ಚಿತ್ರಕಲಾ ಪರಿಷತ್ತಿನಲ್ಲಿ ಅಂತಾರಾಷ್ಟ್ರೀಯ ಕಲಾವಿದರ ಶಿಬಿರ

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 09: ಹೊರರಾಷ್ಟ್ರಗಳಲ್ಲಿರುವ ನೂತನ ಕಲಾ ಮಾಧ್ಯಮಗಳ ಬಳಕೆಯನ್ನು ಅರಿಯುವುದು ಹಾಗೂ ಪ್ರಚಲಿತದಲ್ಲಿ ಇಲ್ಲದ ಕಲೆಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಕರ್ನಾಟಕ ಚಿತ್ರಕಲಾ ಪರಿಷತ್ತು ಜನವರಿ 17 ರಿಂದ25 ರವರೆಗೆ ಅಂತಾರಾಷ್ಟ್ರೀಯ ಕಲಾವಿದರ ಶಿಬಿರವನ್ನು ಹಮ್ಮಿಕೊಂಡಿದೆ.

ಪ್ರೊ. ಎಂ.ಎಸ್. ನಂಜುಂಡರಾವ್ ಅವರ ಅವಧಿಯಲ್ಲಿ ಸುಮಾರು 30 ವರ್ಷಗಳ ಹಿಂದೆ ಸಾರ್ಕ್ ದೇಶಗಳ ಕಲಾವಿದರ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಕಲಾವಿದರ ಶಿಬಿರ ನಡೆಸಲಾಗುತ್ತಿದೆ.

ಬಣ್ಣದ ಚಿತ್ರಗಳ ಸಂತೆಯಲ್ಲಿ ಮಿಂದೆದ್ದ ಉದ್ಯಾನ ನಗರಿ

50 ಕಲಾವಿದರ ಸಮಾಗಮ: ಅಮೆರಿಕಾ, ಮಾರಿಷಿಯಸ್, ವಿಯಟ್ನಾಂ, ಶ್ರೀಲಂಕಾ ಸೇರಿದಂತೆ ಏಳು ರಾಷ್ಟ್ರಗಳಿಂದ 10 ಖ್ಯಾತ ಕಲಾವಿದ ಉಪನ್ಯಾಸಕರು, ಚಿತ್ರಕಲಾ ಪರಿಷತ್ತಿನ ಸುಮಾರು 32 ಮಂದಿ ಸೇರಿದಂತೆ ಒಟ್ಟಾರೆ 50 ಕ್ಕೂ ಹೆಚ್ಚು ಕಲಾವಿದರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

International Artists camp from Jan 17 at CKP

ಶಿಬಿರದಲ್ಲಿ ನಡೆಯಲಿರುವ ಚಟುವಟಿಕೆಗಳು: ನಿರಂತರ ಒಂಭತ್ತು ದಿನಗಳ ಶಿಬಿರದಲ್ಲಿ ಕಲಾವಿದರು ಪ್ರತಿದಿನ ಬೆಳಗ್ಗೆ ಕಲಾಗ್ಯಾಲರಿ, ಸ್ಟುಡಿಯೋಗಳಲ್ಲಿ ವೈವಿಧ್ಯಮಯ ಚಿತ್ರಗಳನ್ನು ಬಿಡಿಸುವ ಕಾರ್ಯದಲ್ಲಿ ತೊಡಗುವರು. ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ವಿದ್ಯಾರ್ಥಿಮತ್ತು ಸಾರ್ವಜನಿಕರೊಂದಿಗೆ ಮುಕ್ತ ಸಂವಾದ ನಡೆಸಲಿದ್ದಾರೆ. ಇದಲ್ಲದೆ ಶಿಬಿರದ ಎರಡು ದಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ಪ್ರಷಲಿತದಲ್ಲಿರುವ ಹೊಸತನದ ಕಲಾಮಾಧ್ಯಮ ಮತ್ತು ತಂತ್ರಜ್ಞಾನದ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಲಿದೆ.

ಸರ್ಕಾರದಿಂದ 50 ಲಕ್ಷ ಬಿಡುಗಡೆ: ಶಿಬಿರಕ್ಕೆ ಬರುವ ಅನ್ಯ ರಾಷ್ಟ್ರಗಳ ಕಲಾವಿದರಿಗೆ ವಿಮಾನ ಪ್ರಯಾಣ, ಅವರಿಗೆ ಸಂಗಲು ವ್ಯವಸ್ಥೆ, ಶಿಬಿರದ ವೇಳೆ ಬೇಲೂರು-ಹಳೆಬೀಡು ಶ್ರವಣಬೆಳಗೊಳಕ್ಕೆ ಪ್ರವಾಸ ಕರೆದೊಯ್ದು ಅಲ್ಲಿನ ಶಿಲ್ಪಕಲಾ ಸಂಪತ್ತನ್ನು ಕಲಾವಿದರಿಗೆ ಪರಿಚಯಿಸುವುಉದ ಇತ್ಯಾದಿಗಳ ವೆಚ್ಚಕ್ಕಾಗಿ ಸರ್ಕಾರ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After Three decades, Karnataka Chitra Kala Parishat is organising International Artists camp from January 17 to 25. Exploring the contemporary fine arts and endangered status of ancient is theme of the camp.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ