ಬೆಂಗಳೂರಿನ 2,000 ಸ್ಥಳಗಳಲ್ಲಿ ಯೋಗ ದಿನಾಚಾರಣೆ

Subscribe to Oneindia Kannada

ಬೆಂಗಳೂರು, ಜೂನ್ 15: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಜೂನ್ 21, 2017 ರಂದು ಬೆಂಗಳೂರಿನಾದ್ಯಂತ ಯೋಗದಿನವನ್ನು ಆಚರಿಸಲು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ ನಿರ್ಧರಿಸಿದೆ.

ಇದಕ್ಕಾಗಿ ಸಾರ್ವಜನಿಕ ಯೋಗಾಸಕ್ತರು ಈ ಯೋಗ ದಿನದಂದು ಸ್ಥಳೀಯವಾಗಿ ನಡೆಯಲಿರುವ ಯೋಗ ದಿನಾಚರಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಬೇಕೆಂದು ಯೋಗ ಸಮಿತಿಯವರು ಕೋರಿಕೊಂಡಿದ್ದಾರೆ.

International Yoga Day celebration in 2,000 places across Bengaluru

ಈಗಾಗಲೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಲು ಸ್ಥಾನೀಯ ಸಮಿತಿಗಳನ್ನು ರಚಿಸಲಾಗಿದೆ. ಈಗಾಗಲೇ ಯೋಗ ದಿನಾಚರಣೆಯ ಸ್ಥಳಗಳು, ಕಾರ್ಯಕ್ರಮದ ವೇಳಾಪಟ್ಟಿಗಳನ್ನು ನಿಶ್ಚಿತಗೊಳಿಸಲಾಗಿದೆ.

ಬೆಂಗಳೂರಿನಾದ್ಯಂತ 2000ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಪ್ರತೀ ವಾರ್ಡ್‍ಗಳಲ್ಲೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಯೋಗ ದಿನದಂದು ತಮ್ಮ ಮನೆಯ ಸಮೀಪ ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.

ಸರಳ ಯೋಗಾಸನಗಳನ್ನು ಕಲಿಸಿಕೊಡಬಲ್ಲ ಆಸಕ್ತರು ಯೋಗ ಶಿಕ್ಷಕರಾಗಿ ಪಾಲ್ಗೊಳ್ಳಬಹುದು. ಸಾರ್ವಜನಿಕರು ಸ್ಥಳೀಯ ಶಾಲಾ-ಕಾಲೇಜು ಆವರಣ, ಕಲ್ಯಾಣ ಮಂಟಪ, ಖಾಲಿ ನಿವೇಶನ, ಪಾರ್ಕ್/ಮೈದಾನ ಇತ್ಯಾದಿ ಸ್ಥಳಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಆಯೋಜಿಸಲು ಆಯೋಜಕರಾಗಿ ಪಾಲ್ಗೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9591810302, 9980000993

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The International Yoga Day Celebration Committee to observe Yoga day all across Bengaluru on June 21st, 2017 on the occasion of International Yoga Day.
Please Wait while comments are loading...