ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೆನ್ನೈನಲ್ಲಿ ಅಂತಾರಾಷ್ಟ್ರೀಯ ರೇಲ್ ಕೋಚ್‌ ಎಕ್ಸ್‌ಪೋ

By Nayana
|
Google Oneindia Kannada News

ಬೆಂಗಳೂರು, ಮೇ 16: ರೈಲ್ವೆ ಪ್ಯಾಸೆಂಜರ್‌ ಕೋಚ್‌ ತಂತ್ರಜ್ಞಾನದ ಕುರಿತು ಇಂಟೆಗ್ರಲ್ ಕೋಚ್‌ ಫ್ಯಾಕ್ಟರಿ ಭಾರತದಲ್ಲೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ರೇಲ್‌ ಕೋಚ್ ಎಕ್ಸ್‌ಪೋ 2018 ಆಯೋಜಿಸಿದೆ. ಮೇ 17ರಂದು 3 ದಿನ ಚೆನ್ನೈನಲ್ಲಿ ಪ್ರದರ್ಶನ ನಡೆಯಲಿದೆ.

ಚೆನ್ನೈನ ಆರ್‌ಪಿಎಫ್‌ ಪರೇಡ್‌ ಗ್ರೌಂಡ್‌ನಲ್ಲಿ ನಡೆಯಲಿರುವ ಎಕ್ಸ್‌ಪೋದಲ್ಲಿ 10 ದೇಶಗಳ 100ಕ್ಕೂ ಅಧಿಕ ಪ್ರದರ್ಶಕರು ಭಾಗವಹಿಸಲಿದ್ದಾರೆ. ಭಾರತೀಯ ಕೈಗಾರಿಕೆಗಳ ಒಕ್ಕೂಟ ಹಾಗೂ ರೈಟ್ಸ್‌ ಲಿ. ಸಹಯೋಗದಲ್ಲಿ ಭಾರತೀಯ ರೈಲ್ವೆಯ ಭಾಗವಾಗಿರುವ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿ ಈ ಎಕ್ಸ್‌ಪೋ ಆಯೋಜಿಸುತ್ತಿದ್ದು, ತಮಿಳುನಾಡು ರಾಜ್ಯಪಾಲರು ಉದ್ಘಾಟಿಸಲಿದ್ದಾರೆ. ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್, ಕೈಗಾರಿಕಾ ಸಚಿವರು, ರೈಲ್ವೆ ಮಂಡಳಿ ಅಧ್ಯಕ್ಷರು ಭಾಗವಹಿಸಲಿದ್ದಾರೆ.

ಬೆಂಗಳೂರು-ಚೆನ್ನೈ ರೈಲ್ವೆ ವೇಗ ಹೆಚ್ಚಳಕ್ಕೆ ಚೀನಾ ನೆರವುಬೆಂಗಳೂರು-ಚೆನ್ನೈ ರೈಲ್ವೆ ವೇಗ ಹೆಚ್ಚಳಕ್ಕೆ ಚೀನಾ ನೆರವು

ಎಕ್ಸ್‌ಪೋದಲ್ಲಿ ಏನೇನಿರುತ್ತೆ?ಎಕ್ಸ್ಪೋ ಭಾರತದಲ್ಲೇ ಮೊದ ಬಾರಿಗೆ ವಿಶೇಷ, ಆಕರ್ಷಕ ರೈಲು ಬೋಗಿಗಳು ಮತ್ತು ರೈಲು ಎಂಜಿನ್‌ ಗಳ ಪ್ರದರ್ಶನವಿರಲಿದೆ. ಹೊಸ ತಂತ್ರಜ್ಞಾನಗಳ ಬಗ್ಗೆ ಕಾರ್ಯಾಗಾರ, ವಿಚಾರಸಂಕಿರಣಗಳು, ಗಂಟೆಗೆ 160 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲ ರೈಲು ಪ್ರದರ್ಶನವಿರಲಿದೆ.

International Rail Expo in Chennai

ಸಾರ್ವಜನಿಕರಿಗೆ ಮೇ 17 ಮತ್ತು 18ರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರದರ್ಶನ ವೀಕ್ಷಿಸಲು ಅವಕಾಶವಿದೆ ಎಂದು ಚೆನ್ನೈನ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿ ಅಧಿಕಾರಿಗಳು ತಿಳಿಸಿದ್ದಾರೆ.

English summary
Indian railways is organising international rail expo which will explore rail technology and new innovations in railways sector on May 18 in Chennai, railways said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X