3 ದಿನ ಅಂತಾರಾಷ್ಟ್ರೀಯ ಮಹಿಳಾ ಜಾನಪದ ನೃತ್ಯ ಸಂಭ್ರಮ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಜನವರಿ, 22: ಲಂಬಾಣಿ ನೃತ್ಯದಿಂದ ಹಿಡಿದು ಪ್ರಪಂಚದ ನಾನಾ ಜಾನಪದ ನೃತ್ಯ ವೈಭವ ನೋಡುವ ಅವಕಾಶವನ್ನು ಇಂಟರ್ ನ್ಯಾಷನಲ್ ಆರ್ಟ್ಸ್ ಆಂಡ್ ಕಲ್ಚರಲ್ ಫೌಂಡೇಶನ್ ಮಾಡಿಕೊಟ್ಟಿದ್ದು, ಕಾರ್ಯಕ್ರಮವು ಜನವರಿ 22,23,24 ಮೂರು ದಿನಗಳ ಬೆಂಗಳೂರಿನ ಕೆಲವು ಕಡೆ ನಡೆಯಲಿದೆ.

ಮಹಿಳಾ ಜಾನಪದ ಲೋಕ ಹಬ್ಬದಲ್ಲಿ ಪ್ರಪಂಚದ ನಾನಾ ಮೂಲೆಯ ಜಾನಪದ ನೃತ್ಯಗಳಿಗೆ ಮಹಿಳಾಮಣಿಗಳು ಹೆಜ್ಜೆ ಹಾಕಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಕೆ.ಎ ದಯಾನಂದ ಅವರು ಜನವರಿ 22ರ ಸಂಜೆ 6 ಗಂಟೆಗೆ ಜಾನಪದ ಸಂಸ್ಕೃತಿ ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಚಲನಚಿತ್ರ ನಟಿ ಹಾಗೂ ನೃತ್ಯಗಾರ್ತಿ ಲಕ್ಷ್ಮಿ ಗೋಪಾಲಸ್ವಾಮಿ ಭಾಗವಹಿಸಲಿದ್ದಾರೆ.[ಜಾನಪದ ಲೋಕದ ಮೇರು ನೃತ್ಯ ಹುಲಿವೇಷದ ಸುತ್ತ]

Folk dance

ಅಂತರಾಷ್ಟ್ರೀಯ ಸಂಗೀತ ಮತ್ತು ನೃತ್ಯ ಹಬ್ಬದ ಕೆಲವು ವಿವರ ಹೀಗಿದೆ:

* ಜನವರಿ 22 ರಂದು ಸಂಜೆ 6 ಗಂಟೆಗೆ ಜಾನಪದ ನೃತ್ಯ ಕಾರ್ಯಕ್ರಮ ಉದ್ಘಾಟನೆ
* ಜನವರಿ 23 ರಂದು ಜಾನಪದ ಸಂಗೀತ ಕಾರ್ಯಕ್ರಮ - ಕಲಾಗ್ರಾಮ ನಾಗರಬಾವಿ, ಸಂಜೆ 5.30ಕ್ಕೆ
* ಜನವರಿ 24 ರಂದು ನೃತ್ಯ ಮತ್ತು ಸಂಗೀತ ಕಾರ್ಯಕ್ರಮ - ಕಲಾಗ್ರಾಮ ನಾಗರಬಾವಿ, ಸಂಜೆ 5.30ಕ್ಕೆ[ಶಾಸ್ತ್ರೀಯ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ ವಿಧಿವಶ]

ಯಾವ ಯಾವ ದೇಶದ ನೃತ್ಯಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ?

ಭಾರತ, ಪರ್ಶಿಯನ್ ಗಲ್ಫ್ ರಾಷ್ಟ್ರಗಳು, ಈಜಿಪ್ಟ್, ಲಿಬಿಯಾ, ಟರ್ಕಿ, ಟ್ಯೂನಿಷಿಯಾ, ಇರಾನ್ ಹೀಗೆ ನಾನಾ ದೇಶದ ಜಾನಪದ ನೃತ್ಯಗಳು ಪ್ರದರ್ಶನ ಗೊಳ್ಳಲಿವೆ. ಹೆಚ್ಚಿನ ಮಾಹಿತಿಗಾಗಿ ಶ್ರೀವತ್ಸ 9845106655 www.intlarts.org ಸಂಪರ್ಕಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
International Arts and Cultural Foundation organize All Women World Folk Arts Festival in Bengaluru on January 22, 23, 24th. This folk dance inaugrates by K A Dayananda KAS Director, Department of Kannada & Culture Government of Karnataka.
Please Wait while comments are loading...