲು ಹಿಂಜರಿಯುವವರಿಗೆ ಅಥವಾ ಸಮತೋಲನದ ಭಂಗಿಗಳನ್ನು ಬಳಸುವವರಿಗೆ ಹಗ್ಗಗಳು ಮತ್ತು ಗೋಡೆ ಅತ್ಯಂತ ಹೆಚ್ಚು ಭದ್ರತೆ ನೀಡುತ್ತದೆ. ಹಗ್ಗದ ಯೋಗ ಅಭ್ಯಾಸ ಮಾಡುವವರು ಅವರ ಜೀವನದಲ್ಲಿ ಒತ್ತಡಗಳನ್ನು ಕಡಿಮೆ ಮಾಡಿಕೊಂಡಿದ್ದಾರೆ ಎಂದರು.[ಯಾವ ರೋಗಗಳಿಗೆ ಯಾವ ಯೋಗಾಸನ ಉಪಯುಕ್ತ]

-
-
-
-
-
-


ಆಯುರ್ವೇದ ಪರಿಣಿತ ಡಾ.ಸಂಜೀವ್ ನಾಯಕ್ ಮಾತನಾಡಿ, ಹಗ್ಗದ ಯೋಗ ಬಿಕೆಎಸ್ ಅಯ್ಯಂಗಾರ್ ಅವರಿಂದ ಸಂಸ್ಥಾಪಿಸಲ್ಪಟ್ಟ ಯೋಗದ ಮಾತೃ ಸ್ವರೂಪವಾಗಿದೆ. ಅವರೇ ಯೋಗವನ್ನು ಅಭ್ಯಾಸ ಮಾಡಲು ಭಯ ಪಡುವವರಿಗಾಗಿ ಇದನ್ನು ಜನಪ್ರಿಯಗೊಳಿಸಿದ್ದಾರೆ. ಇದರಲ್ಲಿ ಹಗ್ಗದ ಬಿಗಿ ಭದ್ರತೆ ಇರುತ್ತದೆ. ಇದರಿಂದ ಕೈಗಳು, ಅಂಗೈ ಮತ್ತು ತಲೆಗಳ ಮೇಲೆ ಹೆಚ್ಚು ತೂಕ ಇರುವುದಿಲ್ಲ ಎಂದು ವಿವರಿಸಿದರು.

ಯೋಗ ಎನ್ನುವುದು 5000 ವರ್ಷ ಹಳೆಯ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ರೂಢಿಯಾಗಿದ್ದು ಭಾರತದಲ್ಲಿ ಜನಿಸಿದೆ. ಯೋಗ ದೇಹ ಮತ್ತು ಮನಸ್ಸು ಎರಡನ್ನೂ ಪರಿವರ್ತಿಸುತ್ತದೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: All over the world observed International Yoga Day on 21 June 2016. Bengaluru Whitefield VANS auditorium witnessed rope yoga.
Please Wait while comments are loading...